ಹೈದರಾಬಾದ್: ನಟರಾದ ಸಿದ್ಧಾರ್ಥ್ ಶುಕ್ಲಾ ಮತ್ತು ಸೋನಿಯಾ ರಥೀ ತಮ್ಮ ಮುಂಬರುವ ವೆಬ್ ಶೋ ಬ್ರೋಕನ್ ಬಟ್ ಬ್ಯೂಟಿಫುಲ್ ಸೀಸನ್ 3ರ ಟೀಸರ್ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.
ಸ್ವಲ್ಪ ನಾಚಿಕೆ ಸ್ವಭಾವವನ್ನು ಟೀಸರ್ನಲ್ಲಿ ತೋರಿಸಲಾಗಿದ್ದು, ಕಥೆಯ ಬಗ್ಗೆ ಹೆಚ್ಚು ಬಹಿರಂಗಪಡಿಸಿಲ್ಲ. ಆದರೆ, ಸ್ವಲ್ಪ ಮಟ್ಟಿಗೆ ಪರಿಚಯ ನೀಡುತ್ತದೆ. ನಂತರ ದಂಪತಿಗಳು ಪ್ರೀತಿಯಲ್ಲಿ ಬೀಳುತ್ತಾರೆ.
ಮೊದಲ ಎರಡು ಸೀಸನ್ಗಳಲ್ಲಿ ಇಬ್ಬರು ವ್ಯಕ್ತಿಗಳ ಪ್ರೇಮಕಥೆಯನ್ನು ಪ್ರದರ್ಶಿಸಲಾಗಿತ್ತು. ಅವರು ಅತ್ಯಂತ ಅನಿರೀಕ್ಷಿತ ಸಂದರ್ಭಗಳಲ್ಲಿ ಭೇಟಿಯಾಗುತ್ತಾರೆ ಹಾಗೆ ಶೀಘ್ರದಲ್ಲೇ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾರೆ. ಆದರೆ, ಈಗಿನ ಸೀಸನ್ನಲ್ಲಿ ಇದು ಭಿನ್ನವಾಗಿದ್ದು, ಹೊಸ ಜೋಡಿ ಪರಿಚಯಿಸುತ್ತಿದ್ದು, ಸಿದ್ಧಾರ್ಥ್ ಮತ್ತು ಸೋನಿಯಾ ಅವರು ಟೀಸರ್ನಲ್ಲಿ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ.
ಪ್ರಿಯಾಂಕಾ ಘೋಸ್ ನಿರ್ದೇಶನದ ಈ ಚಿತ್ರ ಮೇ 29 ರಿಂದ ಎಎಲ್ಟಿ ಬಾಲಾಜಿಯಲ್ಲಿ ಪ್ರಸಾರವಾಗಲಿದೆ.