ಹೈದರಾಬಾದ್: ತನ್ನ ಗೆಳೆಯ ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ಮರಣದ ನಂತರ ಸುದ್ದಿಯಿಂದ ದೂರ ಉಳಿದಿದ್ದ ನಟಿ ಶೆಹನಾಜ್ ಗಿಲ್ ಇತ್ತೀಚೆಗೆ ಕೆಲಸಕ್ಕೆ ಮರಳಿದ್ದಾರೆ. ಶೆಹನಾಜ್ ಗಿಲ್ ತನ್ನ ಮುಂಬರುವ ಪಂಜಾಬಿ ಚಿತ್ರ ಹೊನ್ಸಲಾ ರಾಖ್‌ನ ಪ್ರಚಾರಕ್ಕಾಗಿ ಇದೀಗ ಚಿತ್ರತಂಡ ಸೇರಿಕೊಂಡಿದ್ದಾರೆ.
- " class="align-text-top noRightClick twitterSection" data="
">
'ಬಿಗ್ ಬಾಸ್ 13' ವಿಜೇತ ಸಿದ್ದಾರ್ಥ್ ಶುಕ್ಲಾ ಇತ್ತೀಚೆಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಟೆಲಿವಿಷನ್ ಸ್ಟಾರ್ ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ನಿಧನದಿಂದ ಮಧುರ ಪ್ರೇಮಕಥೆ ದುರಂತ ಅಂತ್ಯವಾಗಿದೆ. ಶುಕ್ಲಾ ನಿಧನದ ನಂತರ ಅವರ ಗೆಳತಿ ಶೆಹನಾಜ್ ಗಿಲ್ ಸುದ್ದಿಯಿಂದ ಕೊಂಚ ದೂರವೇ ಉಳಿದಿದ್ದರು. ಇದೀಗ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ.
ಇದನ್ನೂ ಓದಿ: ವಿಡಿಯೋ: ಅಮ್ಮನ ಹಸ್ತಾಕ್ಷರವನ್ನೇ 'ಟ್ಯಾಟೂ' ಹಾಕಿಸಿಕೊಂಡ ನಟಿ ಜಾಹ್ನವಿ
ಇಂದು ನಿರ್ಮಾಪಕ ದಿಲ್ಜಿತ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹೊನ್ಸಲ್ ರಾಖ್‌ನ ಪ್ರಮುಖ ನಟಿಯರಾದ ಶೆಹನಾಜ್ ಗಿಲ್ ಮತ್ತು ಸೋನಮ್ ಬಜ್ವಾ ಅವರೊಂದಿಗೆ ಕಾಣಿಸಿಕೊಂಡ ರೀಲ್ ಒಂದನ್ನು ಹಂಚಿಕೊಂಡಿದ್ದಾರೆ. ಪ್ರಚಾರದಲ್ಲಿರುವ ಚಿತ್ರತಂಡ ಹೊನ್ಸಲಾ ರಾಖ್‌ನ ದೃಶ್ಯವನ್ನು ಮರುಸೃಷ್ಟಿಸಿದ ವೇಳೆ ತೆಗೆದ ವಿಡಿಯೋ ಇದಾಗಿದೆ. ಸಿದ್ದಾರ್ಥ್ ಸಾವಿನ ನಂತರ ನಟಿ ಶೆಹನಾಜ್ ಗಿಲ್ ಮೊದಲ ಬಾರಿಗೆ ಕಾಣಿಸಿಕೊಂಡ ವಿಡಿಯೋ ಕೂಡಾ ಇದಾಗಿದೆ.