ಅದ್ದೂರಿಯಾಗಿ ನಡೆದ ಜೀ ಕುಟುಂಬ ಅವಾರ್ಡ್ಸ್: ಕಾರ್ಯಕ್ರಮದಲ್ಲಿ ಯಶ್ ಭಾಗಿ - ಕನ್ನಡ ಕಿರುತೆರೆ ಕಾರ್ಯಕ್ರಮ
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಒಟ್ಟು 44 ಪ್ರಶಸ್ತಿ ವಿಭಾಗಗಳಿದ್ದು, ಅವುಗಳಲ್ಲಿ ಆರು ಜನಪ್ರಿಯ ವಿಭಾಗಗಳನ್ನು ಜನರ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲು ವಾಹಿನಿ ನಿರ್ಧರಿಸಿತ್ತು. ಇದರ ಜೊತೆಯಲ್ಲಿ ಎಸ್.ಎಂ.ಎಸ್ ಮತ್ತು ಆ್ಯಪ್ ಮೂಲಕ ಕೂಡಾ ವೋಟಿಂಗ್ ನಡೆಸಲಾಯಿತು. ಈ ಎಲ್ಲ ಪ್ರಕ್ರಿಯೆಯಲ್ಲೂ ಕೋವಿಡ್ ಮುನ್ನೆಚ್ಚರಿಕೆಗಳನ್ನು ವಹಿಸಲಾಗಿತ್ತು ಎಂದು ವಾಹಿನಿ ತಿಳಿಸಿದೆ.
ಬೆಂಗಳೂರು: 'ಜೀ ಕುಟುಂಬ ಅವಾರ್ಡ್ಸ್ 2020' ಕಾರ್ಯಕ್ರಮ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷವಾದ 'ಕಾರ್ನಿವಾಲ್' ಥೀಮ್ ಹೊಂದಿದ ರೆಡ್ ಕಾರ್ಪೆಟ್ ಸಿದ್ಧಪಡಿಸಲಾಗಿತ್ತು. ಈ ರೆಡ್ ಕಾರ್ಪೆಟ್ನಲ್ಲಿ ಜಗಮಗಿಸುವ ಬೆಳಕಿನಲ್ಲಿ ಜೀ ಕುಟುಂಬದ ತಾರೆಯರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಯನಾ ಹಾಗೂ ಚೈತ್ರಾ ವಾಸುದೇವನ್ ಆಗಮಿಸಿದ ಕಲಾವಿದರನ್ನು ಸ್ವಾಗತಿಸಿ ರಂಜಿಸಿದರು. ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದ್ದು ಸಮಾರಂಭದ ಕಳೆ ಹೆಚ್ಚಿಸಿತು.
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಒಟ್ಟು 44 ಪ್ರಶಸ್ತಿ ವಿಭಾಗಗಳಿದ್ದು, ಅವುಗಳಲ್ಲಿ ಆರು ಜನಪ್ರಿಯ ವಿಭಾಗಗಳನ್ನು ಜನರ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲು ವಾಹಿನಿ ನಿರ್ಧರಿಸಿತ್ತು. ಇದರ ಜೊತೆಯಲ್ಲಿ ಎಸ್.ಎಂ.ಎಸ್ ಮತ್ತು ಆ್ಯಪ್ ಮೂಲಕ ಕೂಡಾ ವೋಟಿಂಗ್ ನಡೆಸಲಾಯಿತು. ಈ ಎಲ್ಲ ಪ್ರಕ್ರಿಯೆಯಲ್ಲೂ ಕೋವಿಡ್ ಮುನ್ನೆಚ್ಚರಿಕೆಗಳನ್ನು ವಹಿಸಿತ್ತು ಎಂದು ವಾಹಿನಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಸಾಧಕರಿಗೆ ಅವೇರ್ನೆಸ್ ಬ್ರಾಂಡ್ ರಾಯಭಾರಿ ಆಗಿರುವ ರಮೇಶ್ ಅರವಿಂದ್ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ನಟರಾದ ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ಹಿರಿಯ ನಟ ಚರಣ್ ರಾಜ್, ಜೈ ಜಗದೀಶ್, ಮೋಹನ್, ನಿಶ್ವಿಕಾ ನಾಯ್ಡು ಮುಂತಾದ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕಿರುತೆರೆ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಯಶಸ್ಸು ಕಂಡ 'ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್' ಧಾರಾವಾಹಿಯ ಸಂಭ್ರಮಕ್ಕೆ ಈ ಬಾರಿ ಖ್ಯಾತ ನಟ ಯಶ್ ಸಾಥ್ ನೀಡಿದರು. ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಹೊಸ ಹಾಡು ಬಿಡುಗಡೆ ಮಾಡಿದರು.
ಜೀ ಕುಟುಂಬ ಅವಾರ್ಡ್ಸ್ ವೇದಿಕೆಯ ಮೇಲೆ ಪಾರು ಮತ್ತು ಆದಿತ್ಯ ಅವರ ಅದ್ದೂರಿ ವಿವಾಹವೂ ನಡೆಯಿತು. ಈ ವಿವಾಹೋತ್ಸವದಲ್ಲಿ ಎಲ್ಲ ಧಾರಾವಾಹಿಗಳ ನಟ, ನಟಿಯರೂ ಉತ್ಸಾಹದಿಂದ ಭಾಗವಹಿಸಿ, ಹಾಡಿ ಕುಣಿದು ಸಂಭ್ರಮಿಸಿದರು. ಪಾರು, ಆದಿತ್ಯ ವಿವಾಹ ಸಂಭ್ರಮವನ್ನೂ ಜೀ ವೀಕ್ಷಕರು ಜೀ ಕನ್ನಡ ವಾಹಿನಿಯ ಈ ವಿಶೇಷ ಪ್ರಸಾರದಲ್ಲಿ ವೀಕ್ಷಿಸಬಹುದು.
ಇದೇ ಅಕ್ಟೋಬರ್ 31 ಹಾಗೂ ನವೆಂಬರ್ 1ರ ಶನಿವಾರ ಮತ್ತು ಭಾನುವಾರ ಸಂಜೆ 7 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪ್ರಸಾರವಾಗಲಿದೆ. ಇದೇ ಶನಿವಾರ ಸಂಜೆ 6:00ಗಂಟೆಗೆ ಜೀ ಕುಟುಂಬ ಅವಾರ್ಡ್ಸ್ ರೆಡ್ ಕಾರ್ಪೆಟ್ ಕಾರ್ಯಕ್ರಮ ಪ್ರಸಾರವಾಗಲಿದೆ. ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಸಂಜೆ 7ಕ್ಕೆ ಪ್ರಸಾರವಾಗಲಿದೆ.