ETV Bharat / sitara

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಬೈಕ್​.. ಆಸೆ ಈಡೇರಿಸಿದ Bigg Boss

ಬಿಗ್​ ಬಾಸ್​ ಮನೆಯಲ್ಲಿ ತಮ್ಮ ಬೈಕ್ ನೋಡಿ ಅರವಿಂದ್ ಹಾಗೂ ಮನೆಯ ಸದಸ್ಯರು ಅಚ್ಚರಿಗೊಂಡರು. ಬೈಕರ್ ಅರವಿಂದ್ ತನ್ನ ಬೈಕ್​ ಬಗ್ಗೆ ಮನೆಯ ಸದಸ್ಯರಿಗೆ ವಿವರಿಸಿದರು.

author img

By

Published : Aug 3, 2021, 2:01 PM IST

Bigg Boss
ಬಿಗ್​ ಬಾಸ್

ಬೈಕ್‌ ರೇಸ್​​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕನ್ನಡಿಗ ಕೆ.ಪಿ. ಅರವಿಂದ್ ಅವರ ಬೈಕ್ ಬಿಗ್​ಬಾಸ್​ ಮನೆಯ ಗಾರ್ಡನ್ ಏರಿಯಾದಲ್ಲಿ ಕಂಗೊಳಿಸಿತು. ಬೈಕ್ ನೋಡಿ ಅರವಿಂದ್ ಹಾಗೂ ಬಿಗ್ ಬಾಸ್ ಮನೆಯ ಸದಸ್ಯರು ಸಂತಸಗೊಂಡರು.

ಬಿಗ್ ಬಾಸ್​ ಮನೆಯಲ್ಲಿ ಈಡೇರದೆ ಇರುವ ಆಸೆಯ ಬಗ್ಗೆ ಹೇಳಿಕೊಳ್ಳಲು ಬಿಗ್ ಬಾಸ್ ಹೇಳಿದ್ದರು. ಅದರಂತೆ ಅರವಿಂದ್ ತಮ್ಮ ಬೈಕ್‌ನ್ನು ಗಾರ್ಡನ್ ಏರಿಯಾದಲ್ಲಿ ನೋಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದರು.

ಅರವಿಂದ್ ಆಸೆಪಟ್ಟಂತೆ ಸಂಜೆ ಹೊತ್ತಿಗೆ ಗಾರ್ಡನ್ ಏರಿಯಾದಲ್ಲಿ ಬೈಕ್ ಸದ್ದು ಮಾಡಿತು.‌ ಬೈಕ್​ ಜೊತೆಗೆ ಅರವಿಂದ್ ಅವರ ಫೋಟೋವಾಲ್​ ಕೂಡ ಮಾಡಲಾಗಿತ್ತು. ಇದು ಅರವಿಂದ್ ಅವರಿಗೆ ಸಖತ್ ಸರ್​ಪ್ರೈಸ್​ ನೀಡಿತು. ಬಳಿಕ ಬೈಕ್ ಬಗ್ಗೆ ಮನೆಯ ಸದಸ್ಯರಿಗೆ ಅರವಿಂದ್ ವಿವರಿಸಿದರು. ಅಲ್ಲದೇ, ಅದನ್ನು ಸ್ಟಾರ್ಟ್ ಮಾಡಿ ತೋರಿಸಿದರು. ಮನೆಯ ಸದಸ್ಯರು ಖುಷಿಪಟ್ಟರು.

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಬೈಕ್
ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಬೈಕ್

ಜೊತೆಗೆ ತಮ್ಮ ಫೋಟೋವಾಲ್ ನೋಡಿ ಬಿಗ್ ಬಾಸ್ ಮನೆಯಲ್ಲಿ ಕಳೆದ ದಿನಗಳನ್ನು ನೆನೆದರು. ಬಿಗ್ ಬಾಸ್ ಅನುಮತಿ ನೀಡಿದರೆ ಈ ಫೊಟೋವಾಲ್​ ಅನ್ನು ಮನೆಗೆ ತೆಗೆದುಕೊಂಡು ಹೋಗುತ್ತೇನೆ ಎಂಬ ಆಸೆ ವ್ಯಕ್ತಪಡಿಸಿದರು.

Bigg Boss Kannada 8: ಮನೆಯ ಸದಸ್ಯರ ಈಡೇರದ ಬಯಕೆಗಳಿವು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.