ETV Bharat / sitara

ಕಣ್ಣೀರು ಹಾಕಿದ ಪ್ರಶಾಂತ್ ಸಂಬರಗಿ, ಸಮಾಧಾನಪಡಿಸಿದ ವೈಷ್ಣವಿ: ಕಾರಣ ? - Bigg Boss house

ರೂಮಿನೊಳಗೆ ಹೋಗಿ ಪ್ರಶಾಂತ್ ಕಣ್ಣೀರು ಹಾಕಿದರು.‌ ಆ ವೇಳೆ ಬಂದ ವೈಷ್ಣವಿ, ಯಾರು ಏನೇ ಹೇಳಿದರು ನಿಮ್ಮ ಮೇಲಿನ ಅಭಿಪ್ರಾಯ ಬದಲಾಗುವುದಿಲ್ಲ ಎಂದ ವೈಷ್ಣವಿ, ಪ್ರಶಾಂತ್ ಅವರನ್ನು ಸಮಾಧಾನಪಡಿಸಿದ್ದಾರೆ.

 chakravarthy outrage against prashant sambargi in Bigg Boss house

author img

By

Published : Jul 9, 2021, 2:08 AM IST

ಬಿಗ್ ಬಾಸ್ ಸೀಸನ್ 8 ರ ಸೆಕೆಂಡ್ ಇನ್ನಿಂಗ್ಸ್ ನ ಆರಂಭದಲ್ಲಿ ಹೊತ್ತಿಕೊಂಡ ಬೆಂಕಿ ಇನ್ನೂ ಆರಿಲ್ಲ. ಮನೆಯಲ್ಲಿ ತುಂಬಾ ಆತ್ಮೀಯರಾಗಿದ್ದ ಪ್ರಶಾಂತ್ ಹಾಗೂ ಚಕ್ರವರ್ತಿ ದಿನೇ‌ದಿನೇ ಜಗಳವಾಡಿಕೊಳ್ಳುತ್ತಲೇ‌ ಇದ್ದಾರೆ.

ವೈಷ್ಣವಿ ಅವರಿಗೆ ಪ್ರಶಾಂತ್​ ನೀಡಿದ ಸಲಹೆಯನ್ನು ಸ್ವೀಕರಿಸಲಿಲ್ಲ ಎಂಬ ಚಕ್ರವರ್ತಿ ಅವರ ಮಾತಿಗೆ ಮನೆಯಲ್ಲಿ ದೊಡ್ಡ ಮಾತಿನ ಚಕಮಕಿ ನಡೆದಿದೆ. ಕ್ಯಾಪ್ಟನ್ಸಿಗಾಗಿ ನಡೆಯುತ್ತಿರುವ ಟಾಸ್ಕ್ ನಲ್ಲಿ ವೈಷ್ಣವಿಗೆ ಸಹಕಾರ ನೀಡಲು ಪ್ರಶಾಂತ್ ಒಪ್ಪಿದ್ದಾರೆ. ಹೀಗಾಗಿ, ಟಾಸ್ಕ್ ಸಂದರ್ಭದಲ್ಲಿ ವೈಷ್ಣವಿ ಅವರಿಗೆ ಪ್ರಶಾಂತ್ ಸಲಹೆಯೊಂದನ್ನು ನೀಡಿದ್ದಾರೆ. ಆ ಸಲಹೆಯನ್ನು ವೈಷ್ಣವಿ ಬಳಸದೇ ತಮಗೆ ಸರಿ ಅನಿಸಿದ್ದನ್ನು ಮಾಡಿದ್ದಾರೆ.

ಈ ವಿಷಯವನ್ನು ಚಕ್ರವರ್ತಿ ಪ್ರಶಾಂತ್ ಅವರಿಗೆ ಹೇಳಿ ಈ ಬಗ್ಗೆ ವೈಷ್ಣವಿ ಅವರೊಂದಿಗೆ ಚರ್ಚಿಸಬೇಡ ಎಂದಿದ್ದಾರೆ. ಆದರೆ, ಪ್ರಶಾಂತ್ ವೈಷ್ಣವಿ ಬಳಿ ಈ ಬಗ್ಗೆ ಕ್ಲಾರಿಟಿ ಪಡೆದುಕೊಂಡಿದ್ದಾರೆ.ಈ ಮಧ್ಯೆ, ಈ ವಿಷಯದ ಬಗ್ಗೆ ಮಾತನಾಡಬೇಡ ಎಂದಿದ್ದರೂ ವೈಷ್ಣವಿ ಬಳಿ ಕೇಳಿದ್ದೀಯಾ? ನೀನು ಸ್ನೇಹಿತನಲ್ಲ. ನಾನು ತಂದೆ ತಾಯಿಗೆ ಹುಟ್ಟಿದವನು ಎಂದೆಲ್ಲಾ ಚಕ್ರವರ್ತಿ ಬೈದರು.

ನಂತರ ಚಕ್ರವರ್ತಿ ಅವರ ಮಾತು ಕೇಳಿಸಿಕೊಂಡು ರೂಮಿನೊಳಗೆ ಹೋಗಿ ಪ್ರಶಾಂತ್ ಕಣ್ಣೀರು ಹಾಕಿದರು.‌ ಆ ವೇಳೆ ಬಂದ ವೈಷ್ಣವಿ ನಾನು ಯಾರ ಬಗ್ಗೆಯೂ ಹಿಂದೆ ಮಾತನಾಡುವುದಿಲ್ಲ. ರೇಗಿಸುವುದಿದ್ದರೂ ಅವರ ಮುಂದೆಯೇ ರೇಗಿಸುತ್ತೇನೆ. ಈ ವಿಷಯವನ್ನು ಚಕ್ರವರ್ತಿ ಅವರೇ ಕೆದಕಿದ್ದು. ಯಾರು ಏನೇ ಹೇಳಿದರು ನಿಮ್ಮ ಮೇಲಿನ ಅಭಿಪ್ರಾಯ ಬದಲಾಗುವುದಿಲ್ಲ ಎಂದ ವೈಷ್ಣವಿ, ಪ್ರಶಾಂತ್ ಅವರನ್ನು ಸಮಾಧಾನಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.