ETV Bharat / sitara

''ಇದು ನಿಮ್ಮ ಕ್ಷಣವಲ್ಲ, ಕತ್ರಿನಾರನ್ನು ಮಿಂಚಲು ಬಿಡಿ'' - ದೀಪಿಕಾ ಪಡುಕೋಣೆ ಮಾಡಿದ್ದಾದರು ಏನು? - ಮದುವೆ ಫೋಟೋ ಡಿಲಿಟ್​ ಮಾಡಿದ ದೀಪಿಕಾ ಪಡುಕೋಣೆ

ವಿಕ್ಕಿ ಕೌಶಲ್-ಕತ್ರಿನಾ ಕೈಫ್ ವಿವಾಹ ಸಂದರ್ಭದಲ್ಲಿ ನಟಿ ದೀಪಿಕಾ ಪಡುಕೋಣೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿದ್ದ ತಮ್ಮ ಮದುವೆಯ ಫೋಟೋಗಳನ್ನು ಡಿಲಿಟ್​ ಮಾಡಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದಾರೆ.

Deepika padukone unarchives her wedding pics on vickat wedding day
ವಿಕ್ಕಿ ಕೌಶಲ್​ ಕತ್ರಿನಾ ಕೈಫ್ ವಿವಾಹ
author img

By

Published : Dec 9, 2021, 4:09 PM IST

Updated : Dec 9, 2021, 4:21 PM IST

ಹೈದರಾಬಾದ್ (ತೆಲಂಗಾಣ): ಬಾಲಿವುಡ್​​ ಸೆಲೆಬ್ರಿಟಿ ಕಪಲ್​ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್ ಇಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿ ಇಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್​ ಫೋರ್ಟ್ ಬರ್ವಾರಾದಲ್ಲಿ ವಿವಾಹವಾಗುತ್ತಿದ್ದಾರೆ.

ವಿಕ್ಕಿ ಕೌಶಲ್​ ಕತ್ರಿನಾ ಕೈಫ್ ವಿವಾಹ : ಮದುವೆ ಕುರಿತಾದ ಯಾವುದೇ ಮಾಹಿತಿ ಸೋರಿಕೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಈ ಜೋಡಿಯ ಆಪ್ತರು ಈ ಸುಂದರ ಕ್ಷಣದಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಬಾಲಿವುಡ್​ ನಟಿ ದೀಪಿಕಾ ಪಡಿಕೋಣೆ ವರ್ತನೆ ಮಾತ್ರ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಹೌದು, ನಟಿ ದೀಪಿಕಾ ಪಡುಕೋಣೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿದ್ದ ತನ್ನ ಮದುವೆಯ ಫೋಟೋಗಳನ್ನು ಡಿಲಿಟ್​ ಮಾಡಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಅದ್ಧೂರಿ ಮದುವೆ ಸಕತ್​ ಸೌಂಡ್​ ಮಾಡ್ತಿದ್ದು, ಈ ವೇಳೆ ದೀಪಿಕಾ ಪಡುಕೋಣೆ ತಮ್ಮ ಮದುವೆ ಸುಂದರ ಕ್ಷಣಗಳ ಚಿತ್ರಗಳನ್ನು, 2018ರಲ್ಲಿ ವಿವಾಹ ಆಗುತ್ತಿರುವುದಾಗಿ ಘೋಷಣೆ ಮಾಡಿದ ಪೋಸ್ಟ್​ ಅನ್ನು ಡಿಲಿಟ್​​ ಮಾಡಿದ್ದಾರೆ.

ನಟಿ ದೀಪಿಕಾ ಪಡುಕೋಣೆಯ ಈ ವರ್ತನೆಗೆ ಯಾವ ವಿಷಯ ಪ್ರೇರೇಪಿಸಿರಬಹುದೆಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿಕ್ಕಿ-ಕತ್ರಿನಾ ಅವ್ರ ಅದ್ಧೂರಿ ವಿವಾಹ ದೀಪಿಕಾ ಪಡುಕೋಣೆಯ ಅಸೂಯೆಗೆ ಕಾರಣವಾಗಿರಬಹುದಾ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ರೆ, ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಎಂದು ಮತ್ತೆ ಕೆಲವರು ಭಾವಿಸಿದ್ದಾರೆ.

ಇದನ್ನೂ ಓದಿ: Vicky-Katrina Wedding: ಇಂದು ಅದ್ಧೂರಿಯಾಗಿ ಹಸೆಮಣೆ ಏರುತ್ತಿರುವ ವಿಕ್ಕಿ ಕೌಶಲ್​- ಕತ್ರಿನಾ ಕೈಫ್

ಕತ್ರಿನಾ ಅವರ ಈ ವಿಶೇಷ ಕ್ಷಣಗಳನ್ನು ಕದಿಯುವ ಪ್ರಯತ್ನ ಬೇಡ, ಇದು ನಿಮ್ಮ ಸಮಯವಲ್ಲ, ಕತ್ರಿನಾ ಕೈಫ್ ಅವರನ್ನು ಈ ಸಂಭ್ರದ ಕ್ಷಣದಲ್ಲಿ ಮಿಂಚಲು ಬಿಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಇದು "ಬಚ್ಚೋ ವಾಲಿ ಹರ್ಕತ್" ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ನಟಿ ದೀಪಿಕಾ ಪಡುಕೋಣೆಯ ಈ ವರ್ತನೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಆದ್ರೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ..

Last Updated : Dec 9, 2021, 4:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.