ಬೆಂಗಳೂರು: ಪುನೀತ್ ರಾಜ್‌ಕುಮಾರ್ ನಿಧನವಾಗಿ ಇಂದಿಗೆ 9 ದಿನಗಳು ಕಳೆದರೂ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಇನ್ನೂ ಶೋಕದಲ್ಲೇ ಇದ್ದಾರೆ. ಈ ನಡುವೆ ಅಪ್ಪು ನಿವಾಸಕ್ಕೆ ಗಣ್ಯರು, ದಕ್ಷಿಣ ಭಾರತದ ನಟ-ನಟಿಯರು ಆಗಮಿಸಿ ಕುಟುಂಬಸ್ಥರಿಗೆ ಧೈರ್ಯ ಹೇಳುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ನಿವಾಸಕ್ಕೆ ನಟಿ ಪ್ರಿಯಾಮಣಿ ಜೊತೆಗೆ ಹಿರಿಯ ನಟಿ ಗೀತಾ ಕೂಡ ಭೇಟಿ ನೀಡಿ ಸುಮಾರು ಒಂದು ಗಂಟೆ ಕಾಲ ಪುನೀತ್ ಪತ್ನಿ ಅಶ್ವಿನಿ ಹಾಗೂ ಶಿವರಾಜ್ ಕುಮಾರ್ ಜೊತೆ ಮಾತುಕತೆ ನಡೆಸಿದರು. ಡಾ.ರಾಜ್‌ಕುಮಾರ್ ಜೊತೆ ಹಿರಿಯ ನಟಿ ಗೀತಾ ಅವರು ನಟಿಸಿದ್ದರು.