ಬಾಲಿವುಡ್ ನಟಿ ಸಮೀರಾ ರೆಡ್ಡಿ ಇಂದು ಬೆಳಗ್ಗೆ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಷಯವನ್ನು ಸಮೀರಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಸಮೀರಾ ಈ ಬಾರಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ಸಮೀರಾಗೆ ಒಂದು ಗಂಡುಮಗುವಿದೆ. ತನ್ನ ಮಗುವಿನ ಕೈ ಹಿಡಿದಿರುವ ಫೋಟೋ ಕ್ಲಿಕ್ ಮಾಡಿ ಆ ಫೋಟೋವನ್ನು ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದಾರೆ ಸಮೀರಾ. 'ಈ ದಿನ ನಮ್ಮ ಪುಟ್ಟ ಏಂಜಲ್ ಈ ಪ್ರಪಂಚಕ್ಕೆ ಕಾಲಿಟ್ಟಿದ್ದಾಳೆ. ನೀವು ನನಗೆ ತೋರಿಸಿದ ಪ್ರೀತಿ, ಪ್ರೇಮ, ಆಶೀರ್ವಾದಕ್ಕೆ ಧನ್ಯವಾದಗಳು' ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಈ ವಿಷಯ ತಿಳಿದ ನೆಟಿಜನ್ಗಳು ಸಮೀರಾಗೆ ಶುಭ ಕೋರಿದ್ದಾರೆ. 'ಆ ದೇವರ ಆಶೀರ್ವಾದ ನಿಮಗೆ ಸದಾ ಇರಲಿ' ಎಂದು ಹರಸಿದ್ದಾರೆ. ಸಮೀರಾ ರೆಡ್ಡಿ ಕಿಚ್ಚ ಸುದೀಪ್ ಜೊತೆ ಕನ್ನಡದಲ್ಲಿ 'ವರದನಾಯಕ' ಸಿನಿಮಾದಲ್ಲಿ ನಟಿಸಿದ್ದಾರೆ.
- " class="align-text-top noRightClick twitterSection" data="
">