ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ನಟ ಸೈಫ್ ಅಲಿ ಖಾನ್ ಇಂದು ತಮ್ಮ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಕರೀನಾ ಕಪೂರ್ ಖಾನ್ ಪತಿ ಸೈಫ್ನೊಂದಿಗೆ ತೆಗೆದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಗ್ರೀಸ್‌ನಲ್ಲಿ ಒಟ್ಟಿಗೆ ಕಳೆದ ಸಮಯ ತಮ್ಮ ಜೀವನವನ್ನು ಬದಲಾಯಿಸಿತು ಎಂದು ತಿಳಿಸಿದರು.
- " class="align-text-top noRightClick twitterSection" data="
">
ನಟಿ ಕರೀನಾ ಕಪೂರ್ ಖಾನ್ ಮತ್ತು ನಟ ಸೈಫ್ ಅಲಿ ಖಾನ್ ದಂಪತಿ ಇಂದು ತಮ್ಮ 9ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಇನ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಇದು ತಶಾನ್ ಚಿತ್ರೀಕರಣಕ್ಕಾಗಿ 2008ರಲ್ಲಿ ಗ್ರೀಸ್‌ಗೆ ಭೇಟಿ ನೀಡಿದಾಗ ತೆಗೆದ ಫೋಟೋವಾಗಿದೆ.
ಈ ಫೋಟೋ ಹಂಚಿಕೊಂಡ ಕರೀನಾ, ''ಗ್ರೀಸ್ನಲ್ಲೊಂದು ಕಾಲದಲ್ಲಿ..ಒಂದು ಬೌಲ್ ಸೂಪ್ ಮತ್ತು ನಾವು... ಆ ಸಮಸಯ ನಮ್ಮ ಜೀವನವನ್ನೇ ಬದಲಿಸಿಬಿಟ್ಟಿತು...ಪ್ರಪಂಚದ ಅತ್ಯಂತ ಸುಂದರ ವ್ಯಕ್ತಿಗೆ ವಾರ್ಷಿಕೋತ್ಸವದ ಶುಭಾಶಯಗಳು''...ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆ ಮತ್ತು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.