ETV Bharat / sitara

ಮಾಸ್ಕ್ ಯಾಕೆ ಧರಿಸಬೇಕು ಎಂಬುದಕ್ಕೆ ತಮ್ಮದೇ ಶೈಲಿಯಲ್ಲಿ ಸಲಹೆ ನೀಡಿದ ನಟ ಕಿರಣ್ ರಾಜ್ - ಸಲಹೆ ನೀಡದ ನಟ ಕಿರಣ್ ರಾಜ್

ಸದ್ಯ ನಟನೆಯಲ್ಲಿ ಬ್ಯುಸಿ ಆಗಿರುವ ಕಿರಣ್ ರಾಜ್​​​ ತೊಂದರೆಯಲ್ಲಿರುವವರಿಗೆ ಸದಾ ಸಹಾಯ ಮಾಡುತ್ತಿರುತ್ತಾರೆ. ಮಾತ್ರವಲ್ಲ ಕಷ್ಟದಲ್ಲಿರುವವರ ಸಹಾಯಕ್ಕೆಂದೇ ಇತ್ತೀಚೆಗೆ ವೆಬ್​​ಸೈಟ್ ಒಂದನ್ನು ಆರಂಭಿಸಿದ್ದರು‌.

ನಟ ಕಿರಣ್ ರಾಜ್
ನಟ ಕಿರಣ್ ರಾಜ್
author img

By

Published : Jul 12, 2020, 1:24 PM IST

Updated : Jul 12, 2020, 2:28 PM IST

ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷನಾಗಿ ಅಭಿನಯಸುತ್ತಿರುವ ಹುಡುಗ ಕಿರಣ್ ರಾಜ್ ಈಗ ಸದಾ ಒಂದಲ್ಲ ಒಂದು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಇದೀಗ ಮಾಸ್ಕ್ ಇಲ್ಲದೇ ಜೀವನ ಹಾಗೂ ಜೀವ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಯಾಕೆ‌ ಎಂಬುದರ ಬಗ್ಗೆ ಕಿರಣ್ ರಾಜ್ ತಮ್ಮದೇ ಶೈಲಿಯಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ.

ಸದ್ಯ ನಟನೆಯಲ್ಲಿ ಬ್ಯುಸಿ ಆಗಿರುವ ಕಿರಣ್ ರಾಜ್,​​​ ತೊಂದರೆಯಲ್ಲಿರುವವರಿಗೆ ಸದಾ ಸಹಾಯ ಮಾಡುತ್ತಿರುತ್ತಾರೆ. ಮಾತ್ರವಲ್ಲ ಕಷ್ಟದಲ್ಲಿರುವವರ ಸಹಾಯಕ್ಕೆಂದೇ ಇತ್ತೀಚೆಗೆ ವೆಬ್​​ಸೈಟ್ ಒಂದನ್ನು ಆರಂಭಿಸಿದ್ದರು‌.

ನಟ ಕಿರಣ್ ರಾಜ್
ನಟ ಕಿರಣ್ ರಾಜ್

ಇದರ ಜೊತೆಗೆ ಇತ್ತೀಚಿಗೆ ತಮ್ಮ ಸೀರಿಯಲ್ ಟೆಕ್ನಿಷಿಯನ್​​ಗಳಿಗೆ ದಿನಸಿ ನೀಡಿದ್ದರು. ಕಿರಣ್ ರಾಜ್ ಇದೀಗ ಮಾಸ್ಕ್ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಎಂತದ್ದೇ ಕಷ್ಟದ ಸ್ಥಿತಿ ಬರಲಿ, ದಯಮಾಡಿ ಮಾಸ್ಕ್ ಧರಿಸುವುದನ್ನು ತಪ್ಪಿಸಬೇಡಿ ಎಂದು ಅವರು ಮನವಿ ಮಾಡಿದ್ದು, ಆ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ನಟ ಕಿರಣ್ ರಾಜ್
ನಟ ಕಿರಣ್ ರಾಜ್

"ಪ್ರತಿದಿನ ಮಾಸ್ಕ್ ಧರಿಸದೇ ಓಡಾಡುವಂತಹ ಜನರನ್ನು ನೋಡುತ್ತಿದ್ದೇನೆ. ತುಂಬಾ ಭಯಾನಕವಾಗಿದೆ. ಯಾರು ಮುಂಜಾಗ್ರತೆ ತೆಗೆದುಕೊಳ್ಳುತ್ತಿಲ್ಲವೋ ಅವರಿಗೆ ಕೊರೊನಾ ವೈರಸ್ ತಗಲುವು ಸಂಭವವೂ ಹೆಚ್ಚಿರುತ್ತದೆ. ಕೊರೊನಾ ಹಾವಳಿಯಿಂದ ಪಾರಾಗಬೇಕು, ದಯಮಾಡಿ ಮಾಸ್ಕ್ ಧರಿಸಿ. ಮತ್ತೆ ಯಾರೆಲ್ಲಾ ಮಾಸ್ಕ್ ಧರಿಸುವುದಿಲ್ಲವೋ ಅಂಥವರಿಗೆ ನಾನು ಮಾಸ್ಕ್ ಧರಿಸುವಂತೆ ಹೇಳುತ್ತೇನೆ. ಆದಷ್ಟು ಈ ವಿಡಿಯೋ ಶೇರ್ ಮಾಡಿ. ಜೊತೆಗೆ ಮಾಸ್ಕ್ ಧರಿಸಲು ಮರೆಯದಿರಿ. ನಮ್ಮನ್ನು ರಕ್ಷಿಸಿಕೊಳ್ಳೋಣ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ," ಎಂದು ಬರೆದುಕೊಂಡಿದ್ದಾರೆ‌.

Last Updated : Jul 12, 2020, 2:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.