ವಾಷಿಂಗ್ಟನ್: ನಟ ರಾಬರ್ಟ್ ಡಿ ನಿರೋ ತಮ್ಮ "ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್" ಚಿತ್ರದ ಚಿತ್ರೀಕರಣಕ್ಕಾಗಿ ಒಕ್ಲಹೋಮದಲ್ಲಿದ್ದಾಗ ಕಾಲಿಗೆ ಗಾಯವಾಗಿದೆ.
ಖ್ಯಾತ ಚಲನಚಿತ್ರ ನಿರ್ಮಾಪಕ ಮಾರ್ಟಿನ್ ಸ್ಕಾರ್ಸೆಸೆ ಅವರ 'ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್' ಚಿತ್ರದ ಚಿತ್ರೀಕರಣದ ವೇಳೆ ಹಾಲಿವುಡ್ ನಟ ರಾಬರ್ಟ್ ಡಿ ನಿರೋ ಕಾಲಿಗೆ ಗಾಯವಾದ ಹಿನ್ನೆಲೆ ಅವರು ನ್ಯೂಯಾರ್ಕ್ಗೆ ಮರಳಿದ್ದಾರೆ. ಇದರಲ್ಲಿ ಅವರು ಲಿಯೊನಾರ್ಡೊ ಡಿಕಾಪ್ರಿಯೊ ಅವರೊಂದಿಗೆ ನಟಿಸುತ್ತಿದ್ದಾರೆ.
ಮೂಲಗಳ ಪ್ರಕಾರ ಗಾಯವು ಸೆಟ್ನಲ್ಲಿ ಸಂಭವಿಸಿದ್ದಲ್ಲ. ಬೇರೆ ಸಮಯದಲ್ಲಿ ಸಂಭವಿಸಿದೆ ಎನ್ನಲಾಗುತ್ತಿದೆ. ಗುರುವಾರ ಅವರು ನ್ಯೂಯಾರ್ಕ್ಗೆ ವಾಪಸ್ಸಾಗಿದ್ದು, ಶುಕ್ರವಾರ ವೈದ್ಯರನ್ನು ಭೇಟಿ ಮಾಡ್ತಾರೆ ಎಂದು ಟಿಎಂಜೆಡ್ ವರದಿ ಮಾಡಿದೆ. ಸದ್ಯ ಅವರು ಸೆಟ್‌ಗೆ ಹಿಂತಿರುಗಲಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ.
ಈ ಸಿನಿಮಾವನ್ನು 200 ಮಿಲಿಯನ್ ಯುಎಸ್ ಡಾಲರ್ಸ್ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗ್ತಿದ್ದು, ಈಗಾಗಲೇ ಫಸ್ಟ್-ಲುಕ್ ಬಿಡುಗಡೆ ಮಾಡಲಾಗಿದೆ.