ಕನ್ನಡ ವಾಹಿನಿಗಳಲ್ಲಿ ನಂಬರ್ ಒನ್ ನಿರೂಪಕಿ ಯಾರು ಎಂದು ಕೇಳಿದರೆ ಥಟ್ ಎಂದು ಎಲ್ಲರಿಂದ ಬರುವ ಉತ್ತರ ಅನುಶ್ರೀ. ಅರಳು ಹುರಿದಂತೆ ಪಟ ಪಟ ಮಾತನಾಡುವ ಅನುಶ್ರೀ ರಾಜ್ಯದ ಜನತೆಯ ಮನದಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ನಿರೂಪಣೆಯಿಂದ ಆಕೆ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
- " class="align-text-top noRightClick twitterSection" data="
">
ಅನುಶ್ರೀ ಅವರ ಈ ಸಾಧನೆ ಹಿಂದೆ ಇರುವವರು ಅವರ ತಾಯಿ ಹಾಗೂ ತಮ್ಮ. ಮೊನ್ನೆಯಷ್ಟೇ ಅನುಶ್ರೀ ತಮ್ಮ ತಾಯಿಯ ಹುಟ್ಟಹಬ್ಬವನ್ನು ಆಚರಿಸಿದ್ದಾರೆ. ಈ ವಿಶೇಷ ದಿನದಂದು ಅಮ್ಮನಿಗಾಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ. ಅನುಶ್ರೀ. ಅಮ್ಮ ಹಾಗೂ ಸಹೋದರನೊಂದಿಗೆ ಇರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಅನುಶ್ರೀ, ಅಮ್ಮನನ್ನು ಹಾಡಿ ಹೊಗಳಿದ್ದಾರೆ.
"ಅಮ್ಮ..ನನಗೆ ಜನ್ಮ ಕೊಟ್ಟ ಜನ್ಮದಾತೆ ನನ್ನ ಅಮ್ಮ...ಮಾತು ಕಲಿಸಿ ಮುತ್ತು ಕೊಟ್ಟ ಮುದ್ದು ನನ್ನ ಅಮ್ಮ .. ನನ್ನ ಕಣ್ಣೊರೆಸಿ ಕನ್ನಡ ಹೇಳಿ ಕೊಟ್ಟ ಸರಸ್ವತಿ ನನ್ನ ಅಮ್ಮ… ವಿದ್ಯೆ.. ವಿನಯತೆ ಕೊಟ್ಟ ಗುರು ನನ್ನ ಅಮ್ಮ.. ತಾನು ನಡೆದು ನನ್ನನ್ನು ಗುರಿ ತಲುಪಿಸಿದ ಮಾರ್ಗದರ್ಶಿ ನನ್ನ ಅಮ್ಮ.. ತಾನು ಹಸಿದು ನನ್ನ ಹೊಟ್ಟೆ ತುಂಬಿಸಿದ ಅನ್ನಪೂರ್ಣೆ ನನ್ನಮ್ಮ.. ತಂದೆಯಾಗಿ… ಸ್ನೇಹಿತೆಯಾಗಿ ನಿಂತ ನನ್ನ ಜೀವದಾತೆ ನನ್ನ ಅಮ್ಮ.. ಎಂದೂ ನಾನು ಅನುಶ್ರೀ ಅಮ್ಮ ಎಂದು ಹೇಳದ ಸ್ವಾಭಿಮಾನಿ ನನ್ನಮ್ಮ..ಆದ್ರೆ ಅನುಶ್ರೀ ನಿಮ್ಮ ಮಗಳು ಎಂತ ಪ್ರತಿಭಾನ್ವಿತೆ ಅಲ್ವಾ ಎಂದಾಗ ಹೆಮ್ಮೆಯಿಂದ ಬೀಗುವ ನನ್ನ ಹೆಮ್ಮೆಯ ಅಮ್ಮ.. ಸೋಲದಿರು, ಗೆಲ್ಲುವ ಪ್ರಯತ್ನ ಬಿಡದಿರು ಎಂದು ಜೀವನಪಾಠ ಹೇಳಿಕೊಟ್ಟ ರಿಯಲ್ ಹೀರೋ ನನ್ನಮ್ಮ.. ಅಮ್ಮ ಹುಟ್ಟುಹಬ್ಬದ ಶುಭಾಶಯಗಳು.. ನನ್ನ ಆಯುಷ್ಯ ನಿಮ್ಮ ಪಾಲಾಗಲಿ.. ಲವ್ ಯು ಅಮ್ಮ..” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಅಮ್ಮನ ಹುಟ್ಟುಹಬ್ಬಕ್ಕಾಗಿ ಅವರಿಗೆ ಅನುಶ್ರೀ ವಿಶೇಷ ಉಡುಗೊರೆಯನ್ನೂ ನೀಡಿದ್ದಾರಂತೆ. ಅಮ್ಮನಿಗೆ ಇಷ್ಟವಾದ ರೆಡಿಯೋವೊಂದನ್ನು ಅವರ ಹುಟ್ಟುಹಬ್ಬಕ್ಕಾಗಿ ಅನುಶ್ರೀ ನೀಡುವ ಮೂಲಕ ಅಮ್ಮನ ಜನ್ಮದಿನವನ್ನು ಸಂತೋಷದಿಂದ ಆಚರಿಸಿದ್ದಾರೆ.