ಇತ್ತೀಚೆಗೆ ಕನ್ನಡದಲ್ಲೂ ವೆಬ್ ಸೀರೀಸ್ಗಳನ್ನು ಹೆಚ್ಚಾಗಿ ತಯಾರಿಸಲಾಗುತ್ತಿದೆ. 'ಲೂಸ್ ಕನೆಕ್ಷನ್'ನಿಂದ ಆರಂಭವಾದ ವೆಬ್ ಸೀರೀಸ್ ನಿರ್ಮಾಣ ಇಂದಿಗೂ ಮುಂದುವರೆದಿದೆ. ಸಿನಿಮಾಗಳಂತೆ ಈ ಸೀರೀಸ್ಗಳು ಕೂಡಾ ಪ್ರೇಕ್ಷಕರಿಗೆ ಮನರಂಜನೆ ಒದಗಿಸುತ್ತಿವೆ.
![Ram Tej direction Psycho Web series](https://etvbharatimages.akamaized.net/etvbharat/prod-images/ram-teja-with-darshan1592447835632-12_1806email_1592447847_52.jpg)
ಇನ್ನು ಒಟಿಟಿ ಪ್ಲಾಟ್ಫಾರ್ಮ್ಗಳು ವೆಬ್ ಸೀರೀಸನ್ನು ಹೆಚ್ಚು ಟಾರ್ಗೆಟ್ ಮಾಡುತ್ತಿವೆ. ಸುಮಾರು 15 ವರ್ಷಗಳಿಂದ ಪಿ.ಎನ್. ಸತ್ಯ ಅವರ ಗರಡಿಯಲ್ಲಿ ಪಳಗಿರುವ ರಾಮ್ ತೇಜ್, ಸಿನಿಮಾ ಬದಲು ವೆಬ್ ಸೀರೀಸ್ ನಿರ್ದೇಶನಕ್ಕೆ ಮುಂದಾಗಿದ್ದಾರೆ. ರಾಮ್ ತೇಜ್ ಯುವ ಬರಹಗಾರ. ನಿರ್ದೇಶನ ವಿಭಾಗದಲ್ಲಿ 'ಗೂಳಿ' ಸಿನಿಮಾದೊಂದಿಗೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ 6 ಕಂತುಗಳ 'ಸೈಕೋ' ಹೆಸರಿನ ವೆಬ್ ಸೀರೀಸ್ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ. ಈ ಸೀರೀಸ್ನ ಒಂದೊಂದು ಕಂತು 20 ನಿಮಿಷ ಅವಧಿ ಇದೆ. ಈ ಸೀರಿಸ್ ನಿರ್ಮಾಣ ಆದ ನಂತರ ಒಟಿಟಿ ಸಂಸ್ಥೆಗಳು ಶೇಖಡ 60 ರಷ್ಟು ಹಣವನ್ನು ನಿರ್ಮಾಪರಿಗೆ ನೀಡಿ, ಉಳಿದ ಭಾಗವನ್ನು ತಾವು ಇಟ್ಟುಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಕಿರುತೆರೆಯಲ್ಲಿ ಹೆಸರು ಮಾಡಿರುವ ಅಮಿತ್, ಈ ಸೀರೀಸ್ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಮಿತ್ 'ಹವಾಲ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಖ್ಯಾತ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲೂ ಅಮಿತ್ ನಟಿಸಿದ್ದಾರೆ.
![Ram Tej direction Psycho Web series](https://etvbharatimages.akamaized.net/etvbharat/prod-images/ram-teja-to-direct-web-series-psycho1592447835632-68_1806email_1592447847_396.jpg)