ETV Bharat / sitara

ಮಜಾ ಟಾಕೀಸ್​​​​​​​ ಮುಂದಿನ ಸಂಚಿಕೆಯಲ್ಲಿ ಬಿಗ್​ ಬಾಸ್​​​​ -7 ಸ್ಪರ್ಧಿಗಳು - Kannada realty show

ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್​​​ ಬಾಸ್​​ 7 ರ ಸ್ಪರ್ಧಿಗಳು ಇದೀಗ ಮತ್ತೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಒಟ್ಟಾಗಿ ಸೇರುತ್ತಿದ್ದಾರೆ. ದೊಡ್ಮನೆಯ ಸುಂದರ ಅನುಭವಗಳನ್ನು ಈ ಕಾರ್ಯಕ್ರಮದಲ್ಲಿ ಎಲ್ಲರೂ ಮೆಲುಕು ಹಾಕಲಿದ್ದಾರೆ.

Big boss contestants in Maja talkies
ಮಜಾ ಟಾಕೀಸ್​​​​​​​
author img

By

Published : Sep 23, 2020, 3:58 PM IST

ಬಿಗ್ ಬಾಸ್ ಸೀಸನ್ 7 ಸ್ಪರ್ಧಿಗಳು ಮತ್ತೆ ಒಂದಾಗಿದ್ದಾರೆ. ಅರೆ, ಅವರೇನಾದ್ರೂ ಟ್ರಿಪ್ ಹೋಗುತ್ತಿದ್ದಾರಾ ಎಂದು ಕನ್ಫ್ಯೂಸ್​ ಆಗಬೇಡಿ. ಅವರೆಲ್ಲಾ ಜೊತೆಯಾಗಿರುವುದು ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಮಜಾ ಟಾಕೀಸ್​​ ವೇದಿಕೆ ಮೇಲೆ.

ಮಜಾ ಟಾಕೀಸ್​​​​​​​ ಮುಂದಿನ ಸಂಚಿಕೆ ಪ್ರೋಮೋ

ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಗಳಾದ ಶೈನ್ ಶೆಟ್ಟಿ , ವಾಸುಕಿ ವೈಭವ್ , ಭೂಮಿ ಶೆಟ್ಟಿ , ದೀಪಿಕಾ ದಾಸ್ ,ಪ್ರಿಯಾಂಕಾ ಶಿವಣ್ಣ ಹಾಗೂ ಹರೀಶ್ ಈ ವಾರದ ಮಜಾ ಟಾಕೀಸ್ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಾಸ್ ಸೀಸನ್ 7 ಗ್ರ್ಯಾಂಡ್​​​​​​ ಫಿನಾಲೆ ನಂತರ ಮೊದಲ ಬಾರಿಗೆ ಸ್ಪರ್ಧಿಗಳು ಪರದೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ನಂತರ ಎಲ್ಲೂ ಹೊರಗೆ ಸೇರದ ಇವರು ಇದೀಗ ಮಜಾ ಟಾಕೀಸ್​​​​​​​​​​​​​​​​ನಿಂದಾಗಿ ಒಟ್ಟಿಗೆ ಸೇರಿದ್ದು ಬಿಗ್ ಬಾಸ್ ನಂತರ ಇವರೆಲ್ಲರನ್ನೂ ಜೊತೆಯಾಗಿ ನೋಡುವ ಅವಕಾಶ ವೀಕ್ಷಕರಿಗೆ ದೊರಕಿದೆ. ಮಜಾ ಟಾಕೀಸ್​​​ನಲ್ಲಿ ಬಿಗ್ ಬಾಸ್ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ.

ಮಜಾ ಟಾಕೀಸ್ ಮೂಲಕ ಕನ್ನಡ ಕಿರುತೆರೆಯಲ್ಲಿ ಫೇಮಸ್ ಆದ ಕುರಿ ಪ್ರತಾಪ್ ಬಿಗ್ ಬಾಸ್ ಸೀಸನ್ 7 ರನ್ನರ್ ಅಪ್ ಆಗಿ ಹೊರಬಂದಿದ್ದರು. ಅವರು ಇದೀಗ ಮಜಾ ಟಾಕೀಸ್ ಭಾಗವಾಗಿರುವುದರಿಂದ ಕುರಿ ಪ್ರತಾಪ್ ಕೂಡಾ ದೊಡ್ಮನೆಯ ನೆನಪುಗಳನ್ನು ನಿಮ್ಮ ಮುಂದೆ ಬಿಚ್ಚಿಡಲಿದ್ದಾರೆ. ಕಳೆದ ವಾರದ ಸಂಚಿಕೆಯಲ್ಲಿ ಸ್ಯಾಂಡಲ್​ವುಡ್​​​ ನಟಿಯರಾದ ಸುಧಾರಾಣಿ ಹಾಗು ಶ್ರುತಿ ಬಂದು ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.