ಮುಂಬೈ: ಹಿಂದಿ ಬಿಗ್ ಬಾಸ್ 13ರ ಸ್ಪರ್ಧಿ ಹಾಗೂ ಸಾಥ್ ನಿಭಾನಾ ಸಾಥಿಯಾ ಧಾರಾವಾಹಿ ಖ್ಯಾತಿಯ ನಟಿ ದೇವೊಲೀನಾ ಭಟ್ಟಾಚಾರ್ಜಿ ತಮ್ಮ ತವರು ರಾಜ್ಯವಾದ ಅಸ್ಸಾಂನಲ್ಲಿ ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ದೇಣಿಗೆ ನೀಡಿದ್ದಾರೆ.
"ನಾನು ಅಸ್ಸಾಂ ಸಿಎಂ ಪರಿಹಾರ ನಿಧಿಗೆ 73,000 ರೂ. ದೇಣಿಗೆ ನೀಡಿದ್ದೇನೆ ಮತ್ತು ಈ ಕಷ್ಟದ ಸಮಯದಲ್ಲಿ ಹೋರಾಡಲು ಹೆಚ್ಚಿನ ಜನರು ಸರ್ಕಾರವನ್ನು ಬೆಂಬಲಿಸಬೇಕು" ಎಂದಿದ್ದಾರೆ.
"ನೈಸರ್ಗಿಕ ವಿಪತ್ತಿನ ಪರಿಣಾಮ ಸಂಕಷ್ಟದಲ್ಲಿರುವ ನನ್ನ ಜನರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯವೆಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳಲ್ಲಿ ಪ್ರವಾಹ ಮತ್ತು ಭೂ ಕುಸಿತದಿಂದಾಗಿ 350ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. 2,50,000ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.