ಇಂದು ದೇಶದಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮ. ಮೈಸೂರಿನ ಶಕ್ತಿಧಾಮ ಆಶ್ರಮದಲ್ಲಿ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ಕುಮಾರ್ ಧ್ವಜಾರೋಹಣ ನೆರವೇರಿಸಿದ್ರು.
ಈ ಸಂದರ್ಭದಲ್ಲಿ ನಟ ಗುರುದತ್, ಆಶ್ರಮದ ಮಕ್ಕಳು ಹಾಗೂ ಶಕ್ತಿಧಾಮದ ಸಿಬ್ಬಂದಿ ಭಾಗಿಯಾಗಿದ್ದರು. ಧ್ವಜಾರೋಹಣ ನೆರವೇರಿಸಿದ ಬಳಿಕ ಶಿವಣ್ಣ ಅನಾಥ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಶಕ್ತಿಧಾಮ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟು ಹಾಕಿದ ಸಂಸ್ಥೆ. ಈ ಆಶ್ರಮ ವೃದ್ಧರು, ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳು ಹಾಗೂ ಅನಾಥ ಮಕ್ಕಳಿಗೆ ಜೀವನ ಕಟ್ಟಿಕೊಟ್ಟಿರುವ ಸಂಸ್ಥೆಯಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮೈಸೂರಿನಲ್ಲಿ ವೇದ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಶಿವಣ್ಣ, ಇಂದು ಮಕ್ಕಳ ಜತೆ ಗಣರಾಜ್ಯೋತ್ಸವ ಹಬ್ಬವನ್ನ ಆಚರಿಸಿದ್ದಾರೆ. ಸ್ಕೂಲ್ ಬಸ್ ಅನ್ನು ಸ್ವತಃ ಶಿವರಾಜ್ ಕುಮಾರ್ ಡ್ರೈವ್ ಮಾಡುವ ಮೂಲಕ ಮಕ್ಕಳ ಆಸೆಯನ್ನ ಪೂರೈಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಜನತೆಯನ್ನುದ್ದೇಶಿಸಿ ರಾಜ್ಯಪಾಲ ಥಾವರ್ಚಂದ್ ಭಾಷಣ...ಜಲಾನಯನ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು