ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮೊದಲ ವಾರದ ಕ್ಯಾಪ್ಟನ್ ಆಗಿ ಮಂಜು ಪಾವಗಡ ಆಯ್ಕೆಯಾಗಿದ್ದಾರೆ. ಅತಿ ಹೆಚ್ಚು ಟಾಸ್ಕ್ ಗಳಲ್ಲಿ ವಿಜೇತರಾದ ಚಾಲೆಂಜರ್ಸ್ ತಂಡದ ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್ ಆಡಿದರು. ಅದೃಷ್ಟದ ಆಟವಾಗಿದ್ದರಿಂದ ಮಂಜು ಪಾವಗಡ ಗೆದ್ದರು. ಹಿಂದಿನ ದಿನ ಬಿಗ್ ಬಾಸ್ ನೀಡಿದ್ದ ಕುರ್ಚಿ ಪಾಲಿಟಿಕ್ಸ್ ಟಾಸ್ಕ್ನಲ್ಲಿ 38 ಗಂಟೆಗೂ ಹೆಚ್ಚಿನ ಸಮಯ ಕುಳಿತುಕೊಳ್ಳುವ ಮೂಲಕ ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಅವರನ್ನು ಸೋಲಿಸಿದ್ದರು.
ಮಹಿಳಾ ಸ್ಪರ್ಧಿಗಳು ಕ್ಯಾಪ್ಟನ್ ಏಕೆ ಆಗುತ್ತಿಲ್ಲ? ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಟ ಸುದೀಪ್ ಮಹಿಳಾ ಸ್ಪರ್ಧಿಗಳು ಏಕೆ ಕ್ಯಾಪ್ಟನ್ ಆಗಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಮಹಿಳಾ ಸ್ಪರ್ಧಿಗಳು ತಮ್ಮದೇ ಆದ ಸಮಜಾಯಿಷಿ ನೀಡಿದರು. ಆದರೆ, ಸುದೀಪ್ ಅದನ್ನು ನಿರಾಕರಿಸಿದರು.
ಶಮಂತ್ ಕೈಗೆ ಚೊಂಬು : ಸೆಕೆಂಡ್ ಇನ್ನಿಂಗ್ಸ್ನಲ್ಲಿ ಶಮಂತ್ ಹೆಚ್ಚು ಸೇಫ್ ಗೇಮ್ ಆಡುತ್ತಿದ್ದಾರೆ. ಇದು ಮನೆಯ ಸದಸ್ಯರಲ್ಲಿ ಅನುಮಾನ ಹಾಗೂ ನಿರಾಕರಣೆ ಭಾವನೆ ಮೂಡಿದೆ.
ಮನೆಯ ಸ್ಪರ್ಧಿಗಳಿಗೆ ಒಂದು ಚೊಂಬನ್ನು ನೀಡಲಾಗಿತ್ತು. ಆ ಚೊಂಬು ಕೊನೆಯದಾಗಿ ಯಾರ ಬಳಿ ಉಳಿಯುತ್ತದೆಯೋ ಅವರು ಇಡೀ ವಾರ ತಮ್ಮೊಂದಿಗೆ ಅದನ್ನು ಎಲ್ಲಿ ಹೋದರೂ ತೆಗೆದುಕೊಂಡು ಹೋಗಬೇಕು ಅನ್ನೋದನ್ನು ಸುದೀಪ್ ಹೇಳಿದ್ದರು.
ಮೊದಲು ಆ ಚೊಂಬು ರಘು ಅವರಿಗೆ ಎತ್ತಿಕೊಳ್ಳುವಂತೆ ಸೂಚಿಸಿದ್ದರು, ರಘು, ಶಮಂತ್ಗೆ ನೀಡಿದ್ದರು. ಕಾರಣ ಶಮಂತ್ ಇನ್ನು ಸಹ ಎಲ್ಲರನ್ನು ಒಲೈಸುತ್ತಾ ಒಳ್ಳೆಯವನಾಗುವ ವರ್ತನೆ ಬಿಟ್ಟಿಲ್ಲ. ಈ ಕಾರಣಕ್ಕೆ ಶಮಂತ್ಗೆ ಚೊಂಬು ಕೊಡುತ್ತಿರುವುದಾಗಿ ರಘು ಕಾರಣ ಕೊಟ್ಟಿದ್ದರು. ಅಂತಿಮವಾಗಿ ಶಮಂತ್ ಕೈಗೆ ಚೊಂಬು ಬಂದು ತಲುಪಿದೆ.
ಶನಿವಾರ ಬಿಗ್ ಹೌಸ್ನಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ. ಇಂದು ಕಿಚ್ಚನ ಪಂಚಾಯಿತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಓರ್ವ ಸದಸ್ಯ ಮನೆಯಿಂದ ಹೊರಹೋಗಲಿದ್ದಾರೆ.