ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಮೂಲಕ ಪ್ರಪಂಚಾದ್ಯಂತ ಅಭಿಮಾನಿಗಳ ಪ್ರೀತಿಗಳಿಸಿರುವ ನಟ. 2019 ಸೈಮಾ ಆವಾರ್ಡ್ನಲ್ಲಿ ಸ್ಟೈಲ್ ಐಕಾನ್ ಆವಾರ್ಡ್ ಪಡೆದಿರುವ ರಾಕಿ ಬಾಯ್ ತಮ್ಮ ಸ್ಟೈಲ್ ಬಗೆಗಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಒಳ್ಳೆ ಹೈಟ್, ಹೈಟ್ಗೆ ತಕ್ಕಂತೆ ಇರುವ ಉದ್ದವಾದ ತಲೆ ಕೂದಲು, ಶಿವಾಜಿ ತರಹದ ಗಡ್ಡ ಮತ್ತಷ್ಟು ಅಟ್ರಾಕ್ಟಿವ್ ಆಗಿದೆ. ಸಹಜವಾಗಿ ಯಶ್ ಆವಾರ್ಡ್ ಕಾರ್ಯಕ್ರಮ, ಸಿನಿಮಾ ಪ್ರಮೋಷನ್, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆದ್ರೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅಟ್ರಾಕ್ಟ್ ಮಾಡೋದು ತನ್ನ ಫಿಟ್ನೆಸ್ಗೆ ತಕ್ಕಂತೆ ಯಶ್ ಧರಿಸುವ ಕಾಸ್ಟ್ಯೂಮ್ ಅವರ ಸ್ಟೈಲನ್ನು ಹೆಚ್ಚುಸುತ್ತೆ.
ಇನ್ನು ಈ ವರ್ಷದ ಸೈಮಾ ಅವಾರ್ಡ್ನಲ್ಲಿ, ಯಶ್ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಪಡೆದಿದ್ರು. ಆ ಟೈಮಲ್ಲಿ ಯಶ್ ಪತ್ನಿ ರಾಧಿಕಾ ಪಂಡಿತ್ ಯಶ್ ಬಗ್ಗೆ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ರು. ಸ್ಟೈಲ್ ಎನ್ನುವುದು ಮಾತನಾಡದೆ ನಾವು ಏನು ಎನ್ನುವುದನ್ನು ಹೇಳುವುದಾಗಿದೆ ಅಂತಾ ರಾಧಿಕಾ ಪಂಡಿತ್ ಹೇಳಿದ್ರು. ಯಶ್ ಸ್ಟೈಲ್ ಹಿಂದೆ, ಕಾಸ್ಟೂಮ್ ಡಿಸೈನರ್ ಸಾನಿಯಾ ಸರ್ದಾರಿಯ ಅವ್ರ ಪರಿಶ್ರಮ ಇದೆ ಅಂತಾ ಹೇಳಿದ್ರು.
ಈಗ ರಾಕಿಂಗ್ ಸ್ಟಾರ್ ಯಶ್ ಅವರ ಸ್ಟೈಲ್ ಹಾಗು ಪರ್ಸನಾಲಿಟಿ ಬಗ್ಗೆ ಸಾವಿರಾರು ಅಭಿಮಾನಿಗಳು ಪ್ರಶ್ನೆ ಕೇಳಿದ್ರಂತೆ. ಈ ಪ್ರಶ್ನೆಗೆ ಯಶ್ ಸ್ಟೈಲಿಷ್ ಆಗಿರುವ ನಾಲ್ಕೈದು ಕಾಸ್ಟ್ಯೂಮ್ನಲ್ಲಿ ಕಾಣಿಸಿಕೊಂಡಿರುವ ಫೋಟೋವನ್ನ ಹಾಕಿ ನನ್ನ ಸ್ಟೈಲ್ ಹಿಂದಿರುವ ಕ್ರೆಡಿಟ್ ಕಾಸ್ಟೂಮ್ ಡಿಸೈನರ್ ಸಾನಿಯಾ ಸರ್ದಾರಿಯ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.