ETV Bharat / sitara

ನಾಗಿಣಿ -2 ಧಾರಾವಾಹಿಯಿಂದ ಹೊರನಡೆದ ನಟ ಮೋಹನ್

ಸೃಜನಾತ್ಮಕ ಭಿನ್ನಾಭಿಪ್ರಾಯದಿಂದಾಗಿ ಧಾರಾವಾಹಿ ತೊರೆಯಲೂ ನಿರ್ಧರಿಸಿದೆ. ತಂಡದವರೊಂದಿಗೆ ಉತ್ತಮ ಸಮಯ ಕಳೆದೆ. ನನಗೆ ಕುಟುಂಬದವರಂತೆ ಇದ್ದರು" ಎಂದು ಹೇಳಿದ್ದಾರೆ ಮೋಹನ್ ಶಂಕರ್.

Mohan
Mohan
author img

By

Published : May 4, 2021, 6:20 PM IST

​​​​​​ಬೆಂಗಳೂರು: ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ-2 ರಲ್ಲಿ ನಾಯಕನ ತಂದೆ ದ್ವಿಗಿಜಯ್ ಆಗಿ ಅಭಿನಯಿಸಿದ ಮೋಹನ್ ಶಂಕರ್ ಇದೀಗ ಧಾರಾವಾಹಿಯಿಂದ ಹೊರಬಂದಿದ್ದಾರೆ. ನಾಗಿಣಿ 2 ರಲ್ಲಿ ಖಳನಾಯಕರಾಗಿ ಮೋಡಿ ಮಾಡಿದ್ದ ಮೋಹನ್ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದಾರೆ.

"ನಾನು ದಿಗ್ವಿಜಯ್ ಪಾತ್ರವನ್ನು ಎಂಜಾಯ್ ಮಾಡುತ್ತಿದ್ದೇನೆ. ಈ ಪಾತ್ರ ನೆಗೆಟಿವ್ ಶೇಡ್ ಹೊಂದಿದ್ದು ವೀಕ್ಷಕರ ಮನಗೆದ್ದಿತ್ತು. ಇಪ್ಪತ್ತು ವರುಷಗಳ ಸಿನಿ ಪಯಣದ ನಂತರ ನಾನು ನಾಗಿಣಿ-2 ಮೂಲಕ ಕಿರುತೆರೆ ಪ್ರವೇಶಿಸಿದೆ. ದಿಗ್ವಿಜಯ ಪಾತ್ರ ನನಗೆ ಪ್ರತಿಮನೆ ತಲುಪಲು ಸಹಾಯ ಮಾಡಿತು" ಎಂದಿದ್ದಾರೆ ಮೋಹನ್.

"ಎಲ್ಲದಕ್ಕೂ ಅಂತ್ಯ ಇರಲೇಬೇಕು. ಸೃಜನಾತ್ಮಕ ಭಿನ್ನಾಭಿಪ್ರಾಯದಿಂದಾಗಿ ಧಾರಾವಾಹಿ ತೊರೆಯಲೂ ನಿರ್ಧರಿಸಿದೆ. ತಂಡದವರೊಂದಿಗೆ ಉತ್ತಮ ಸಮಯ ಕಳೆದೆ. ನನಗೆ ಕುಟುಂಬದವರಂತೆ ಇದ್ದರು" ಎಂದು ಹೇಳಿದ್ದಾರೆ ಮೋಹನ್ ಶಂಕರ್.

ರವಿ ಬೋಪಣ್ಣ ಹಾಗೂ ಇತ್ಯರ್ಥ ಸಿನಿಮಾಗಳಲ್ಲಿ ನಟಿಸಿರುವ ಮೋಹನ್ ರವಿ ಬೋಪಣ್ಣ ಸಿನಿಮಾದಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ಯರ್ಥ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿರುವ ಮೋಹನ್ "ನನ್ನ ತಂದೆ ತಾಯಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಮಗನಿಗೂ ಪಾಸಿಟಿವ್ ಬಂದಿದ್ದು ಕ್ವಾರಂಟೈನ್ ನಲ್ಲಿದ್ದಾರೆ. ಬೆಂಗಳೂರಿನ ಸ್ಥಿತಿ ಹದಗೆಟ್ಟಿದೆ. ಜನರು ಹೊರಗೆ ಬರಬೇಡಿ"ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.