ETV Bharat / sitara

ಕನಸಿಗೂ ನನಸಿಗೂ ಸೇಡಿನ ಲೇಪನ ಈ 'ಹಗಲು ಕನಸು'

author img

By

Published : Dec 6, 2019, 3:46 PM IST

Hagalu kanasu
'ಹಗಲು ಕನಸು'

ದಿನೇಶ್ ಬಾಬು ಸಿನಿಮಾ ಎಂದರೆ ಸಿನಿಪ್ರಿಯರು ಆ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಇಡೀ ಕುಟುಂಬವೇ ಥಿಯೇಟರ್​​​ಗೆ ಹೋಗಿ ಜೊತೆಯಲ್ಲಿ ಕುಳಿತು ಸಿನಿಮಾ ನೋಡುತ್ತಾರೆ. ದಿನೇಶ್ ಬಾಬು ನಿರ್ದೇಶನದ ಹೊಸ ಸಿನಿಮಾ 'ಹಗಲು ಕನಸು' ಇಂದು ಬಿಡುಗಡೆಯಾಗಿದೆ. ಮಾಸ್ಟರ್ ಆನಂದ್ ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ. 'ಹಗಲು ಕನಸು' ಚಿತ್ರದಲ್ಲಿ ಒಂದು ಸಹಜವಾದ ಕನಸು ಹಾಗೂ ಮತ್ತೊಂದು ಸೇಡಿನ ಕನಸು. ಇವೆರಡೂ ಈ ಚಿತ್ರದ ಹೈಲೈಟ್ ಎನ್ನಬಹುದು.

ದಿನೇಶ್ ಬಾಬು ಅವರು ಕ್ಯಾಮರಾ ಕಣ್ಣಿನಿಂದ ಹೇಗೆ ಎಲ್ಲವನ್ನೂ ಅಂದವಾಗಿ ಕಾಣುವಂತೆ ಮಾಡುತ್ತಾರೋ ಅದೇ ರೀತಿ ಅವರು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಕೂಡಾ ಚೊಕ್ಕವಾಗಿರುತ್ತವೆ. ಇನ್ನು, ಈ ಚಿತ್ರದ ಪಾತ್ರ ಆನಂದ್ ಅವರ ಇಮೇಜ್​​ಗೆ ತಕ್ಕಂತಿದೆ. ಸಿನಿಮಾ ನಿರೂಪಣಾ ಶೈಲಿ ಕೂಡಾ ಬಹಳ ಚೆನ್ನಾಗಿದೆ. ಇಬ್ಬರು ಹೆಣ್ಣುಮಕ್ಕಳು ಹಾಗೂ ಓರ್ವ ಮಗ ಇರುವ ಕುಟುಂಬಕ್ಕೆ ನಾಯಕಿ ಬಿರುಗಾಳಿಯಂತೆ ಬರುತ್ತಾಳೆ. ನಾಯಕ ವಿಕ್ರಿಗೆ (ಮಾಸ್ಟರ್ ಆನಂದ್) ಮಚ್ಚೆ ಇರುವ ಹುಡುಗಿ ಆಗ್ಗಾಗ್ಗೆ ಕನಸಿನಲ್ಲಿ ಬರುತ್ತಿರುತ್ತಾಳೆ. ಅದರೆ ಕನಸಿನಲ್ಲಿ ಕಾಣುವ ಹುಡುಗಿ ತೇಜಸ್ವಿನಿ (ಸನಿಹ ಯಾದವ್) ನಿಜವಾಗಿಯೂ ಆನಂದ್ ಮನೆಗೆ ಬರುತ್ತಾಳೆ. ಆಕೆ ಕೂಡಾ ಕನಸೊಂದನ್ನು ಹೊತ್ತು ನಾಯಕನ ಮನೆಗೆ ಬರುತ್ತಾಳೆ. ಮನೆಯವರ ಭಾವನೆಗಳೊಂದಿಗೆ ಆಟ ಆಡಲು ಆರಂಭಿಸುತ್ತಾಳೆ. ಮನೆಯವರನ್ನು ಹಣಕ್ಕಾಗಿ ಬ್ಲಾಕ್​ಮೇಲ್ ಮಾಡುತ್ತಾಳೆ. ಆಕೆ ಏಕೆ ಹೀಗೆಲ್ಲಾ ಮಾಡುತ್ತಾಳೆ. ನಾಯಕನ ಮನೆಗೆ ಅವಳು ಬರಲು ಕಾರಣವೇನು ಎಂಬುದನ್ನು ನೀವು ತೆರೆ ಮೇಲೆಯೇ ನೋಡಬೇಕು.

ಮಾಸ್ಟರ್ ಆನಂದ್ ನಾಯಕ ಆಗಿ ಸಂಭಾಷಣೆ ಒಪ್ಪಿಸುವಲ್ಲಿ ಗೆದ್ದಿದ್ದಾರೆ. ನಾಯಕಿ ಆಗಿ ಸನಿಹ ಯಾದವ್ ಬಹಳ ಇಷ್ಟ ಆಗಲು ಕಾರಣ ಆ ಪಾತ್ರಕ್ಕೆ ಇರುವ ಗತ್ತು. ವಾಣಿಶ್ರೀ, ನೀನಾಸಂ ಅಶ್ವಥ್, ಅಶ್ವಿನಿ ಹಾಸನ್, ಚಿತ್ಕಲಾ, ಮನ್​​​ದೀಪ್​​​​​​​​​​​​​ ರೈ ಅಭಿನಯ ಪೂರಕವಾಗಿದೆ. ಕಾರ್ತಿಕ್ ವೆಂಕಟೇಶ್ ಅವರ ಎರಡು ಹಾಡುಗಳು ರಾಗದಲ್ಲಿ ಸಮೃದ್ಧವಾಗಿವೆ. ಸಾರಂಗಿ...ಹಾಡು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ದಿನೇಶ್ ಬಾಬು ಅವರ ಕ್ಯಾಮರಾ ಕೈಚಳಕ ಕಣ್ಣಿಗೆ ಹಬ್ಬದಂತಿದೆ. ಸಿನಿಮಾ ನೋಡಲು ಅಡ್ಡಿಯಿಲ್ಲ.

ಹಗಲು ಕನಸು – ಕನಸಿಗು ನನಸಿಗು ಸೇಡಿನ ಲೇಪನ

ಅವದಿ – 120 ನಿಮಿಷ ಕ್ಯಾಟಗರಿ – ಫ್ಯಾಮಿಲಿ ಡ್ರಾಮಾ, ರೇಟಿಂಗ್ – 3.5/5

ಚಿತ್ರ – ಹಗಲು ಕನಸು, ನಿರ್ಮಾಪಕರುಗಳು - ವಿ ಜಿ ಅಚ್ಯುತ ರಾಜುಎಂ ಪದ್ಮನಾಭರಹಮತ್, ನಿರ್ದೇಶನ – ದಿನೇಶ್ ಬಾಬು, ಛಾಯಾಗ್ರಹಣ – ದಿನೇಶ್ ಬಾಬು, ಸಂಗೀತ – ಕಾರ್ತಿಕ್ ವೆಂಕಟೇಶ್, ತಾರಾಗಣ - ಮಾಸ್ಟೆರ್ ಆನಂದ್, ಸನಿಹ ಯಾದವ್ನಾರಾಯಣ ಸ್ವಾಮಿನೀನಾಸಮ್ ಅಶ್ವಥ್ಮನದೀಪ್ ರಾಯ್ಅಶ್ವಿನ್ ಹಾಸನ್, ವಾಣಿಶ್ರೀ, ಸ್ವಸ್ತಿಕ್ ಶಂಕರ್ಚಿತ್ಕಲಾ ಹಾಗೂ ಇತರರು.

ನುರಿತ ನಿರ್ದೇಶಕ ಹಾಗೂ ಛಾಯಾಗ್ರಾಹಕ ದಿನೇಶ್ ಬಾಬು ಕುಟುಂಬ ಸಮೇತ ನೋಡಲು ಇಚ್ಛಿಸುವ ಸಿನಿಮಾ ಮಾಡುವುದಕ್ಕೆ ಸದಾ ಮುಂದಾಗಿರುತ್ತಾರೆ. ಈ ಹಗಲು ಕನಸು ಸಹ ಅದೇ ದಾಟಿಯಲ್ಲಿದೆ. ಅದರ ಜೊತೆಗೆ ಕನಸನ್ನು ಇವರು ನಾಯಕ ಹಾಗೂ ನಾಯಕಿ ಇಂದ ಪೂರ್ತಿಗೊಳಿಸುತ್ತಾರೆ. ಒಂದು ಸಹಜವಾದ ಕನಸು ಮತ್ತು ಇನ್ನೊಂದು ಸೇಡಿನ ಕನಸು. ಇವೆರಡು ಸಹ ನನಸಾಗುವುದೇ ಈ ಚಿತ್ರದ ಹೈಲೈಟ್!

ದಿನೇಶ್ ಬಾಬು ಅವರ ಕ್ಯಾಮರಾ ಕಣ್ಣಿನಿಂದ ಹೇಗೆ ಎಲ್ಲವನ್ನೂ ಚಂದಗಾಣಿಸುತ್ತಾರೋ ಹಾಗೂ ಅವರ ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಸಹ ಚೊಕ್ಕವಾಗಿ ಅಭಿನಯ ಮಾಡಿರುತ್ತದೆ. ಈ ಚಿತ್ರದ ಮೂಲಕ ಮಾಸ್ಟೆರ್ ಆನಂದ್ ನಾಯಕ ಪಟ್ಟ ಏರಿದ್ದರು ಇದು ಅವರ ಇಮೇಜಿಗೆ ತಕ್ಕ ಹಾಗೆ ಇದೆ. ನಿರ್ದೇಶಕರ ನಿರೂಪಣಾ ಶೈಲಿ ಸಿನಿಮಾವನ್ನು ಸುಲಲಿತವಾಗಿ ನೋಡಿಸಿಕೊಂಡು ಹೋಗುತ್ತದೆ.

ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ ಇರುವ ಕುಟುಂಬದಲ್ಲಿ ಬಿರುಗಾಳಿ ಅಂತೆ ಬರುವವಳೇ ನಾಯಕಿ. ನಾಯಕ ವಿಕ್ರಿ (ಮಾಸ್ಟೆರ್ ಆನಂದ್) ಮಚ್ಚೆ ಇರುವ ಹುಡುಗಿಯ ಹಗಲು ಕನಸು ಕಾಣುವಂತೆ ನಾಯಕಿ ತೇಜಸ್ವಿನಿ (ಸನಿಹ ಯಾದವ್) ಸಹ ಕನಸೊಂದನ್ನು ಹೊತ್ತು ಈ ಮನೆಗೆ ಆಗಮಿಸುತ್ತಾಳೆ. ಆದರೆ ತೇಜಸ್ವಿನಿ ಆಸೆಗಳು ಹಾಗೂ ಭಾವನೆಗಳ ಜೊತೆ ಆಟ ಶುರು ಮಾಡಿಕೊಳ್ಳುತ್ತಾಳೆ. ಅದಕ್ಕೆ ಬಲವಾದ ಕಾರಣ ಸಹ ಇದೆ.

ವಿಕ್ರಿಯೆ ಜೊತೆಗೆ ಹಾಸಿಗೆಯಲ್ಲಿ ಆಲಿಂಗನ, ಮನೆಯ ಇಬ್ಬರು ಅಳಿಯಂದಿರುಗಳ (ನಿನಸಮ್ ಅಶ್ವಥ್ ಮತ್ತು ಅಶ್ವಿನ್ ಹಾಸನ್) ಜೊತೆ ಸರಸದ ದೃಶ್ಯಗಳು ತೇಜಸ್ವಿನಿ ಮೊಬೈಲ್ ಅಲ್ಲಿ ಬಂದಿಯಾಗಿದೆ. ಈ ಮೂವರನ್ನು ಹಣಕ್ಕಾಗಿ ಬ್ಲಾಕ್ ಮೈಲ್ ಮಾಡುತ್ತಾಳೆ. ಅತ್ತ ಕಡೆ ಮನೆಯ ಹೆಣ್ಣುಮಕ್ಕಳ ಜೊತೆ ತನಗೆ ಕಾನ್ಸರ್ ಇದೆ ಬದುಕುವುದು ಬಹಳ ಕಡಿಮೆ ದಿವಸ ಎಂಬ ಭಾವನೆಗಳ ಅಸ್ತ್ರ ಉಪಯೋಗ ಮಾಡುತ್ತಾಳೆ ತೇಜಸ್ವಿನಿ. ಇವಳಿಗೆ ಕರಗಿ ಬೆಂಬಲ ಸಹ ದಕ್ಕುತ್ತದೆ.

ಆದರೆ ತೇಜಸ್ವಿನಿ ಹೀಗೆ ಏಕೆ ಮಾಡಿದಳು ಎಂಬುದನ್ನ ಮನೆಯ ಯಜಮಾನ (ಸ್ವಸ್ತಿಕ್ ಶಂಕರ್) ಹಾಗೂ ಪತ್ನಿ ಚಿತ್ಕಲಾ ಆಗಮಿಸಿದಾಗ ತೆರೆದುಕೊಳ್ಳುತ್ತದೆ. ತೇಜಸ್ವಿನಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು ಯಾಕೆ ಹೀಗೆ ಮಾಡಿದಳು ಎಂಬುದಕ್ಕೆ ಒಂದು ಸಣ್ಣ ಫ್ಲಶ್ ಬ್ಯಾಕ್ ಸಹ ತೆರೆಯ ಮೇಲೆ ಬರುತ್ತದೆ.

ಮುಂದೆ ಏನು....ಮೂವರನ್ನು ಬ್ಲಾಕ್ ಮೈಲ್ ಮಾಡಿದ್ದು ಯಾತಕ್ಕೆ, ಮನೆಯ ಯಜಮಾನ ತೆಗೆದುಕೊಳ್ಳುವ ನಿರ್ಧಾರ ಏನು....ನಾಯಕಿ ತಾನು ಕಂಡ ಕನಸು ನೆರವೇರುವುದೇ....ಸಿನಿಮಾ ಮಂದಿರದಲ್ಲೇ ನೋಡಬೇಕು.

ಮಾಸ್ಟೆರ್ ಆನಂದ್ ನಾಯಕ ಆಗಿ ಸಂಭಾಷಣೆ ಒಪ್ಪಿಸುವಲ್ಲಿ ಗೆದಿದ್ದಾರೆ. ನಾಯಕಿ ಆಗಿ ಸನಿಹ ಯಾದವ್ ಬಹಳ ಇಷ್ಟ ಆಗಲು ಕಾರಣ ಆ ಪಾತ್ರಕ್ಕೆ ಇರುವ ಗತ್ತು. ವಾಣಿಶ್ರೀ, ನಿನಸಮ್ ಅಶ್ವಥ್, ಅಶ್ವಿನಿ ಹಾಸನ್, ಚಿತ್ಕಲಾ, ಮಂದೀಪ್ ರೈ ಅಭಿನಯ ಪೂರಕವಾಗಿದೆ.

ಕಾರ್ತಿಕ್ ವೆಂಕಟೇಶ್ ಅವರ ಎರಡು ಹಾಡುಗಳು ರಾಗದಲ್ಲಿ ಸಮೃದ್ದವಾಗಿದೆ. ಸಾರಂಗಿ....ಹಾಡು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ದಿನೇಶ್ ಬಾಬು ಅವರ ಕ್ಯಾಮರಾ ಕೈಚಳಕ ಕಣ್ಣಿಗೆ ಹಬ್ಬ.

ಒಂದು ಸರಾಗವಾಗಿ ನೋಡಿಸಿಕೊಂಡು ಹೋಗುವ ಸಿನಿಮಾ ಅಂತ್ಯದಲ್ಲಿ ಸುಖಾಂತ್ಯ ಹಾಡುತ್ತದೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.