ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಪ್ರತಿಭೆಗಳಿಗೆ ಮೊದಲಿನಿಂದಲೂ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಆಡಿಯೋ ಲಾಂಚ್ ಇರಲಿ, ಸಿನಿಮಾ ಮುಹೂರ್ತ ಇರಲಿ ಎಲ್ಲಾ ಕಾರ್ಯಕ್ರಮಗಳಿಗೂ ಬಿಡುವು ಮಾಡಿಕೊಂಡು ಹೋಗಿ ವಿಶ್ ಮಾಡಿ ಬರುತ್ತಾರೆ.
ಸ್ಯಾಂಡಲ್ವುಡ್ನಲ್ಲಿ ತನ್ನ ತಂದೆ ಸ್ಥಾನದಲ್ಲಿದ್ದ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅವರಿಗೂ ದರ್ಶನ್ ಬೆಂಬಲ ದೊರೆತಿದೆ. ಪ್ರೇಮಿಗಳ ದಿನದ ವಿಶೇಷವಾಗಿ ನಾಳೆ , ಅಂದರೆ ಫೆಬ್ರವರಿ 14 ರಂದು ಅಭಿಷೇಕ್ ಮೊದಲ ಸಿನಿಮಾ 'ಅಮರ್' ಟೀಸರ್ ನಾಳೆ ಬಿಡುಗಡೆಯಾಗುತ್ತಿದೆ. ಇದೇ ಖುಷಿಯಲ್ಲಿರುವ ಅಮರ್ ಹಾಗೂ ಚಿತ್ರತಂಡಕ್ಕೆ ಗಜಪಡೆಯ ಬೆಂಬಲ ಸಿಕ್ಕಿದೆ. ಸ್ಯಾಂಡಲ್ವುಡ್ ಗಜ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಅಮರ್' ಚಿತ್ರಕ್ಕೆ ವಿಶ್ ಮಾಡಿದ್ದಾರೆ.
ಈ ಸಂಬಂಧ ತಮ್ಮ ಟ್ವಿಟ್ಟರ್ನಲ್ಲಿ ಅಮರ್ ಚಿತ್ರದ ಪೋಸ್ಟರ್ವೊಂದನ್ನು ಷೇರ್ ಮಾಡಿರುವ ದರ್ಶನ್ 'ಪ್ರೀತಿಯ ತಮ್ಮ ಅಭಿ
ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್ ನಾಳೆ ಆತನ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಿಸಿ ಬೆಳೆಸಿ pic.twitter.com/9pjIspAqSQ
— Darshan Thoogudeepa (@dasadarshan) February 13, 2019 " class="align-text-top noRightClick twitterSection" data="
">ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್ ನಾಳೆ ಆತನ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಿಸಿ ಬೆಳೆಸಿ pic.twitter.com/9pjIspAqSQ
— Darshan Thoogudeepa (@dasadarshan) February 13, 2019ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್ ನಾಳೆ ಆತನ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಿಸಿ ಬೆಳೆಸಿ pic.twitter.com/9pjIspAqSQ
— Darshan Thoogudeepa (@dasadarshan) February 13, 2019
ಸದಾ ದರ್ಶನ್ ಬೆನ್ನಿಗೆ ನಿಂತಿದ್ದ ಮಂಡ್ಯದ ಗಂಡು ಅಂಬರೀಶ್ ಅವರು ಕಳೆದ ವರ್ಷ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. ಇನ್ನು ದರ್ಶನ್ ಅಂಬಿಯನ್ನು ಪ್ರೀತಿಯಿಂದ ಸೀನಿಯರ್ ಅಂತಾನೇ ಕರಿತಿದ್ರು. ಈಗ ಅವರಿಲ್ಲದ ವೇಳೆ ಅಂಬರೀಶ್ ಅವರ ಮಗನ ಜೊತೆ ನಿಂತು ಅಭಿಗೆ ಸಾಥ್ ನೀಡ್ತಿರುವ' ಒಡೆಯ' ನ ನಡೆಗೆ ದಾಸನ ಭಕ್ತಗಣ ತಲೆದೂಗುತ್ತಿದೆ.