ETV Bharat / sitara

ಶೀಘ್ರದಲ್ಲೇ ಕೊನೆಯಾಗಲಿದೆ 'ಇಷ್ಟ ದೇವತೆ' ಧಾರಾವಾಹಿ

author img

By

Published : Oct 4, 2019, 8:11 PM IST

ಬಿಗ್​​ ಬಾಸ್ ಕಾರ್ಯಕ್ರಮಕ್ಕೆ ಒಂದು ಗಂಟೆ ಅವಧಿ ಸಮಯ ಬೇಕಾಗಿರುವುದರಿಂದ ವಾಹಿನಿಯ 2 ಧಾರಾವಾಹಿಗಳನ್ನು ಮುಗಿಸಲಾಗುತ್ತಿದೆ. ವರ್ಷಾನುಗಟ್ಟಲೆ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಇಷ್ಟ ದೇವತೆ' ಇಷ್ಟು ಬೇಗ ಮುಗಿಯುತ್ತಿರುವುದು ಧಾರಾವಾಹಿ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.

'ಇಷ್ಟ ದೇವತೆ'

ಕಲರ್ಸ್ ಕನ್ನಡದಲ್ಲಿ ಪ್ರತಿ ರಾತ್ರಿ 10.30 ಕ್ಕೆ ಪ್ರಸಾರವಾಗುತ್ತಿದ್ದ 'ಇಷ್ಟ ದೇವತೆ' ಧಾರಾವಾಹಿ ಮುಕ್ತಾಯದ ಹಂತಕ್ಕೆ ತಲುಪಿದೆ. 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಗೌರಿಯಾಗಿ ಗಮನ ಸೆಳೆದ ರಂಜನಿ ರಾಘವನ್‌ ಈ ಧಾರಾವಾಹಿಗೆ ಕಥೆ, ಚಿತ್ರಕಥೆ ಬರೆದಿರುವುದು ವಿಶೇಷ. ಜೊತೆಗೆ ಈ ಧಾರಾವಾಹಿಯ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೂಡಾ ರಂಜನಿ ಕೆಲಸ ಮಾಡಿದ್ದರು.

colors kannada
ಫೋಟೋ ಕೃಪೆ: ಕಲರ್ಸ್ ಕನ್ನಡ

ಭರತನಾಟ್ಯ ಕಲಾವಿದೆ ವೈದೇಹಿಗೆ ಅಪ್ಪನ ಕನಸು ನನಸು ಮಾಡುವ ಬಯಕೆ. ಅದಕ್ಕೆ ಪ್ರೋತ್ಸಾಹ ನೀಡುವ ಅಮ್ಮ. ತಂದೆಯ ಸಾವಿನಿಂದಾಗಿ, ತಂದೆ ಕಷ್ಟಪಟ್ಟು ಕಟ್ಟಿ ಬೆಳೆಸಿದ ಫುಡ್‌ ಇಂಡಸ್ಟ್ರಿ ಮುನ್ನಡೆಸುವ ಜವಾಬ್ದಾರಿ ನಾಯಕ ಶ್ರೀರಾಮ್‌ಗೆ. ವಾಸ್ತವವಾದಿ ನಾಯಕಿ, ಪರಮ ಭಕ್ತ ನಾಯಕ ಹೇಗೆ ಜೊತೆಯಾಗುತ್ತಾರೆ ಎಂಬುದೇ 'ಇಷ್ಟದೇವತೆ' ಧಾರಾವಾಹಿಯ ಕಥಾ ಹಂದರ‌‌. ವಿಭಿನ್ನ ಕಥಾ ತಿರುಳಿನ ಧಾರಾವಾಹಿ ಇದ್ದಕ್ಕಿದಂತೆ ಮುಕ್ತಾಯ ಕಾಣುತ್ತಿದೆ.

ಬಿಗ್​​ಬಾಸ್​​​​​​​​​​​​​​​ ಸೀಸನ್ 7 ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದ್ದು ಅದಕ್ಕೆ ಒಂದು ಗಂಟೆ ಸಮಯ ಬೇಕು. ಅದೇ ಕಾರಣದಿಂದ ರಾಧಾ ರಮಣ ಮತ್ತು ಇಷ್ಟದೇವತೆ ಧಾರಾವಾಹಿಯನ್ನು ಮುಕ್ತಾಯಗೊಳಿಸಲಾಗುತ್ತಿದೆ ಎನ್ನಲಾಗಿದೆ. 'ರಾಧಾರಮಣ' ಧಾರಾವಾಹಿ ಆರಂಭವಾಗಿ ಮೂರು ವರ್ಷ ಕಳೆದಿತ್ತು. ಆದರೆ 'ಇಷ್ಟದೇವತೆ' ಧಾರಾವಾಹಿ ಮೇ ತಿಂಗಳಿನಲ್ಲಿ ಆರಂಭವಾಗಿತ್ತು. ವರ್ಷಾನುಗಟ್ಟಲೆ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಇಷ್ಟ ದೇವತೆ'ಇಷ್ಟು ಬೇಗ ಮುಗಿಯುತ್ತಿರುವುದು ಧಾರಾವಾಹಿ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.

Intro:Body:ಕಲರ್ಸ್ ಕನ್ನಡ ದಲ್ಲಿ ಪ್ರತಿ ರಾತ್ರಿ 10.30ಗೆ ಪ್ರಸಾರವಾಗುತ್ತಿದ್ದ ಇಷ್ಟ ದೇವತೆ ಧಾರಾವಾಹಿ ಮುಕ್ತಾಯದ ಹಂತಕ್ಕೆ ತಲುಪಿದೆ. ಪುಟ್ಟಗೌರಿ ಮದುವೆ ಸೀರಿಯಲ್‌ ನ ಗೌರಿಯಾಗಿ ಗಮನ ಸೆಳೆದ ರಂಜಿನಿ ರಾಘವನ್‌ ಅವರು ಸೀರಿಯಲ್‌ ಒಂದಕ್ಕೆ ಕಥೆ, ಚಿತ್ರಕಥೆ ಬರೆದ ಧಾರಾವಾಹಿಯೇ ಇಷ್ಟದೇವತೆ. ಇದರ ಜೊತೆಗೆ ಇಷ್ಟದೇವತೆ ಧಾರಾವಾಹಿಯ ಕ್ರಿಯೇಟಿವ್‌ ಡೈರೆಕ್ಟರ್‌ ಕೂಡಾ ರಂಜಿನಿ ಆಗಿದ್ದರು.

ಭರತನಾಟ್ಯ ಕಲಾವಿದೆ ವೈದೇಹಿಗೆ ಅಪ್ಪನ ಕನಸು ನನಸು ಮಾಡುವ ಬಯಕೆ. ಅದಕ್ಕೆ ಪ್ರೋತ್ಸಾಹ ನೀಡುವ ಅಮ್ಮ. ಮುಂದೆ ಅಪ್ಪನ ಕನಸು ನನಸು ಮಾಡುವ ಗುರಿ ವೈದೇಹಿಯದ್ದು. ತಂದೆಯ ಸಾವಿನಿಂದಾಗಿ, ತಂದೆ ಕಷ್ಟಪಟ್ಟು ಕಟ್ಟಿ ಬೆಳೆಸಿದ ಫುಡ್‌ ಇಂಡಸ್ಟ್ರಿಯನ್ನು ಮುನ್ನಡೆಸುವ ಜವಾಬ್ದಾರಿ ನಾಯಕ ಶ್ರೀರಾಮ್‌ಗೆ. ವಾಸ್ತವವಾದಿ ನಾಯಕಿ, ಪರಮ ಭಕ್ತ ನಾಯಕ ಹೇಗೆ ಜೊತೆಯಾಗುತ್ತಾರೆ ಎಂಬುದೇ ಇಷ್ಟದೇವತೆ ಧಾರಾವಾಹಿಯ ಕಥಾ ಹಂದರ‌‌.

ವಿಭಿನ್ನ ಕಥಾ ಹಂದರದ ಧಾರಾವಾಹಿ ಇದ್ದಕ್ಕಿದಂತೆ ಮುಕ್ತಾಯ ಕಾಣುತ್ತಿರುವುದು ಬೇಸರದ ಸಂಗತಿ. ಟಿಆರ್ ಪಿ ಸಮಸ್ಯೆಯೇ ಮತ್ತೊಂದು ಕಾರಣ ಎಂದರೆ ಸುಳ್ಳಲ್ಲ. ಇದರ ಜೊತೆಗೆ ಬಿಗ್ ಬಾಸ್ ಸೀಸನ್ 7 ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದ್ದು ಅದಕ್ಕೆ ಒಂದು ಗಂಟೆ ಹೊತ್ತು ಸಮಯ ಬೇಕು. ಅದೇ ಕಾರಣದಿಂದ ರಾಧಾ ರಮಣ ಮತ್ತು ಇಷ್ಟದೇವತೆ ಧಾರಾವಾಹಿಯನ್ನು ಮುಕ್ತಾಯಗೊಳಿಸಲಾಗುತ್ತಿದೆ.

ರಾಧಾ ರಮಣ ಧಾರಾವಾಹಿ ಆರಂಭವಾಗಿ ಮೂರು ವರುಷ ಕಳೆದಿತ್ತು. ಆದರೆ ಇಷ್ಟದೇವತೆ ಧಾರಾವಾಹಿ ಮೇ ತಿಂಗಳಿನಲ್ಲಿ ಆರಂಭವಾಗಿತ್ತು. ವರ್ಷಾನುಗಟ್ಟಲೆ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ ಇಷ್ಟದೇವತೆ ಇಷ್ಟು ಬೇಗ ಮುಗಿಯುತ್ತಿರುವುದು ಬೇಸರದ ಸಂಗತಿ‌.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.