ಖಾಸಗಿ ವಾಹಿನಿಯ ಕಾರ್ಯಕ್ರಮಗಳಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಕೂಡ ಒಂದು. ದಿನೇ ದಿನೇ ತನ್ನ ಜನಪ್ರಿಯತೆಯನ್ನು ಹೆಚ್ಚಿಕೊಳ್ಳುತ್ತಿರುವ ಈ ಕಾರ್ಯಕ್ರಮದ 16ನೇ ಸೀಸನ್ ಶೀಘ್ರದಲ್ಲೇ ಶುರುವಾಗಲಿದೆ.
ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 8ಕ್ಕೆ ಪ್ರಸಾರ ಆಗುವ ಈ ಸಂಗೀತ ರಸದೌತಣಕ್ಕೆ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಬರೋಬ್ಬರಿ 30 ಜಿಲ್ಲೆಗಳಲ್ಲಿ ಹಾಡಲು ಬಯಸುವ ಎಲ್ಲಾ ಮಕ್ಕಳ ಧ್ವನಿ ಕೇಳಿ ಅಳೆದು ತೂಗಿ ಮೂವತ್ತು ಪುಟ್ಟ ಪ್ರತಿಭೆಗಳನ್ನು ಸರಿಗಮಪ ವೇದಿಕೆಗೆ ಕರತರಲಾಗಿತ್ತು.
ಎರಡು ವಾರಗಳ ಕಾಲ ನಡೆದ ಮೆಗಾ ಆಡಿಶನ್‌ನಲ್ಲಿ ಒಬ್ಬರಿಗಿಂತ ಒಬ್ಬರು ಸೊಗಸಾಗಿ ಹಾಡಿ ಜಡ್ಜ್ಗಳ ಮನ ಗೆದ್ದಿದ್ದಾರೆ. ಸಾಕ್ಷಿ, ಮೊನಮ್ಮ, ಶುಭದ, ಓಂಕಾರ್, ಕೀರ್ತಿ, ಮೀರಾ, ಜೋಷಿತ, ರುಬಿನ, ಪರ್ಣಿಕ, ಭಾರ್ಗವ್, ರೋಹನ್, ಸಂಗೀತ, ಅಪ್ರಮೇಯ, ಗುರುಕಿರಣ್, ಜ್ಞಾನ, ನಯನ, ಸುನಾದ್, ಶ್ರೇಯಸ್ ಮತ್ತು ಅಭಿಶ್ಯತ್ ಎಂಬ 19 ಪ್ರತಿಭೆಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.
ಮಹಾಗುರು ಹಂಸಲೇಖ, ವಿಜಯಪ್ರಕಾಶ್, ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ಈ 16ನೇ ಸೀಸನ್ ತೀರ್ಪುಗಾರರಾಗಿ ಇರಲಿದ್ದಾರೆ. ಎಂದಿನಂತೆ ಈ ಬಾರಿ ಕೂಡಾ ಅನುಶ್ರೀ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದು, ಮಾರ್ಚ್ 2ರಿಂದ ಕಾರ್ಯಕ್ರಮವನ್ನು ನೀವು ಟಿವಿಯಲ್ಲಿ ನೋಡಬಹುದು.