ETV Bharat / sitara

ಬೆನ್ನು ತೋರಿಸಿದ್ದಕ್ಕೆ ತರಹೇವಾರಿ ಕಮೆಂಟ್ಸ್​.. ಟ್ರೋಲ್​ಗೆ ತಕ್ಕ ಉತ್ತರ ನೀಡಿದ ನಟಿ ತಾಪ್ಸಿ ಪನ್ನು - ರಶ್ಮಿ ರಾಕೆಟ್‌ ಸಿನಿಮಾ ಬಿಡುಗಡೆಯ ದಿನಾಂಕ

ಬಾಲಿವುಡ್​​ ನಟಿ ತಾಪ್ಸಿ ಪನ್ನು ಫೋಟೋವೊಂದಕ್ಕೆ, ''ಪುರುಷರ ರೀತಿಯ ದೇಹ ಕೇವಲ ತಾಪ್ಸಿಯದ್ದಾಗಿರುತ್ತದೆ'' ಎಂದು ಟೀಕೆಗಳು ಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ತಾಪ್ಸಿ, ''ನಾನು ಹೇಳುವುದೇನೆಂದರೆ .. ಈ ಸಾಲನ್ನು ನೆನಪಿಟ್ಟುಕೊಳ್ಳಿ ಮತ್ತು ಸೆಪ್ಟೆಂಬರ್ 23ರವರೆಗೆ ಕಾಯಿರಿ. ಧನ್ಯವಾದಗಳು, ನಾನು ಈ ಅಭಿನಂದನೆಗಾಗಿ ನಿಜವಾಗಿಯೂ ಶ್ರಮಿಸಿದ್ದೇನೆ" ಎಂದಿದ್ದಾರೆ.

taapsee pannu
ನಟಿ ತಾಪ್ಸಿ ಪನ್ನು
author img

By

Published : Sep 21, 2021, 12:10 PM IST

ಬಾಲಿವುಡ್​​ ನಟಿ ತಾಪ್ಸಿ ಪನ್ನು ಟೀಕಾಕಾರರಿಗೆ ಸುಲಭವಾಗಿ ಉತ್ತರ ನೀಡುವುದರಲ್ಲಿ ನಿಪುಣರೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗೆ ತಮ್ಮ ಫೋಟೋವೊಂದಕ್ಕೆ ಬಂದ ಕಮೆಂಟ್​ಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್​​ ನಟಿ ತಾಪ್ಸಿ ಪನ್ನು ಅವರ ಬಹು ನಿರೀಕ್ಷಿತ ಸಿನಿಮಾ 'ರಶ್ಮಿ ರಾಕೆಟ್‌' ಸಿನಿಮಾ ಬಿಡುಗಡೆಯ ದಿನಾಂಕ ಬಿಡುಗಡೆಯಾದ ನಂತರ, ಟ್ವಿಟರ್​ನಲ್ಲಿ ಫೋಟೋವೊಂದನ್ನು (ಬೆನ್ನು ತೋರಿಸಿ ತಾಪ್ಸಿ ನಿಂತ ಚಿತ್ರ) ಹಾಕಿ ಇದು ಯಾರು ಎಂದು ಊಹಿಸುವಿರಾ ಎಂದು ಕೇಳಲಾಗಿತ್ತು. ಈ ಪೋಸ್ಟ್‌ಗೆ ಟ್ವಿಟರ್​ನಿಂದ ಅನೇಕ ಟೀಕೆಗಳು ಬಂದವು. ''ಪುರುಷರ ರೀತಿಯ ದೇಹ ಕೇವಲ ತಾಪ್ಸಿಯದ್ದಾಗಿರುತ್ತದೆ'' ಎಂದು ಟ್ರೋಲ್​ ಮಾಡಲಾಗಿತ್ತು.

ಇದನ್ನೂ ಓದಿ: ಮಾಜಿ ಪ್ರಿಯಕರನನ್ನು ಬಿಗಿದಪ್ಪಿ, ಕಿಸ್ ಮಾಡಿದ ನಟಿ ಜಾನ್ಹವಿ ಕಪೂರ್​​: Video

​​ನಟಿ ತಾಪ್ಸಿ ಪನ್ನು ಪ್ರತಿಕ್ರಿಯಿಸಿ, ''ನಾನು ಹೇಳುವುದೇನೆಂದರೆ .. ಈ ಸಾಲನ್ನು ನೆನಪಿಟ್ಟುಕೊಳ್ಳಿ ಮತ್ತು ಸೆಪ್ಟೆಂಬರ್ 23ರವರೆಗೆ ಕಾಯಿರಿ. ಧನ್ಯವಾದಗಳು, ನಾನು ಈ ಅಭಿನಂದನೆಗಾಗಿ ನಿಜವಾಗಿಯೂ ಶ್ರಮಿಸಿದ್ದೇನೆ" ಎಂದಿದ್ದಾರೆ. ನಟಿಯ ದೇಹವನ್ನು ನಾಚಿಸುವಂತಹ ಟ್ರೋಲ್ ಅನ್ನು ತಾಪ್ಸಿ ಸುಲಭವಾಗಿ ತಳ್ಳಿಹಾಕಿದ್ದಾರೆಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕ್ರೀಡಾಪಟು ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾಪ್ಸಿ, ಅಥ್ಲೀಟ್​ ರಶ್ಮಿಯಾಗಿ ಹಾಕಿ ಸ್ಟಿಕ್ ಹಿಡಿದು ಮೈದಾನದಲ್ಲಿ ಧೂಳೆಬ್ಬಿಸಲಿದ್ದಾರೆ. ಈ ಚಿತ್ರವನ್ನು ಅಕ್ಟೋಬರ್ 15 ರಂದು OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.