ಸೆಲಬ್ರಿಟಿಗಳು ಫೋಟೋ ಶೂಟ್ ಮಾಡಿಸಿಕೊಳ್ಳುವುದು ಹೊಸತೇನಲ್ಲ, ಅದರಲ್ಲೂ ಈ ಲಾಕ್ ಡೌನ್ ಸಮಯದಲ್ಲಿ ಅನೇಕ ಕಲಾವಿದರು ವಿಭಿನ್ನ ರೀತಿಯ ಫೋಟೊ ಶೂಟ್ಗಳನ್ನು ಮಾಡಿಸುವ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ.
- " class="align-text-top noRightClick twitterSection" data="
">
ಬಿಗ್ ಬಾಸ್ ಖ್ಯಾತಿಯ ಆಶಿತಾ ಚಂದ್ರಪ್ಪ ಕೂಡಾ ಇದೀಗ ಫೋಟೋಶೂಟ್ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಆಶಿತಾ ಬಹಳ ಡಿಫರೆಂಟ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಶಾಲಿನಿಯಾಗಿ ಕಿರುತೆರೆಗೆ ಕಾಲಿಟ್ಟ ನಟಿ ಆಶಿತಾ, ರಾಧಾ ರಮಣ ಧಾರಾವಾಹಿಯ ಅವನಿ ಆಗಿ ಕೂಡಾ ನಟಿಸಿದ್ದಾರೆ. ಸಾಂಪ್ರದಾಯಿಕವಾಗಿ ಸೀರೆಯಲ್ಲಿ ಮಿಂಚುತ್ತಿರುವ ಆಶಿತ ಫೋಟೋ ಜೊತೆಗೆ ಕಪ್ಪು ಚಿರತೆಯೊಂದು ಕಾಣಿಸಿಕೊಂಡಿದೆ. ತಮ್ಮೊಂದಿಗೆ ಕಪ್ಪು ಚಿರತೆ ಇರುವ ರೀತಿ ಆಶಿತಾ ಫೋಟೋವನ್ನು ಎಡಿಟ್ ಮಾಡಿಸಿದ್ದಾರೆ. ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿರುವ ಆಶಿತಾ, ಇದು ನನ್ನ ಇಷ್ಟವಾದ ಫೋಟೋ ಎಂದು ಹೇಳಿದ್ದಾರೆ.
'ನಾವಿಬ್ಬರೂ ಲಾಕ್ ಡೌನ್ನಲ್ಲಿ ಫೋಟೋ ತೆಗೆಸಿಕೊಂಡೆವು. ಆದರೆ ನಾನು ಕಪ್ಪು ಚಿರತೆ ಶಾಟ್ ಬಗ್ಗೆ ಕೇಳಿದಾಗ ಮೇಕಪ್ ಮ್ಯಾನ್ಗೆ ಅದು ತಿಳಿದಿರಲಿಲ್ಲ. ಆದರೆ ಅದು ಫೋಟೋಗ್ರಾಫರ್ಗೆ ತಿಳಿದಿತ್ತು. ಅದರ ಫಲಿತಾಂಶವೇ ಇದು' ಎಂದು ಬರೆದುಕೊಂಡಿದ್ದಾರೆ. ಆಶಿತಾ ಅವರ ಈ ಫೋಟೋ ನೋಡಿ ನೆಟಿಜನ್ಸ್ ಬಹಳ ಇಷ್ಟಪಟ್ಟಿದ್ದಾರೆ. ಅಪರೂಪದ ಈ ಕಪ್ಪು ಚಿರತೆ ಕಬಿನಿ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. ವೈಲ್ಡ್ ಲೈಫ್ ಫೋಟೋಗ್ರಾಫರ್ ಶಾಜ್ ಜಂಗ್ ಇದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು.
- " class="align-text-top noRightClick twitterSection" data="
">