ವಾಹಿನಿಗಳು ಎಷ್ಟು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೂ ಹಣ ನೀಡುವ ಕಾರ್ಯಕ್ರಮಗಳನ್ನು ಮಾಡಿದರೆ ಅದನ್ನು ನೋಡುವ ಆಸಕ್ತಿಯೇ ಬೇರೆ. ಅದಕ್ಕೆ 'ಕನ್ನಡದ ಕೋಟ್ಯಧಿಪತಿ ' ಕಾರ್ಯಕ್ರಮವೇ ಸಾಕ್ಷಿ. ಹಣ ಗೆಲ್ಲುವ ಅವಕಾಶ ಇದೆ ಎಂದರೆ ಯಾರು ತಾನೇ ಬಿಡುತ್ತಾರೆ..?
ಇದೀಗ ಉದಯ ಟಿವಿಯಲ್ಲಿ 'ಆನ್ಸರ್ ಹೇಳಿ ಕ್ಯಾಶ್ ಗೆಲ್ಲಿ' ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಇದಕ್ಕೆ ಪ್ರೇಕ್ಷಕರು ಮನೆಯಲ್ಲೇ ಇದ್ದು ಪ್ರಶ್ನೆಗಳಿಗೆ ಉತ್ತರಿಸಿ ದುಡ್ಡು ಪಡೆಯಬಹುದು. ಪ್ರತಿ ಭಾನುವಾರ ಈ ಕಾರ್ಯಕ್ರಮದ ವಿಜೇತರನ್ನು ಘೋಷಿಸಲಾಗುತ್ತದೆ. ಇದಕ್ಕೆ ವೀಕ್ಷಕರು ಉದಯ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ನೋಡಬೇಕು. ಈ ಧಾರಾವಾಹಿ ಪ್ರಸಾರದ ನಡುವೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
![Answer heli cash gelli program started in Udaya tv](https://etvbharatimages.akamaized.net/etvbharat/prod-images/answer-heli-cash-gelli-in-udaya-tv1595387667214-94_2207email_1595387678_904.jpg)
ಈ ಸ್ಪರ್ಧೆಯಲ್ಲಿ ಒಟ್ಟು 8 ಪ್ರಶ್ನೆಗಳು ಇರುತ್ತವೆ. ವಾರಕ್ಕೆ 8 ಲಕ್ಷ ರೂಪಾಯಿ ಹಣವನ್ನು ಉದಯ ವಾಹಿನಿ ಬಹುಮಾನವಾಗಿ ನೀಡುತ್ತದೆ. ಈ ನಗದು ಗೆಲ್ಲುವ ಕಾರ್ಯಕ್ರಮ ಜುಲೈ 27 ರಿಂದ ಪ್ರಾರಂಭ ಆಗುತ್ತದೆ. ಸೋಮವಾರದಿಂದ ಶುಕ್ರವಾರ ಸಂಜೆವರೆಗೂ ಸಂಜೆ 6-10 ವರೆಗೆ ಈ ಸ್ಪರ್ಧೆ ನಡೆಯಲಿದೆ.
ಪ್ರೇಕ್ಷಕರಿಗೆ ಪ್ರತಿಯೊಂದು ಧಾರಾವಾಹಿಯಲ್ಲೂ ಸನ್ನಿವೇಶಕ್ಕೆ ಅನುಗುಣವಾಗಿ ಸರಳ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನಿಗದಿತ ಸಮಯದಲ್ಲಿ ಉತ್ತರ ನೀಡಬೇಕು. ಒಂದು ಪ್ರಶ್ನೆಗೆ 20 ರಿಂದ 160 ವಿಜೇತರನ್ನು ಆಯ್ಕೆ ಮಾಡಿ ಅದೃಷ್ಟಶಾಲಿಯನ್ನು ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಲಾಗುವುದು. ಪ್ರತಿ ದಿನ ಒಂದು ಲಕ್ಷ ಗೆಲ್ಲುವ ಅವಕಾಶ ಪ್ರೇಕ್ಷಕರಿಗಿದೆ.