ವಾಷಿಂಗ್ಟನ್: ಅಮೆರಿಕದ ಮಾಡೆಲ್ ಬೆಲ್ಲಾ (American Model Bella Hadid) ಹಡಿಡ್ ಅಳುತ್ತಿರುವ ಕೆಲವು ಸೆಲ್ಫಿ ಫೋಟೋಗಳನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ಮಾನಸಿಕ ಆನಾರೋಗ್ಯದ (Mental Health) ವಿರುದ್ಧ ಹೋರಾಡುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ.
ಕಣ್ಣೀರಿಡುತ್ತಿರುವ ಫೋಟೋಗಳ ಜೊತೆಗೆ ಬೆಲ್ಲಾ ಹಡಿಡ್, ತನ್ನ ಆಪ್ತಸ್ನೇಹಿತ ವಿಲೋ ಸ್ಮಿತ್ ಅವರ ವಿಡಿಯೋವನ್ನು ಪೋಸ್ಟ್ ಮಾಡಿದ್ದಾಳೆ. ಅನಾರೋಗ್ಯ ವಿರುದ್ಧ ಬೆಲ್ಲಾ ತಮ್ಮ ಹೋರಾಟ ಹಾಗೂ ಅಭದ್ರತೆ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡುವ ವಿಲೋ ಅವರ ವಿಡಿಯೋವನ್ನು ನೋಡಿದ ನಂತರ, ವಿಲೋ ಸ್ಮಿತ್ ನಾನು ನಿನ್ನನ್ನು ಮತ್ತು ನಿಮ್ಮ ಮಾತುಗಳನ್ನು ಇಷ್ಟಪಡುತ್ತೇನೆ. ಇದು ನನಗೆ ಸ್ವಲ್ಪ ಕಡಿಮೆ ಒಂಟಿತನವನ್ನುಂಟು ಮಾಡಿದೆ. ಅದಕ್ಕಾಗಿಯೇ ನಾನು ಇದನ್ನು ಪೋಸ್ಟ್ ಮಾಡಲು ಬಯಸುತ್ತೇನೆ ಎಂದು ಬೆಲ್ಲಾ ಹಡಿಡ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
- " class="align-text-top noRightClick twitterSection" data="
">
ನಾವೆಲ್ಲರೂ ಕಾಲಕಾಲಕ್ಕೆ ಅನುಭವಿಸುವ ಅಭದ್ರತೆ ಹಾಗೂ ಗೊಂದಲದ ಭಾವನೆಗಳ ಬಗ್ಗೆ ಮಾತನಾಡಿರುವ 25 ವರ್ಷದ ಬೆಲ್ಲಾ, ಪ್ರತಿಯೊಬ್ಬರೂ ಮೂಲತಃ ಒಂದೇ ರೀತಿಯ ಭಾವನೆಯನ್ನು ಹೊಂದಿದ್ದಾರೆಂದು ಜನರು ಮರೆತುಬಿಡುತ್ತಾರೆ ಇಲ್ಲ ಕಳೆದುಹೋಗಿದ್ದಾರೆ ಅಥವಾ ಗೊಂದಲಕ್ಕೊಳಗಾಗಿದ್ದಾರೆ. ಪ್ರತಿಯೊಬ್ಬರೂ ಆತಂಕವನ್ನು ಅನುಭವಿಸುತ್ತಾರೆ. ಅದನ್ನು ಯಾವುದೋ ಒಂದು ರೀತಿಯಲ್ಲಿ ಮುಚ್ಚಿಡಲು ಪ್ರಯತ್ನಿಸುತ್ತಾರೆ ಎಂದಿದ್ದಾರೆ.
ಬೆಲ್ಲಾ ಹಡಿದ್ ಅವರು ಹಲವು ವರ್ಷಗಳ ಹಿಂದೆಯೇ ತೀವ್ರ ಆತಂಕ ಮತ್ತು ಖಿನ್ನತೆಯ ವಿರುದ್ಧ ಹೋರಾಡುವ ಬಗ್ಗೆ ಈ ಮೊದಲು ಮಾತನಾಡಿದ್ದರು. ನಿನ್ನೆಯ ಪೋಸ್ಟ್‌ನಲ್ಲಿ ಸಾಮಾಜಿಕ ಮಾಧ್ಯಮವು ನಿಜ ಜೀವನವಲ್ಲ ಎಂದು 47 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ಬೆಲ್ಲಾ ಹಡಿಡ್ ಮತ್ತೊಮ್ಮೆ ನೆನಪಿಸಿಕೊಂಡಿದ್ದಾಳೆ.