ETV Bharat / sitara

ನಮ್ಮ ಕುಟುಂಬದಲ್ಲಿ ಶಿವರಾಮಣ್ಣ ಒಬ್ಬರಾಗಿದ್ದರು: ನಟ ಶಿವರಾಜ್ ಕುಮಾರ್ - ನಟ ಶಿವರಾಜ್ ಕುಮಾರ್ ಹೇಳಿಕೆ

ತಲೆ ಸುತ್ತಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಹಿರಿಯ ನಟ ಹಾಗೂ ನಿರ್ದೇಶಕ ಶಿವರಾಮ್ ಖಾಸಗಿ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಇಂದು ನಟ ಶಿವರಾಜ್ ಕುಮಾರ್ ಆಸ್ಪತ್ರೆಗೆ ಬಂದು ಶಿವರಾಮ್ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದರು.

Actor Shivaraj kumar talk about senior actor shivaram
ಹಿರಿಯ ನಟ ಶಿವರಾಮ್ ಹಾಗು ನಟ ಶಿವರಾಜ್ ಕುಮಾರ್
author img

By

Published : Dec 3, 2021, 5:00 PM IST

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ಶಿವರಾಮ್ ಮನೆಯಲ್ಲಿ ಪೂಜೆ ಮಾಡುವಾಗ, ತಲೆ ಸುತ್ತಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಅವರು ಖಾಸಗಿ ಆಸ್ಪತ್ರೆಯ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಮ್ಮ ಕುಟುಂಬದಲ್ಲಿ ಶಿವರಾಮಣ್ಣ ಒಬ್ಬರಾಗಿದ್ದರು: ನಟ ಶಿವರಾಜ್ ಕುಮಾರ್

ನಿನ್ನೆ(ಗುರುವಾರ)ಯಷ್ಟೇ ಹಿರಿಯ ಕಲಾವಿದರಾದ ದೊಡ್ಡಣ್ಣ, ಭಾರತಿ ವಿಷ್ಣುವರ್ಧನ್ ಹಾಗೂ ಗಿರಿಜಾ ಲೋಕೇಶ್ ಬಂದು ಶಿವರಾಮ್ ಅವರ ಆರೋಗ್ಯ ವಿಚಾರಿಸಿದ್ದರು. ಇಂದು ನಟ ಶಿವರಾಜ್ ಕುಮಾರ್ ಆಸ್ಪತ್ರೆಗೆ ಬಂದು ಶಿವರಾಮ್ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ.

ಇದನ್ನೂ ಓದಿ: ಹಿರಿಯ ನಟ ಶಿವರಾಮ್ ಆರೋಗ್ಯ ವಿಚಾರಿಸಿದ ಭಾರತಿ ವಿಷ್ಣುವರ್ಧನ್, ದೊಡ್ಡಣ್ಣ, ಗಿರಿಜಾ ಲೋಕೇಶ್

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ನಮ್ಮ ಕುಟುಂಬದ ಯಾವುದೇ ಪರಿಸ್ಥಿತಿಯಲ್ಲಿ ಶಿವರಾಮ್ ನಮ್ಮ ಜತೆ ಇರುತ್ತಿದ್ದರು. ಶಿವರಾಮಣ್ಣ ಅವರನ್ನ ದೇವರು ಕೈ ಬಿಡಲ್ಲ. ನಾನು ಚಿಕ್ಕ ವಯಸ್ಸಿನಿಂದಲೂ ಅವರನ್ನು ನೋಡಿದ್ದೇನೆ. ನಮ್ಮ ಕುಟುಂಬದಲ್ಲಿ ಅವರು ಒಬ್ಬರಾಗಿದ್ದರು ಎಂದರು.

ನಾವೆಲ್ಲ ಮೂರು ವರ್ಷಗಳ ಹಿಂದೆ ಅಯಪ್ಪ ದೇವಸ್ಥಾನಕ್ಕೆ ಹೋಗಿದ್ದೆವು. ಆಗ ಅವರಿಗೆ 81 ವರ್ಷ. ಆದರೂ ಯಾವುದೇ ಸಹಾಯವಿಲ್ಲದೇ ಬೆಟ್ಟ ಹತ್ತುತ್ತಿದ್ದರು. ಮನಸ್ಸು ಬಂದಾಗೆಲ್ಲ ಅಯಪ್ಪ ದೇವಸ್ಥಾನಕ್ಕೆ ಅವರು ಹೋಗುತ್ತಿದ್ದರು ಎಂದು ಶಿವರಾಜ್ ಕುಮಾರ್ ಹೇಳಿದರು.

ಈಗಾಗಲೇ ನಾನು ನನ್ನ ಸಹೋದರನನ್ನು ಕಳೆದುಕೊಂಡ ನೋವಲ್ಲಿದ್ದೇವೆ. ದೇವರು ನಮಗೇ ಯಾಕೆ ಪದೇ ಪದೆ ಈ ರೀತಿ ನೋವು ಕೊಡ್ತಾ ಇದ್ದಾನೆ ಅಂತಾ ಗೊತ್ತಿಲ್ಲ. ಅಯಪ್ಪನ ಪೂಜೆ ವೇಳೆ ಈ ತರಹ ಆಗಿದೆ ಅಂದ್ರೆ ಆ ದೇವರು ಅವರನ್ನ ಕೈ ಬಿಡಲ್ಲ. ಈ ಪರಿಸ್ಥಿತಿಯಲ್ಲಿ ಅವರನ್ನ ನೋಡೋಕೆ ತುಂಬಾ ಕಷ್ಟ ಆಗುತ್ತದೆ. ಮತ್ತೆ ಅವರು ಗುಣಮುಖರಾಗಿ ಬರಬೇಕು ಎಂಬುವುದು ನಮ್ಮ ಆಸೆ ಎಂದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.