ಬೆಂಗಳೂರು: ಮಾದಕ ವಸ್ತು ಸೇವನೆ ಆರೋಪದಡಿ ಎನ್ಸಿಬಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಕಳೆದ ಆವೃತ್ತಿಯ ಕನ್ನಡದ ಬಿಗ್‌ಬಾಸ್ ಸ್ಪರ್ಧಿ ಆ್ಯಡಂ ಪಾಷ ನ.3 ರವರೆಗೂ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಇವರ ಜೊತೆಗೆ ಇನ್ನೂ ಮೂವರು ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವುದು ಗೊತ್ತಾಗಿದೆ.
ಎನ್ಸಿಬಿ ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿರುವ ಪಾಷ, ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅನಿಕಾ ಜೊತೆ ಸಂಪರ್ಕ ಇದ್ದಿದ್ದು ಸತ್ಯ. ಹಲವು ಬಾರಿ ಡ್ರಗ್ಸ್ ತರಿಸಿಕೊಂಡಿರುವುದು, ಮಾದಕ ವಸ್ತು ಎಂಡಿ ಕ್ರಿಸ್ಟಲ್ ಎಂಬ ಹೈ ಹ್ಯಾಂಡ್ ಡ್ರಗ್ಸ್ ತರಿಸಿಕೊಂಡಿದ್ದು ಮತ್ತು ಸೇವಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
2019ರಲ್ಲಿ ಹಲವು ಬಾರಿ ಅನಿಕಾ ಜೊತೆ ವ್ಯವಹಾರ ನಡೆಸಿರುವ ಆ್ಯಡಂ ಪಾಷ, ತನ್ನ ಜೊತೆಗೆ ಇಬ್ಬರು ಇಂಟರ್ ನ್ಯಾಷನಲ್ ಡ್ಯಾನ್ಸರ್ಸ್ ಹಾಗೂ ಓರ್ವ ಸಿನಿ ಕಲಾವಿದರು ಡ್ರಗ್ಸ್ ಪಾರ್ಟಿ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ.
ಪಾರ್ಟಿ ಮಾಡುತ್ತಿದ್ದ ಪಬ್ ಮತ್ತು ಡ್ಯಾನ್ಸ್ ಬಾರ್‌ಗಳು ಹಾಗು ಖಾಸಗಿ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಎನ್ಸಿಬಿ ಹಲವರನ್ನು ವಿಚಾರಣೆ ನಡೆಸಲಿದೆ.