ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿಗಳಲ್ಲಿ 'ರಾಧಾ ರಮಣ' ಕೂಡಾ ಒಂದು. ಆದರೆ ಈ ಧಾರಾವಾಹಿ ಪ್ರೇಮಿಗಳಿಗೆ ಒಂದು ಬ್ಯಾಡ್ ನ್ಯೂಸ್. ಈ ಧಾರಾವಾಹಿ ಶೀಘ್ರದಲ್ಲೇ ಕೊನೆಯಾಗಲಿದೆ ಎನ್ನಲಾಗುತ್ತಿದೆ. ಹೌದು, ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗುತ್ತಿದೆ ರಾಧಾ ರಮಣ ಧಾರಾವಾಹಿ.

ಹೆಚ್ಚು ವೀಕ್ಷಕರನ್ನು ಪಡೆದಿದ್ದ ಈ ಧಾರಾವಾಹಿ, ನಾಯಕಿ ‘ರಾಧಾ‘ ಪಾತ್ರಧಾರಿಯ ಬದಲಾವಣೆಯಿಂದ ರೇಟಿಂಗ್ನಲ್ಲಿ ಕೊಂಚ ಇಳಿಮುಖವಾಗಿತ್ತು. ಶ್ವೇತಾ ಪ್ರಸಾದ್ ಈ ಮುನ್ನ ರಾಧಾ ಪಾತ್ರಧಾರಿಯಾಗಿ ನಟಿಸುತ್ತಿದ್ದರು. ಆದರೆ ಅವರು ಈ ಧಾರಾವಾಹಿಯಿಂದ ಹೊರಹೋದ ನಂತರ ಕಾವ್ಯಗೌಡ ಆ ಸ್ಥಾನಕ್ಕೆ ಬಂದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಬಿಗ್ಬಾಸ್ ಸೀಸನ್ 7 ಕೂಡಾ ಬರುತ್ತಿದೆ. ಇಷ್ಟು ದಿನ ಕಲರ್ಸ್ ಸೂಪರ್ನಲ್ಲಿ ಬಿಗ್ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಆದರೆ ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿಯನ್ನು ಪ್ರಸಾರ ಮಾಡಲು ಕಾರ್ಯಕ್ರಮ ನಿರ್ವಾಹಕರು ನಿರ್ಧರಿಸಿದ್ದಾರೆ. ಹೀಗಾಗಿ 'ರಾಧಾ ರಮಣ'ಧಾರಾವಾಹಿಯನ್ನು ಮುಕ್ತಾಯ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದೆಲ್ಲಾ ಕಾರಣಗಳ ಜೊತೆಗೆ ಧಾರಾವಾಹಿ ಕಥೆ ಕೂಡಾ ಅಂತಿಮ ಹಂತದಲ್ಲಿದೆ. ಇನ್ನು ಎರಡು ವಾರಗಳು ಮಾತ್ರ ಈ ಧಾರಾವಾಹಿ ಪ್ರಸಾರವಾಗಲಿದೆ.
