ETV Bharat / sitara

ಇತಿಹಾಸವನ್ನು ನೆನಪಿಸಲು ಮತ್ತೆ ನಿಮ್ಮ ಮುಂದೆ 'ಚಕ್ರವರ್ತಿ ಅಶೋಕ'ನ ಆಗಮನ

ಕನ್ನಡ ಕಿರುತೆರೆಗೆ ಮತ್ತೊಂದು ಹೊಸ ಡಬ್ಬಿಂಗ್ ಧಾರಾವಾಹಿಯ ಆಗಮನವಾಗಿದೆ. ಮೌರ್ಯ ಸಾಮ್ರಾಜ್ಯದ ಖ್ಯಾತ ರಾಜ, ಅಶೋಕ ಚಕ್ರವರ್ತಿಯ ಕಥೆಯುಳ್ಳ ಹಿಂದಿ ಧಾರಾವಾಹಿ ಡಬ್ ಆಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

Ashoka dubbing serial
ಅಶೋಕ ಚಕ್ರವರ್ತಿ
author img

By

Published : Jun 15, 2020, 3:17 PM IST

ಬಾಲ್ಯದಲ್ಲಿ ಇತಿಹಾಸ ಓದಿದವರಿಗೆ ಖಂಡಿತ ಅಶೋಕ ಚಕ್ರವರ್ತಿಯ ಹೆಸರು ನೆನಪಿರುತ್ತದೆ. ದೇವನಾಂಪ್ರಿಯ, ಪ್ರಿಯದರ್ಶಿ ಎಂದು ಪ್ರಜೆಗಳು ಅಶೋಕನಿಗೆ ಪ್ರೀತಿಯಿಂದ ಕರೆಯುತ್ತಿದ್ದರು. ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಗಳಲ್ಲಿ ಅಶೋಕ ಚಕ್ರವರ್ತಿ ಬಹಳ ಫೇಮಸ್.

ಅಶೋಕ ಚಕ್ರವರ್ತಿಯ ಬಗ್ಗೆ ಇದೀಗ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ. ಅಶೋಕನ ಬಾಲ್ಯ, ಆಡಳಿತ ಕ್ರಮಗಳು, ಪ್ರಜೆಗಳಿಗಾಗಿ ಆತ ಕೈಗೊಂಡ ಕಾರ್ಯಗಳೇನು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಶಾಲೆಯಲ್ಲಿ ಓದಿರುತ್ತೇವೆ. ಆದರೆ ಆಗ ಓದಿರುವ ಇತಿಹಾಸ ಈಗ ಎಷ್ಟೊ ಜನರಿಗೆ ನೆನಪಿರುವುದಿಲ್ಲ. ನೀವು ಇತಿಹಾಸವನ್ನು ತಿಳಿಯಲು ಮತ್ತೆ ಇತಿಹಾಸ ಪುಸ್ತಕಗಳನ್ನು ಓದುವ ಅಗತ್ಯವಿಲ್ಲ. ಆದರೆ ಸಿನಿಮಾಗಳ ಮೂಲಕ ಧಾರಾವಾಹಿಗಳ ಮೂಲಕ ನಾವು ಮತ್ತೊಮ್ಮೆ ಈ ಮಹಾನ್ ರಾಜರ ಬಗ್ಗೆ ತಿಳಿದುಕೊಳ್ಳಬಹುದು.

Ashoka dubbing serial
'ಚಕ್ರವರ್ತಿ ಅಶೋಕ' (ಫೋಟೋ ಕೃಪೆ: ಕಲರ್ಸ್​ ಕನ್ನಡ)

ಇದೀಗ ಕಲರ್ಸ್ ಕನ್ನಡದಲ್ಲಿ 'ಚಕ್ರವರ್ತಿ ಅಶೋಕ' ಧಾರಾವಾಹಿ ಕನ್ನಡಕ್ಕೆ ಡಬ್​​​​ ಆಗಿ ಪ್ರಸಾರವಾಗುತ್ತಿದೆ. ಧಾರಾವಾಹಿ ನಿನ್ನೆಯಿಂದ ಪ್ರಸಾರ ಆರಂಭಿಸಿದ್ದು ಮೊದಲ ಸಂಚಿಕೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಹಿಂದಿಯಿಂದ ಕನ್ನಡಕ್ಕೆ ಡಬ್ ಆಗಿರುವ ಅಶೋಕ ಚಕ್ರವರ್ತಿಯ ಪ್ರೋಮೋ ಕೂಡಾ ಕೆಲವು ದಿನಗಳ ಹಿಂದೆ ಸಾಕಷ್ಟು ಸದ್ದು ಮಾಡಿತ್ತು. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ 'ಚಕ್ರವರ್ತಿ ಅಶೋಕ' ಧಾರಾವಾಹಿ ನಿಮ್ಮ ಮೆಚ್ಚಿನ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.