ಫೆಬ್ರವರಿ 14 ಪ್ರೇಮಿಗಳ ದಿನ. ಪ್ರೇಮಿಗಳಿಗೆ ಇದು ಬಹಳಾನೇ ವಿಶೇಷ. ಜೋಡಿಗಳು ವಿಭಿನ್ನ ರೀತಿಯಲ್ಲಿ ಈ ದಿನವನ್ನು ಆಚರಿಸುತ್ತಾರೆ. ಇಂದು ಹಗ್ ಡೇ (ಅಪ್ಪುಗೆಯ ದಿನ) ಆಗಿದ್ದು, ಬಾಲಿವುಡ್ ಸೆಲೆಬ್ರಿಟಿಗಳ ಅಪ್ಪುಗೆಯ ಫೋಟೋ ಇಲ್ಲಿವೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ : ಬಾಲಿವುಡ್ ಸ್ಟಾರ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ತಮ್ಮ ನಡೆ-ನುಡಿಗಳಿಂದ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಇವರಿಬ್ಬರ ನಡುವಿನ ಪ್ರೀತಿ ನೋಡಿದ ಅಭಿಮಾನಿಗಳು ಮಾರು ಹೋಗಿದ್ದಾರೆ. ಇವರಿಬ್ಬರ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ : ಹೊಸ ಸ್ಟೈಲ್ ಮತ್ತು ಜೋಶ್ಗೆ ಹೆಸರುವಾಸಿ ಈ ಜೋಡಿ. ಪ್ರೀತಿ ವಿಚಾರದಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ ಈ ಸ್ಟಾರ್ ದಂಪತಿ. ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ರಣವೀರ್-ದೀಪಿಕಾ ಜೋಡಿ ಫೇಮಸ್.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ : ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ ವಿರುಷ್ಕಾ ದಂಪತಿ. ಸಾಕಷ್ಟು ಅಭಿಮಾನಿ ಬಳಗ ಹೊಂದಿರೋ ಈ ಜೋಡಿ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಾರೆ.

ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ : ಪ್ರೀತಿ ಮತ್ತು ಮದುವೆಗೆ ವಯಸ್ಸಿನ ಅಂತರ ಮುಖ್ಯವಲ್ಲ ಎಂದು ತೋರಿಸಿಕೊಟ್ಟಿದ್ದು ಈ ಜೋಡಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಈ ಜೋಡಿ ತಮ್ಮ ಪ್ರೀತಿ ವ್ಯಕ್ತಪಡಿಸುವಲ್ಲಿ ಎಂದಿಗೂ ಫೇಲ್ ಆಗಿಲ್ಲ.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ : ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಜೊತೆಗೆ ಕ್ಯೂಟ್ ಕಪಲ್ ಎನಿಸಿಕೊಂಡಿದ್ದಾರೆ. ಈ ಜೋಡಿಯ ಮದುವೆಗೆ ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ.

ವರುಣ್ ಧವನ್ ಮತ್ತು ನತಾಶಾ ದಲಾಲ್ : 2021ರ ಜನವರಿಯಲ್ಲಿ ಬಾಲಿವುಡ್ ನಟ ವರುಣ್ ಧವನ್ ಹಾಗೂ ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವರುಣ್ ಈಗ ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ.
