ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಾರೆ ನೀ ಮೋಹಿನಿ' ಧಾರಾವಾಹಿಯಲ್ಲಿ ಬೆಳ್ಳಿಯ ಪ್ರೀತಿಯ ಮುತ್ತು ಮಾವನಾಗಿ ಅಭಿನಯಿಸುತ್ತಿರುವ ಸೂರಜ್ ಅವರಿಗೆ ಇದೀಗ ತೆಲುಗು ಕಿರುತೆರೆಯಲ್ಲಿ ಕೂಡಾ ಅವಕಾಶ ಒಲಿದು ಬಂದಿದೆ. ತೆಲುಗಿನ ಧಾರಾವಾಹಿಯಲ್ಲಿ ಸೂರಜ್ ನಟಿಸುತ್ತಿದ್ದಾರೆ.
- " class="align-text-top noRightClick twitterSection" data="
">
ತೆಲುಗಿನ ಸ್ಟಾರ್ ಮಾ ಚಾನೆಲ್ನಲ್ಲಿ ಪ್ರಸಾರವಾಗಲಿರುವ 'ಚಿಟ್ಟಿತಲ್ಲಿ' ಧಾರಾವಾಹಿಯಲ್ಲಿ ಸೂರಜ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು ಈಗಾಗಲೇ ಪ್ರೋಮೋ ಕೂಡಾ ಬಿಡುಗಡೆಯಾಗಿದೆ. ಬಾಲ್ಯದಲ್ಲಿ ತಾನೊಬ್ಬ ಇಂಜಿನಿಯರ್ ಆಗಬೇಕು ಎಂಬ ಕನಸು ಕಂಡಿದ್ದ ಸೂರಜ್ ಮಲ್ನಾಡ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಲಿತು ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು. ನಂತರ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಸೂರಜ್ ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದು 'ಕುಲವಧು' ಧಾರಾವಾಹಿಯ ಗೌರವ್ ಆಗಿ.
![Suraj as Muttu mava](https://etvbharatimages.akamaized.net/etvbharat/prod-images/kn-bng-03-suraj-telugu-serial-photo-ka10018_20012020194911_2001f_1579529951_175.jpg)
ತಾನೊಬ್ಬ ಕಲಾವಿದನಾಗಬೇಕು ಎಂಬ ಆಸೆ ಚಿಗುರಿದ್ದೇ ತಡ, ಸೂರಜ್ ತಮ್ಮ ಕೆಲಸಕ್ಕೆ ಗುಡ್ಬೈ ಹೇಳಿದರು. ನಟನೆಯ ರೀತಿ ನೀತಿಗಳನ್ನು ಅರಿಯುವ ಸಲುವಾಗಿ ಲೈಮ್ ಲೈಟ್ ಅಕಾಡೆಮಿಯಲ್ಲಿ ನಟನಾ ತರಬೇತಿ ಪಡೆದರು. 'ಮೊದಲ ಬಾರಿ ಕ್ಯಾಮರಾ ಎದುರಿಸಿದಾಗ ನರ್ವಸ್ ಆದೆ. ನಿರ್ದೇಶಕರ ಸಹಾಯ, ಹಿರಿಯ ಕಲಾವಿದರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಎಲ್ಲವೂ ಸಾಧ್ಯವಾಯಿತು' ಎಂದು ಹೇಳುವ ಸೂರಜ್ ಕುಲವಧುವಿನ ಗೌರವ್ ಎಂದೇ ಮನೆ ಮಾತಾಗಿದ್ದಾರೆ. ಇದರ ಜೊತೆಗೆ 'ಯಾರೆ ನೀ ಮೋಹಿನಿ' ಯ ಮುತ್ತು ಮಾವನಾಗಿ ಕಮಾಲ್ ಮಾಡುತ್ತಿರುವ ಸೂರಜ್ ಆ್ಯಕ್ಟಿಂಗ್ಗೆ ಮನಸೋಲದವರಿಲ್ಲ. ಈಗ ತೆಲುಗು ವೀಕ್ಷಕರು ಸೂರಜ್ ಅವರನ್ನು ಹೇಗೆ ಸ್ವೀಕರಿಸುತ್ತಾರೋ ಕಾದುನೋಡಬೇಕು.