ಕಳೆದ 6 ವರ್ಷಗಳಿಂದ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ ವೈಷ್ಣವಿ ಅಲಿಯಾಸ್ ಸನ್ನಿಧಿ ಇದೀಗ ರಜೆಯ ಮಜಾ ಸವಿಯಲು ಬಾಲಿಗೆ ತೆರಳಿದ್ದಾರೆ.

ತಮ್ಮ ಕಾಲೇಜಿನ ಸ್ನೇಹಿತೆಯರ ಜೊತೆಗೆ ಅಂದರೆ ನಟಿ ಅಮೂಲ್ಯ ಹಾಗೂ ಮತ್ತೊಬ್ಬ ಸ್ನೇಹಿತೆ ಸೇರಿ ಮೂವರು ಬಾಲಿಯ ಕ್ರೂಸ್ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ಕೆಲಸದ ಒತ್ತಡದಿಂದ ಕೊಂಚ ಬಿಡುವ ಮಾಡಿಕೊಂಡಿರುವ ಈ ಮೂವರು ತಮ್ಮದೇ ಆದ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.