ಕಲರ್ಸ್ ಕನ್ನಡ ವಾಹಿನಿಯ 'ಮನೆದೇವ್ರು' ಧಾರಾವಾಹಿಯಲ್ಲಿ ನಾಯಕಿ ಜಾನಕಿ ಆಗಿ ನಟಿಸಿದ್ದ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ ನಟನೆಯಿಂದ ದೂರ ಉಳಿದು ಬಹಳ ದಿನಗಳಾಗಿವೆ. ಅರ್ಚನಾಇತ್ತೀಚಿಗೆ ತಮ್ಮ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು ಪತಿ ವಿಘ್ನೇಶ್ ಜೊತೆಗಿರುವ ಫೋಟೋಗಳನ್ನುತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ಪತಿಯನ್ನು ತಾವು ಮೊದಲ ಬಾರಿಗೆ ಭೇಟಿ ಆದ ಕ್ಷಣವನ್ನು ಅರ್ಚನಾ ನೆನಪಿಸಿಕೊಂಡಿದ್ದಾರೆ. ಅಂದ ಹಾಗೆ ಇವರಿಬ್ಬರೂ ಮೊದಲ ಬಾರಿ ಭೇಟಿಯಾದದ್ದು ಏರ್ಪೋರ್ಟ್ನಲ್ಲಂತೆ. ಇವರಿಬ್ಬ ಪರಿಚಯ ಪ್ರೀತಿ ಆಗಿ ಬದಲಾಗಿ ನಂತರ ಹಿರಿಯರ ಒಪ್ಪಿಗೆ ಪಡೆದು ಇಬ್ಬರೂ ಸತಿಪತಿಗಳಾಗಿದ್ದಾರೆ. ಇದೀಗ ಇವರ ಮಧುರ ದಾಂಪತ್ಯಕ್ಕೆ ಎರಡರ ಹರೆಯ. 'ಮಧುಬಾಲಾ' ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಅರ್ಚನಾ ನಂತರ 'ಮನೆದೇವ್ರು' ಧಾರಾವಾಹಿಯಲ್ಲಿ ಜಾನಕಿ ಎಂಬ ಮುಗ್ಧಪಾತ್ರವನ್ನು ಮಾಡಿದ್ದರು. 'ನೀಲಿ' ಧಾರಾವಾಹಿಯಲ್ಲಿ ದೇವತೆ ಆಗಿ ಅತಿಥಿ ಪಾತ್ರ ನಿರ್ವಹಿಸಿದ ಅರ್ಚನಾ, ಕನ್ನಡ ಮಾತ್ರವಲ್ಲದೆ ತಮಿಳು ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ. ಬೆಂಗಳೂರು ಮೂಲದ ಎನ್ಆರ್ಐ ವಿಘ್ನೇಶ್ ಅವರನ್ನು ವರಿಸಿರುವ ಅರ್ಚನಾ ಮದುವೆಯಾದ ನಂತರ ನಟನೆಯಿಂದ ದೂರ ಉಳಿದಿದ್ದಾರೆ. ಸದ್ಯ ಪತಿಯೊಂದಿಗೆ ವಿದೇಶದಲ್ಲಿ ನೆಲೆಸಿರುವ ಅವರು, ನ್ಯೂಯಾರ್ಕ್ ಸಂಸ್ಥೆಯೊಂದರಲ್ಲಿ ಹೆಚ್ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- " class="align-text-top noRightClick twitterSection" data="
">