ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾರನ್ನು ತಂದೆ - ತಾಯಿಯಂತೆ ಭಾವಿಸುವ ನಟರ ಸಾಲಿನಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಕೂಡಾ ಒಬ್ಬರು. ಅಂಬರೀಶ್ ಕಣ್ಣು ಮುಚ್ಚುವ ಮುನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಮಗುವಿಗೆ ವಿಶೇಷ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದರು.
ಇನ್ನು ಇದುವರೆಗೂ ಸಂಸದೆ ಸುಮಲತಾ ಮಾತ್ರ ಯಶ್ ಮಗಳನ್ನು ನೋಡಿರಲೇ ಇಲ್ಲವಂತೆ. ಒಂದು ಒಳ್ಳೆ ದಿನದಂದು ಯಶ್ ತನ್ನ ಮಗಳನ್ನು ತೋರಿಸುವುದಾಗಿ ಹೇಳಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಸ್ವತಃ ಸುಮಲತಾ ಅವರೇ ಹೇಳಿಕೊಂಡಿದ್ದರು. ಕೊನೆಗೂ ಆ ಘಳಿಗೆ ನಿನ್ನೆ ಕೂಡಿ ಬಂದಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ, ಅಂಬರೀಶ್ ಅವರ ಕನಸಿನ ಮನೆಗೆ ಮೊದಲ ಬಾರಿಗೆ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಅಪ್ಪನ ಸಹಾಯದಿಂದ ಅಂಬರೀಶ್ ಅವರ ಫೋಟೋ ಮೇಲೆ ಕೈ ಇಟ್ಟು, ಅಂಬಿ ತಾತನ ಆಶೀರ್ವಾದ ಪಡೆದಿದ್ದಾಳೆ ಐರಾ. ಇನ್ನು ಸುಮಲತಾ ಅಂಬರೀಶ್ ಕೂಡಾ ಐರಾಳನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಐರಾಳನ್ನು ಎತ್ತಿ ಮುದ್ದಾಡಿ ಅವಳೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದಿದ್ದಾರೆ. ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.