ETV Bharat / sitara

ಲವ್​ ಸ್ಟೋರಿ ಜತೆ ಅಭಿಮಾನಿಗಳಿಗೆ ಉತ್ತಮ ಸಂದೇಶ ಸಾರುವ ಫ್ಯಾನ್ ​​​​​ - ಫ್ಯಾನ್ ​​​​​

fan movie
author img

By

Published : Aug 23, 2019, 7:15 PM IST

ಇಂದು ತೆರೆಕಂಡಿರುವ ಫ್ಯಾನ್ ಒಂದು ಸುಂದರ ಸಂಸಾರಿಕ ಸಿನಿಮಾ. ಮನೆ ಮಂದಿಯೆಲ್ಲಾ ಕುಳಿತು ನೋಡಬಹುದು. ಈ ಚಿತ್ರ ಕಟ್ಟಿ ಕೊಟ್ಟಿರುವ ರೀತಿ, ಭಾಷೆಯ ಸಂಸ್ಕೃತಿ, ಪರಿಸರ ಹಾಗೂ ಉತ್ತಮ ಅಭಿನಯ ಜೊತೆ ಚಿತ್ರಕಥೆ ನಮಗೆ ಈಗಿನ ಕಾಲದ ‘ನಮ್ಮೂರ ಮಂದಾರ ಹೂವೆ’ ಜ್ಞಾಪಕ ಬಂದು ಬಿಡುತ್ತದೆ.

ಈ ಚಿತ್ರದ ಮೂಲಕ ಕನ್ನಡಕ್ಕೆ ಒಬ್ಬ ಸೃಜನಶೀಲ ನಿರ್ದೇಶಕ ದರ್ಶಿತ್​​ ಭಟ್ ಸಿಕ್ಕಿದ್ದಾನೆ ಎಂಬುದನ್ನೂ ನಿಸ್ಸಂಶಯವಾಗಿ ಹೇಳಬಹುದು. ಚಿತ್ರದ ಸೆಕಂಡ್ ಹಾಫ್ ಅಲ್ಲಿ ಸ್ವಲ್ಪ ಎಳೆತ ಅನ್ನಿಸುತ್ತೆ. ಆದರೆ, ಆ ನಂತರ ನಿರ್ದೇಶಕರೂ ಅನುಸರಿಸಿರುವ ರೀತಿ ಪಸಂದಾಗಿದೆ. ಕಥಾ ನಾಯಕಿಗೆ ಪ್ರೀತಿಯಲ್ಲಿ ಮೋಸ ಆಯಿತು ಅನ್ನುವಷ್ಟರಲ್ಲಿ ಆಕೆಗೆ ಸತ್ಯ ಯಾವುದು, ಭ್ರಮೆ ಯಾವುದು ಎಂದು ಅನಾವರಣ ಮಾಡಿ ಚಿತ್ರವನ್ನೂ ಕೊನೆಯ ಹಂತಕ್ಕೆ ತಂದಿರುವುದು ಭೇಷ.

ಚಿತ್ರಕಥೆ ಏನು?

ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಧಾರಾವಾಹಿ ‘ಗೀತಾ’ ನಾಯಕ ಹಾಗೂ ನಾಯಕಿಗೆ ಹಲವಾರು ‘ಫ್ಯಾನ್’ ಇರುತ್ತಾರೆ. ಹೊನ್ನಾವರದ ಶಾಯಿರಿ (ಅದ್ವಿತೀ ಶೆಟ್ಟಿ) ಕಥಾ ನಾಯಕ ದೃಶ್ಯ (ಆರ್ಯನ್) ಅಪ್ಪಟ ಅಭಿಮಾನಿ ಆಗಿರುತ್ತಾಳೆ. ಈಕೆ ಗೀತಾ ಧಾರವಾಹಿಯನ್ನು ಬಹಳವಾಗಿ ಹಚ್ಚಿಕೊಂಡಿರುತ್ತಾಳೆ. ಧಾರವಾಹಿಯಲ್ಲಿ ಕಥಾ ನಾಯಕ ತನ್ನ ಮಡದಿಗೆ ತೋರುವ ಪ್ರೀತಿಯ ಪರಾಕಾಷ್ಟೆ ಶಾಯಿರಿ ಇಷ್ಟ ಪಟ್ಟಿರುತ್ತಾಳೆ. ಒಂದು ದಿನ ತನ್ನ ಮನೆಯಲ್ಲಿ ‘ಗೀತಾ’ ಚಿತ್ರ ತಂಡ ಚಿತ್ರೀಕರಣಕ್ಕೆ ಬಂದಾಗ ಶಾಯಿರಿಯ ಆನಂದ ಉತ್ತುಂಗಕ್ಕೆ ಹೋಗುತ್ತದೆ.

ಶಾಯಿರಿಯನ್ನು ಧಾರವಾಹಿಯ ನಟ ದೃಶ್ಯ (ಆರ್ಯನ್) ಇಷ್ಟ ಪಡುತ್ತಾನೆ. ಆದರೆ, ಮನೆಯಲ್ಲಿ ಶಾಯಿರಿಗೆ ಪ್ರಭಾವ್ ಜೊತೆ ನಿಶ್ಚಿತಾರ್ಥ ಆಗುವುದು ಚಿತ್ರ ಮತ್ತೊಂದು ಮಗ್ಗಲು ಬದಲಿಸುತ್ತದೆ.

ಶಾಯಿರಿಯ ಮನಸನ್ನು ಅರ್ಥ ಮಾಡಿಕೊಂಡ ಪ್ರಭಾವ್ ತನ್ನ ಮದುವೆಯ ನಿರ್ಧಾರವನ್ನು ಬದಲಿಸುವ ಹಂತಕ್ಕೆ ಹೋಗುತ್ತಾನೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್​​ನಲ್ಲಿ ಒಂದು ವಿಭಿನ್ನ ಟರ್ನ್ ಅನ್ನು ನಿರ್ದೇಶಕರು ಇಟ್ಟು, ಅವರ ನಿರ್ಧಾರವೇ ಸರಿ ಎನ್ನುವಷ್ಟು ಪ್ರೇಕ್ಷಕರು ಹಿಡಿಸುವಷ್ಟು ಅಂತ್ಯ ಹಾಡಿದ್ದಾರೆ. ಆ ಕ್ಲೈಮ್ಯಾಕ್ಸ್ ನಿರ್ಧಾರ ಏನು ಅಂತ ನೀವು ಚಿತ್ರ ಮಂದಿರದಲ್ಲಿ ನೋಡಬೇಕು.

ತಾರಾಗಣದ ಅಭಿನಯ ಹೇಗಿದೆ?

ನಟ ಆರ್ಯನ್ ಮೊದಲ ಪ್ರಯತ್ನದಲ್ಲಿ ಚಂದವಾಗಿ ಕಾಣುವುದಷ್ಟೇ ಅಲ್ಲ ಅಭಿನಯವನ್ನು ಸಹ ಸಲೀಸಾಗಿ ಮಾಡಿಕೊಂಡು ಹೋಗಿದ್ದಾರೆ. ಆದರೆ, ಈ ಚಿತ್ರದ ಹೈಲೈಟ್ ಅದ್ವಿತೀ ಶೆಟ್ಟಿ. ಇವರು ಕನ್ನಡದ ಮತ್ತೊಬ್ಬಳು ರಾಧಿಕಾ ಪಂಡಿತ್ ಆದರೂ ಆಶ್ಚರ್ಯ ಪಡಬೇಕಿಲ್ಲ. ಪಾತ್ರವನ್ನು ಚನ್ನಾಗಿ ಅರ್ಥ ಮಾಡಿಕೊಂಡು ಭಾವನೆಗಳನ್ನೂ ಬಹಳ ವ್ಯಕ್ತ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅದ್ವಿತಿ ಶೆಟ್ಟಿ ಸಹ ಒಳ್ಳೆಯ ಸ್ಥಾನ ಪಡೆದುಕೊಳ್ಳುವುದಕ್ಕೆ ಈ ಚಿತ್ರದಲ್ಲಿ ಕುರುಹು ಸಿಕ್ಕಿದೆ.

ಪೋಷಕರಲ್ಲಿ ಪ್ರಭಾವ್ ಪಾತ್ರಧಾರಿ, ರವಿ ಭಟ್, ಸಮೀಕ್ಷಾ, ನವೀನ್ ಪಡಿಲ್, ರಘು ಪಾಂಡೇಶ್ವರ್, ಸಂಗೀತ, ಮಂಡ್ಯ ರಮೇಶ್ ಅವರದು ಮೆಚ್ಚುಗೆ ಗಳಿಸುವ ಪಾತ್ರಗಳು.

ನಾಲಿಗೆಗೆ ಜ್ವರ ಬಂದಿದೆ....ಜೊತೆಗೆ ಇನ್ನೆರೆಡು ಹಾಡುಗಳು ಪರ್ವಾಗಿಲ್ಲ. ಮೊಬೈಲ್ ಇಂದ ರವಾನೆ ಆಗುವ ಹಾಡಿಗೆ ಕನ್ನಡದ ಹಳೆ ಸಿನಿಮಾಗಳ ರಾಗಗಳನ್ನು ಮೆತ್ತಗೆ ಸೇರಿಸಿಕೊಂಡಿದ್ದಾರೆ ಜಂಟಿ ಸಂಗೀತ ನಿರ್ದೇಶಕರುಗಳಾದ ವಿಕ್ರಮ್ ಹಾಗೂ ಚಂದನ. ಪ್ರತಿಯೊಂದು ಫ್ರೇಮ್ ಅನ್ನು ಛಾಯಾಗ್ರಾಹಕ ಪವನ್ ಕುಮಾರ್ ಸುಂದರವಾಗಿಸಿದ್ದಾರೆ. ಡ್ರೋನ್ ಕ್ಯಾಮರಾ ಬಳಸಿ ಹೊನ್ನಾವರದ ಸುತ್ತ ಮುತ್ತ ಸೆರೆ ಹಿಡಿಯಲಾದ ದೃಶ್ಯಗಳು ಕಣ್ಣಿಗೆ ಹಬ್ಬ.

ಈ ಚಿತ್ರ ಶಂಕರ್ ನಾಗ್ ಅಭಿಮಾನಿಯ ಕಥೆ ಎಂದು ಸೆಕಂಡ್ ಹಾಫ್ ಅಲ್ಲಿ ವ್ಯಕ್ತ ಆಗುತ್ತದೆ. ಶಂಕರ್ ನಾಗ್ ಹುಟ್ಟಿ ಬೆಳೆದ ಊರಿನಲ್ಲಿ ಚಿತ್ರೀಕರಣ ಆಗಿರುವುದು ಇದೆ ಮೊದಲು. ‘ಫ್ಯಾನ್’ ಚಿತ್ರದ ಆರಂಭದಲ್ಲಿ ಒಂದು ಟೆಕ್ ಆಫ್ ಹಾಸ್ಯ ನಟ ಕುರಿ ಪ್ರತಾಪ್ ಅವರಿಂದ ಸಂಭಾಷಣೆ ಮೂಲಕ ಮೂಡಿಬಂದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.