ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಕಳೆದ ವಾರವಷ್ಟೇ ಮುದ್ದಿನ ಮಗನಿಗೆ ತಮ್ಮ ಹೊಸ ಫಾರ್ಮ್ ಹೌಸ್ನಲ್ಲಿ ಸರಳವಾಗಿ ನಾಮಕರಣ ಮಾಡಿ ಮುಗಿಸಿದ್ದರು. ನಾಮಕರಣ ಮುಗಿದ ನಂತರ ಬೆಂಗಳೂರಿಗೆ ಬಾರದೆ ಯಶ್ ಹಾಗೂ ಕುಟುಂಬ ತಮ್ಮ ಹೊರ ಫಾರ್ಮ್ ಹೌಸ್ನಲ್ಲೇ ಕಾಲ ಕಳೆಯುತ್ತಿದೆ.
ಯಶ್ ಇತ್ತೀಚೆಗಷ್ಟೇ ಹಾಸನದ ಬಳಿ ಸುಮಾರು 10 ಎಕರೆ ಭೂಮಿಯನ್ನು ಖರೀದಿಸಿದ್ದರು. ಅಲ್ಲಿ ಫಾರ್ಮ್ ಹೌಸ್ ಮಾಡಿರುವ ಯಶ್, ಪತ್ನಿ, ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಈಗಾಗಲೇ ಕೆಜಿಎಫ್-2 ಚಿತ್ರೀಕರಣ ಆರಂಭವಾಗಿದೆ. ಆದರೆ ಯಶ್ ಭಾಗದ ಚಿತ್ರೀಕರಣ ಇನ್ನೂ ಆರಂಭವಾಗದ ಕಾರಣ ಇನ್ನೂ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಫಾರ್ಮ್ ಹೌಸ್ನಲ್ಲಿ ಯಶ್, ತಮ್ಮ ಪುತ್ರಿ ಐರಾ ಕೈಯಿಂದ ಹಸುವಿಗೆ ಬಾಳೆಹಣ್ಣು ತಿನ್ನಿಸುತ್ತಿರುವ ಫೋಟೋವೊಂದನ್ನು ರಾಧಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಯಶ್ ಆಪ್ತರು ಹೇಳುವ ಪ್ರಕಾರ ಈ ಫಾರ್ಮ್ ಹೌಸ್ನಲ್ಲಿ ರಾಕಿಂಗ್ ಸ್ಟಾರ್ ಹಲವು ಬಗೆಯ ಪ್ರಾಣಿ, ಪಕ್ಷಿಗಳನ್ನು ಸಾಕಲು ನಿರ್ಧರಿಸಿದ್ದಾರಂತೆ. ಈಗಾಗಲೇ ಫಾರ್ಮ್ ಹೌಸ್ನಲ್ಲಿ ಹಸು, ಕರುಗಳನ್ನು ಸಾಕಲಾಗುತ್ತಿದೆ.