ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರ ಯಥರ್ವನ ಕೇಶ ಮುಂಡನ ಮಾಡಿಸಿದ್ದಾರೆ. ಈ ಫೋಟೋಗಳನ್ನು ನಟಿ ಹಾಗೂ ಯಶ್ ಪತ್ನಿ ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯಥರ್ವ ಯಶ್ ಹೊಸ ಗೆಟಪ್ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಲೈಕ್ ಮತ್ತು ಕಮೆಂಟ್ ಮಾಡುತ್ತಿದ್ದಾರೆ. ಯಥರ್ವ ಹುಟ್ಟಿ 14 ತಿಂಗಳ ನಂತ್ರ ಕೇಶ ಮುಂಡನ ಮಾಡಿಸಲಾಗಿದೆ. ಇದೇ ಅಕ್ಟೋಬರ್ 30ರಂದು ಮಗನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಿದ್ರು. ಈ ಸೆಲೆಬ್ರೇಶನ್ಗೆ ಕೇವಲ ಕುಟುಂಬದವರು ಮತ್ತು ಯಶ್ ಆಪ್ತರು ಮಾತ್ರ ಭಾಗಿಯಾಗಿದ್ರು.
ಕೇಶ ಮುಂಡನ ಕಾರ್ಯಕ್ರಮದಲ್ಲಿ ತಂದೆ ಹಾಗೂ ಮಗ ಇಬ್ಬರೂ ಟ್ರೆಡಿಶನಲ್ ಲುಕ್ನಲ್ಲಿ ಮಿಂಚಿದ್ದಾರೆ. ಯಶ್ ಪಂಚೆ ಮತ್ತು ಬಿಳಿ ಅಂಗಿಯಲ್ಲಿ ಕಾಣಿಸಿದ್ರೆ, ಯಥರ್ವ್ ಬಿಳಿ ಪಂಚೆ ಮತ್ತು ಹಸಿರು ಬಣ್ಣದ ಅಂಗಿಯನ್ನು ತೊಟ್ಟಿದ್ದಾನೆ. ತಂದೆಯ ತೋಳಿನಲ್ಲಿರುವ ಯಥರ್ವ ಫೋಟೋಗಳನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಯಶ್ ಪುತ್ರಿ ಐರಾ ಕೇಶ ಮುಂಡನವನ್ನು ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ಮಾಡಲಾಗಿತ್ತು. ಕಳೆದ ವರ್ಷ ಮಾರ್ಚ್ನಲ್ಲಿ ಐರಾ ಕೇಶಮುಂಡನ ಮಾಡಿಸಿದ್ದರು. ಇದೀಗ ಪುತ್ರ ಯಥರ್ವ ಕೇಶ ಮುಂಡನ ಮಾಡಿಸಿದ್ದು, ಹೊಸ ಗೆಟಪ್ನಲ್ಲಿ ಮಿಂಚುತ್ತಿದ್ದಾನೆ.