ಲಾಕ್ಡೌನ್ ಹೇರಿಕೆಯಿಂದ ಮನೆಯಲ್ಲಿಯೇ ಕುಳಿತಿರುವ ನಟಿ ತೇಜಸ್ವಿನಿ ಪ್ರಕಾಶ್, ಇನ್ಸ್ಟಾಗ್ರಾಂನಲ್ಲಿ ತಮ್ಮ ಧಾರಾವಾಹಿ ತಂಡದ ಫೋಟೋ ಹಾಕಿ ಹಳೆಯ ದಿನಮಾನಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲದೇ ಆದಷ್ಟು ಬೇಗ ಶೂಟಿಂಗ್ ಶುರು ಆಗಲಿ... ಎಲ್ಲರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ ಈ ಬೆಡಗಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಲಾವಣ್ಯ ಪಾತ್ರ ಮಾಡುತ್ತಿರುವ ತೇಜಸ್ವಿನಿ, ಚಿತ್ರೀಕರಣವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಧಾರಾವಾಹಿಯಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿರುವ ತೇಜಸ್ವಿನಿ, ಕಿರುತೆರೆಗೆ ಹೊಸಬರೇನಲ್ಲ ನಿಜ. ಆದರೆ, ಆಕೆಯ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಮಾತ್ರ ಹಿರಿತೆರೆ!

ವಿಷ್ಣುವರ್ಧನ್ ಅಭಿನಯದ ಮಾತಾಡ್ ಮಾತಾಡ್ ಮಲ್ಲಿಗೆ, ಗಜ, ಗೂಳಿ ಹಟ್ಟಿ, ಈ ಪ್ರೀತಿ ಏಕೆ ಭೂಮಿ ಮೇಲಿದೆ, ಸವಿಸವಿ ನೆನಪು, ಬಂಧು ಬಳಗ, ನಿತ್ಯ ಜೊತೆ ಸತ್ಯ, ಡಯಾನಾ ಹೌಸ್ ಸಿನಿಮಾಗಳಲ್ಲಿ ಅಭಿನಯಿಸಿರುವ ತೇಜಸ್ವಿನಿ, ಗೂಳಿ ಹಟ್ಟಿ ಸಿನಿಮಾದ ಅಭಿನಯಕ್ಕೆ ಸೈಮಾ ಬೆಸ್ಟ್ ಸಪೋರ್ಟಿಂಗ್ ರೋಲ್ ಪ್ರಶಸ್ತಿ ಪಡೆದಿರುತ್ತಾರೆ.

ವಿನು ಬಳಂಜ ನಿರ್ದೇಶನದ ನಿಹಾರಿಕಾ ಧಾರಾವಾಹಿಯಲ್ಲಿ ಟೈಟಲ್ ಪಾತ್ರ ನಿಹಾರಿಕಾಳಾಗಿ ಕಿರುತೆರೆಗೆ ಬಂದ ತೇಜಸ್ವಿನಿ, ಕಿರುತೆರೆ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು. ಮುಂದೆ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಈಕೆ ಇದೀಗ ಲಾವಣ್ಯಳಾಗಿ ಮತ್ತೆ ಕಿರುತೆರೆಗೆ ಮರಳಿ ಬಂದಿದ್ದಾರೆ.
