ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಯುವರತ್ನ' ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ನಾಳೆಯಿಂದ ಅಮೆಜಾನ್ ಪ್ರೈಮ್ನಲ್ಲಿ ಕೂಡ ಸಿನಿಮಾ ವೀಕ್ಷಿಸಬಹುದು.
ಪ್ರತಿಷ್ಠೆಯ ಜೊತೆಗೆ ಶಿಕ್ಷಣ ವ್ಯವಸ್ಥೆ ಯಾವ ರೀತಿ ವ್ಯಾಪಾರೀಕರಣ ಆಗಿದೆ ಎಂಬುದನ್ನು ಯುವರತ್ನದಲ್ಲಿ ಹೇಳಲಾಗಿದೆ. ಒಂದು ಸರ್ಕಾರಿ ಕಾಲೇಜಿನಲ್ಲಿ ಅನೇಕ ಅಕ್ರಮಗಳು ನಡೆಯುತ್ತಿರುತ್ತವೆ. ಹೇಗಾದರೂ ಮಾಡಿ ಕಾಲೇಜು ಮುಚ್ಚಿಸಬೇಕು ಎಂಬುದು ಖಳನಾಯಕರ ಗುರಿ. ಆದರೆ ಅದಕ್ಕೆ ಅಡ್ಡಿಯಾಗಿ ನಿಲ್ಲುವ ಕಥಾನಾಯಕ ಯುವರಾಜ್, ಅಕ್ರಮ ಮಾಡುವವರನ್ನು ಹೇಗೆ ಮಟ್ಟಹಾಕುತ್ತಾನೆ ಎಂಬುದು ಯುವರತ್ನದಲ್ಲಿ ತೋರಿಸಲಾಗಿದೆ.
ಓದಿ : ಇಂದಿನಿಂದ 8 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ.50 ಸೀಟು ಭರ್ತಿಗೆ ಅವಕಾಶ
ಹೊಂಬಾಳೆ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಯುವರತ್ನ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಂತೋಷ್ ಆನಂದರಾಮ್ ಯುವರತ್ನಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್, ಸಯ್ಯೇಶಾ, ಪ್ರಕಾಶ್ ರೈ, ಸೋನು ಗೌಡ, ಧನಂಜಯ್, ದಿಗಂತ್, ಅವಿನಾಶ್, ಸುಧಾರಾಣಿ, ಸಾಧು ಕೋಕಿಲ, ರಂಗಾಯಣ ರಘು, ಅಚ್ಯುತ್ ಕುಮಾರ್ ಹೀಗೆ ದೊಡ್ಡ ತಾರಾ ಬಳಗ ಯುವರತ್ನದಲ್ಲಿದೆ. ಚಿತ್ರ ಅಮೆಜಾನ್ನಲ್ಲಿ ಸ್ಕ್ರೀನಿಂಗ್ ಆಗುತ್ತಿರುವುದಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಸಂತಸ ವ್ಯಕ್ತಪಡಿಸಿದ್ದಾರೆ.