ಕಿರುತೆರೆ ವೀಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ನಿಮಗೆ ಮನರಂಜನೆ ನೀಡಲು 'ಗಿಣಿರಾಮ' ಬರುತ್ತಿದ್ದಾನೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಸೋಮವಾರದಿಂದ ರಾತ್ರಿ 8.30ಕ್ಕೆ ಹೊಚ್ಚ ಹೊಸ ಧಾರಾವಾಹಿ ಗಿಣಿರಾಮ ಆರಂಭವಾಗಲಿದೆ.
ಪ್ರೀತಮ್ ಶೆಟ್ಟಿ ನಿರ್ದೇಶನದ 'ಗಿಣಿರಾಮ' ಧಾರಾವಾಹಿಯು ಉತ್ತರ ಕರ್ನಾಟಕದ ಶೈಲಿಯಿಂದ ಕೂಡಿದ್ದು, ವಿಭಿನ್ನ ರೀತಿಯ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆಯಲು ಪ್ರಯತ್ನಿಸಲಾಗಿದೆ.
ಉತ್ತರ ಕರ್ನಾಟಕದ ಹುಡುಗನ ಜೊತೆಗೆ ಶಿವಮೊಗ್ಗದ ಹುಡುಗಿಯ ಮುದ್ದಾದ ಲವ್ ಸ್ಟೋರಿಯೇ 'ಗಿಣಿರಾಮ' ಧಾರಾವಾಹಿಯ ಕಥೆ. ಇದರ ಹೊರತಾಗಿ ಒಂದಷ್ಟು ರಾಜಕೀಯ, ಕಾಮಿಡಿ, ದ್ವೇಷ ಜೊತೆಗೆ ಜಗಳ ಹೀಗೆ ಎಲ್ಲಾ ಮಿಶ್ರಣಗಳು ಸೇರಿರುವ ಗಿಣಿರಾಮ ಇದೇ ಸೋಮವಾರದಿಂದ ಮನರಂಜನೆಯ ರಸದೌತಣ ನೀಡಲು ಬರುತ್ತಿದ್ದಾನೆ.
ಇನ್ನು, ನಾಯಕನಾಗಿ ರೇಣುಕ್ ಮಠದ್ ಕಾಣಿಸಿಕೊಂಡಿದ್ದರೆ. ನಾಯಕಿಯಾಗಿ ನಯನಾ ನಾಗರಾಜ್ ಅಭಿನಯಿಸಿದ್ದಾರೆ. ಉಳಿದಂತೆ ಚೈತ್ರಾ ಸಚಿನ್, ಲಕ್ಷ್ಮಿ ಸಿದ್ಧಯ್ಯ ಮುಂತಾದವರು ಅಭಿನಯಿಸಿದ್ದಾರೆ.