ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ವರ್ಷಕ್ಕೆ ಜನುಮ ದಿನ ಸಮಯಕ್ಕೆ ಲ್ಯಾಂಬೋರ್ಗಿನಿ ಕಾರು ಕೊಂಡಿದ್ದಾರೆ. ಕಾರಿನಲ್ಲಿ ಅಣ್ಣ ಶಿವರಾಜಕುಮಾರ್ ಸಹ ಒಂದು ರೌಂಡ್ ಹೋಗುವುದರ ಮುಖಾಂತರ ಚಾಲನೆ ಮಾಡಿದ್ದಾರೆ.
ಪ್ರತಿ ವರ್ಷ ಜಗ್ಗೇಶ್ ಅವರ ಜನುಮ ದಿನಕ್ಕೆ ಸರಿಯಾಗಿ ರಾಯರ ಸೇವೆಗೆ ಮಂತ್ರಾಲಯಕ್ಕೆ ಹೋಗಿ ಬರುತ್ತಾರೆ. ಆದರೆ ಈ ವರ್ಷ ಅವರು ಹಾಗೆ ಮಾಡುತ್ತಾ ಇಲ್ಲ. ಆದರೆ ನವರಸ ನಾಯಕ ಜಗ್ಗೇಶ್ ಕೆಲವು ಅಂಧರಿಗೆ ಮನೆ ಕಟ್ಟಿಸಿಕೊಟ್ಟು ಮಾರ್ಚ್ 12 ರಂದು ಅದರ ಗೃಹಪ್ರವೇಶ ಸಹ ಮಾಡಿ ಆನಂದದಲ್ಲಿ ಇದ್ದಾರೆ.
ಕೊರಟಗೆರೆ ಫ್ರೆಂಡ್ಸ್ ಹಾಗೂ ಜಗ್ಗೇಶ್ ಅಭಿಮಾನಿ ಬಳಗ ಅಂಧ ಹಾಡುಗಾರ್ತಿಯರಿಗೆ ಮಧುಗಿರಿ ತಾಲೂಕಿನ ಡಿ ವಿ ಹಳ್ಳಿ ಅಲ್ಲಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಆಗಿದೆ. ಅದಕ್ಕೆ ‘ಜಗ್ಗೇಶ್ ಪರಿಮಳ’ ನಿವಾಸ ಅಂತ ಹೆಸರಿಡಲಾಗಿದೆ. 9 ಅಡಿ ಚದರದ ಮನೆ ಜಗ್ಗೇಶ್ ಮುಂದಾಳತ್ವದಲ್ಲಿ ಕಟ್ಟಿಸಲಾಗಿದೆ. ಜೀ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಹಾಡುವ ಅಂಧ ಸೋದರಿಯರಾದ ಗೌರಮ್ಮ, ರತ್ನಮ್ಮ ಹಾಗೂ ಮಂಜಮ್ಮ ಅವರಿಗೆ ಜಗ್ಗೇಶ್ ನೀಡಿದ ಭರವಸೆಯನ್ನು ಪೂರ್ತಿಗೊಳಿಸಿದ್ದಾರೆ. ಸಿದ್ದರ ಬೆಟ್ಟದ ಶಿವಾಚಾರ್ಯ ಸ್ವಾಮಿಗಳು ಅಂಧ ಸೋದರಿಯರಿಗೆ ಮನೆಯ ಬೀಗವನ್ನು ಹಸ್ತಾಂತರ ಮಾಡಿದ್ದಾರೆ.
ಇಂತಹ ಕೊಡುಗೆ ಜನುಮ ದಿನಕ್ಕು ಐದು ದಿವಸಗಳ ಮುಂಚೆಯೇ ನಡೆದಿರುವುದು ಜಗ್ಗೇಶ್ ಅವರಿಗೆ ಅತ್ಯಂತ ಆನಂದವನ್ನು ಉಂಟುಮಾಡಿದೆ.