ETV Bharat / sitara

ಹೊಸ ವರ್ಷದಂದೇ ಪುನೀತ್​ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ 'ಯುವರತ್ನ' ತಂಡ ​​ ​ - ಶೂಟಿಂಗ್ ಮುಗಿಸಿದ ಯುವರತ್ನ

'ಯುವರತ್ನ' ಚಿತ್ರದ ಪೋಸ್ಟರ್​​​ನಲ್ಲಿ ಅಸ್ಥಿಪಂಜರದ ಫೋಟೋವೊಂದನ್ನು ಹಾಕಿ, ಹೊಸ ವರ್ಷಕ್ಕೆ ನಿಮಗೆಲ್ಲಾ ಗುಡ್ ನ್ಯೂಸ್ ಎಂದು ಹೇಳಿಕೊಂಡಿದೆ ಚಿತ್ರತಂಡ. ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ.

Yuvaratna
'ಯುವರತ್ನ'
author img

By

Published : Jan 1, 2020, 9:45 AM IST

ಪವರ್​​​ಸ್ಟಾರ್ ಪುನೀತ್ ರಾಜ್​​ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಯುವರತ್ನ' ದ ಶೂಟಿಂಗ್ ಮುಗಿದಿದೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇಂದು ಹೊಸ ವರ್ಷದ ವಿಶೇಷವಾಗಿ ಚಿತ್ರತಂಡ, ಪುನೀತ್ ರಾಜ್​ಕುಮಾರ್ ಅವರ ಹೊಸ ಲುಕ್ ಬಿಡುಗಡೆ ಮಾಡುತ್ತಿದೆ.

new look will release today
ಇಂದು ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

'ಯುವರತ್ನ' ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಕಾಲೇಜು ವಿದ್ಯಾರ್ಥಿಯಾಗಿದ್ದು, ಜೊತೆಗೆ ರಗ್ಬಿ ಆಟಗಾರನಾಗಿ ಕೂಡಾ ಗಮನ ಸೆಳೆದಿದ್ದಾರೆ. ಈ ಲುಕ್​ ಕೂಡಾ ಈಗಾಗಲೇ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಇದೀಗ 'ಯುವರತ್ನ' ಚಿತ್ರದ ಪೋಸ್ಟರ್​​​ನಲ್ಲಿ ಅಸ್ಥಿಪಂಜರದ ಫೋಟೋವೊಂದನ್ನು ಹಾಕಿ, ಹೊಸ ವರ್ಷಕ್ಕೆ ನಿಮಗೆಲ್ಲಾ ಗುಡ್ ನ್ಯೂಸ್ ಎಂದು ಹೇಳಿದೆ ಚಿತ್ರತಂಡ.

ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಪುನೀತ್ ಜೊತೆ ನಾಯಕಿಯಾಗಿ ಸಯೇಷ ಸೈಗಲ್ ನಟಿಸಿದ್ದಾರೆ. ಇವರೊಂದಿಗೆ ಸೋನು ಗೌಡ, ಧನಂಜಯ, ವಸಿಷ್ಠಸಿಂಹ, ಸುಧಾರಾಣಿ, ಸಾಯಿಕುಮಾರ್ ಹಾಗೂ ಇನ್ನಿತರರ ಪೋಷಕರ ದಂಡೇ ಚಿತ್ರದಲ್ಲಿದೆ. ರಾಜಕುಮಾರ ಚಿತ್ರದ ಬಳಿಕ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಮತ್ತು ಪುನೀತ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ಯುವರತ್ನ' ಏಪ್ರಿಲ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

Intro:Body:ಹೊಸ ವರ್ಷಕ್ಕೆ ಪವರ್ ಸ್ಟಾರ್ ಕೊಟ್ರು ಫ್ಯಾನ್ಸ್ ಗೆ ಗುಡ್ ನ್ಯೂಸ್!!

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಹೈ ಎಕ್ಸ್ ಫೆಕ್ಟೆಡ್ ಸಿನಿಮಾ ಯುವರತ್ನ.. ಟೀಸರ್ ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಯುವರತ್ನ ಚಿತ್ರತಂಡ ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಡಲಿದೆ..ಯುವರತ್ನ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕಾಲೇಜು ವಿದ್ಯಾರ್ಥಿ ಆಗಿದ್ದು, ರಗ್ಬಿ ಆಟಗಾರ ಲುಕ್ ಫ್ಯಾನ್ಸ್ ಗೆ ಕಿಕ್ ಕೊಟ್ಟಿದೆ...ಇದೀಗ ಯುವರತ್ನ ಚಿತ್ರ ಸ್ಕೇಲಿಟನ್ ಫೋಟೋ ಹಾಕಿ, ನ್ಯೂ ಇಯರ್ ಗೆ ಗುಡ್ ನ್ಯೂಸ್ ಇದೆ ಅಂತಾ ಹಾಕಿದ್ದಾರೆ.. ಯುವರತ್ನ ಚಿತ್ರದ ಮತ್ತೊಂದು ಪೋಸ್ಟರ್ ರಿವೀಲ್ ಮಾಡುವ ಮೂಲಕ ಹೊಸ ವರ್ಷದ ಸಡಗರವನ್ನು ಮತ್ತಷ್ಟು ಹೆಚ್ಚಿಸಲಿದೆ‌.ಇಷ್ಟೆಲ್ಲ ಸದ್ದು ಮಾಡುತ್ತಿರುವ ಯುವರತ್ನ ಚಿತ್ರದ ಶೂಟಿಂಗ್ ಮುಗಿಸಿದೆ..ಪುನೀತ್‌ ಜತೆ ನಾಯಕಿಯಾಗಿ ಸಾಯೆಷಾ ಸೇಗಲ್‌ ನಟಿಸಿದ್ದಾರೆ. ಸೋನು ಗೌಡ, ಧನಂಜಯ, ವಸಿಷ್ಠ ಸಿಂಹ, ಸುಧಾರಾಣಿ, ಸಾಯಿ ಕುಮಾರ್ ಮುಂತಾದ ಪೋಷಕ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ರಾಜಕುಮಾರ ಬಳಿಕ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಮತ್ತು ಪುನೀತ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಯುವರತ್ನ ಏಪ್ರಿಲ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.