ಹೈದರಾಬಾದ್ (ತೆಲಂಗಾಣ) : ಬಾಲಿವುಡ್ನ ಖ್ಯಾತ ನಟಿ ಜಾಹ್ನವಿ ಕಪೂರ್ ಸಹೋದರಿ ಖುಷಿ ಕಪೂರ್ ಅವರ ಗೆಳೆಯ ಎನಿಸಿಕೊಂಡಿರುವ ಆಕಾಶ್ ಮೆಹ್ತಾ ಹುಟ್ಟುಹಬ್ಬಕ್ಕೆ ಧಡಕ್ ಬೆಡಗಿ ಜಾಹ್ನವಿ ವಿಶೇಷವಾಗಿ ಶುಭಕೋರಿದ್ದಾರೆ.
ಜಾಹ್ನವಿ ಕಪೂರ್ ತಮ್ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಹಳೆಯ ಫೋಟೋಸ್ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಜಾಹ್ನವಿ ಮತ್ತು ಖುಷಿ, ಆಕಾಶ್ ಮೆಹ್ತಾ ಅವರೊಂದಿಗೆ ಪೋಸ್ ನೀಡುತ್ತಿರುವ ಪೋಟೋ ಹಾಕಿ ಬರ್ತ್ ಡೇ ಶುಭಾಶಯ ತಿಳಿಸಿದ್ದಾರೆ. ' ಹ್ಯಾಪಿ ಬರ್ತ್ ಡೇ @ ಆಕಾಶ್ ಮೆಹ್ತಾ, ನಾವು ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇವೆ'' ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಕಳೆದ ಏಪ್ರಿಲ್‌ನಲ್ಲಿ ಆಕಾಶ್ ಅವರೊಂದಿಗಿನ ಫೋಟೋ ಶೇರ್ ಮಾಡುವ ಮೂಲಕ ತಮ್ಮ ಸಂಬಂಧದ ಬಗ್ಗೆ ಖುಷಿ ಕಪೂರ್ ಸ್ಪಷ್ಟನೆ ನೀಡಿದ್ದರು. ಫೋಟೋದಲ್ಲಿ ಅವರು ನ್ಯೂಯಾರ್ಕ್‌ನ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಖುಷಿ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: Watch video: ನಟನಾ ಶಾಲೆಯ ಹಳೆ ದಿನಗಳನ್ನು ಮೆಲುಕು ಹಾಕಿದ ವಿಕ್ಕಿ ಕೌಶಲ್
ಕಳೆದ ಕೆಲ ದಿನಗಳಲ್ಲಿ ಜಾಹ್ನವಿ ಮತ್ತು ಖುಷಿ ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ.