'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಆಗಿ ಅಭಿನಯಿಸುತ್ತಿರುವ ರಕ್ಷ್ ಮತ್ತೆ ತಮ್ಮ ಹೆಸರನ್ನು ಬದಲಾಯಿಸಿದ್ದಾರೆ. ರಕ್ಷ್ ಮೊದಲ ಹೆಸರು ರಕ್ಷತ್. ಆದರೆ ನಂತರ ಅವರು ರಕ್ಷ್ ಎಂದು ಹೆಸರು ಬದಲಿಸಿಕೊಂಡಿದ್ದರು. ಇದೀಗ ಮತ್ತೆ ಎರಡನೇ ಬಾರಿ ಹೆಸರು ಬದಲಿಸಿದ್ದಾರೆ.
ಈ ನಟನ ಹೆಸರಿನ ಉಚ್ಛಾರ ರಕ್ಷ್ (Raksh)ಆದರೂ ಈಗ ಆ ಹೆಸರಿನ ಮೂಲಕ ಮತ್ತೊಂದು K ಅಕ್ಷರನ್ನು ಸೇರಿಸಿಕೊಂಡಿದ್ದಾರೆ. ಈಗ ಆಂಗ್ಲ ಭಾಷೆಯಲ್ಲಿ ಅವರ ಹೆಸರು Rakksh ಆಗಿದೆ. ನ್ಯೂಮರಾಲಜಿ ಪ್ರಕಾರ ರಕ್ಷ್ ಈ ಹೆಸರನ್ನು ಬದಲಿಸಿಕೊಂಡಿದ್ದಾರಂತೆ. ಸಾಮಾಜಿಕ ಜಾಲತಾಣದಲ್ಲೂ ತಮ್ಮ ಪ್ರೊಫೈಲ್ ಹೆಸರನ್ನು ಬದಲಿಸಿದ್ದಾರೆ.
- " class="align-text-top noRightClick twitterSection" data="
">
ಪುಟ್ಟಗೌರಿ ಮದುವೆ ಮಹೇಶನಾಗಿ, ಗಟ್ಟಿಮೇಳದ ವೇದಾಂತ್ ಆಗಿ ಹೆಸರು ಮಾಡಿರುವ ಈ ನಟ ಕೆಲವು ದಿನಗಳ ಕಾಲ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಮತ್ತೆ ವೇದಾಂತ್ ಈ ಧಾರಾವಾಹಿಯಲ್ಲಿ ನಟಿಸಲಿದ್ದಾರಾ ಇಲ್ಲವಾ ಎಂದು ಎಲ್ಲರಿಗೂ ಅನುಮಾನ ಕಾಡತೊಡಗಿತ್ತು. ಆದರೆ ಕಥೆಗೆ ಟ್ವಿಸ್ಟ್ ನೀಡುವ ಕಾರಣ ಅವರು ಧಾರಾವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ತಿಳಿದ ನಂತರ ಧಾರಾವಾಹಿಪ್ರಿಯರಿಗೆ ಸಮಾಧಾನವಾಗಿತ್ತು.