ETV Bharat / sitara

'Darling' ಬರ್ತ್‌ ಡೇಗೆ ಹೀಗಿತ್ತು 'Sweety' ವಿಷ್.. - ಅನುಷ್ಕಾ ಶೆಟ್ಟಿ

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿನಗೆ ನಿನ್ನ ಜೀವನದಲ್ಲಿ ನೀಡುತ್ತಿರುವ ಎಲ್ಲದರಲ್ಲೂ ಒಳ್ಳೆಯದಾಗಲಿ ಮತ್ತು ನಿನ್ನ ಎಲ್ಲಾ ಕಥೆಗಳು ಪ್ರಪಂಚದಾದ್ಯಂತ ಅನೇಕ ಹೃದಯಗಳನ್ನು ತಲುಪಲಿ ಎಂದು ಹಾರೈಸುತ್ತೇನೆ. ನಿನ್ನ ಮಾರ್ಗದಲ್ಲಿ ಸಂತೋಷ ಮತ್ತು ಆರೋಗ್ಯವಿರಲಿ..

'Darling' ಬರ್ತ್​ ಡೇಗೆ ಹೀಗಿತ್ತು 'Sweety' ವಿಶ್

author img

By

Published : Oct 23, 2021, 2:32 PM IST

ಹೈದರಾಬಾದ್ (ತೆಲಂಗಾಣ) : ಬಾಹುಬಲಿ ಖ್ಯಾತಿಯ ಟಾಲಿವುಡ್​ ರೆಬೆಲ್ ಸ್ಟಾರ್ ಪ್ರಭಾಸ್ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೀಗ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಭಾಸ್ ಅವರ ಆಪ್ತ ಸ್ನೇಹಿತರಲ್ಲಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು.

ಪ್ರಭಾಸ್ ಹಾಗೂ ಅನುಷ್ಕಾ ಜೋಡಿಯನ್ನು ರೀಲ್​ನಲ್ಲಿ ಮಾತ್ರವಲ್ಲದೇ ರಿಯಲ್​ ಆಗಿಯೂ ನೋಡಬೇಕೆಂದು ಅಭಿಮಾನಿಗಳು ಸದಾ ಬಯಸುವುದರಿಂದ ಪ್ರತಿ ಬಾರಿಯೂ ಅನುಷ್ಕಾ ಅವರ ವಿಷ್​ ಮಹತ್ವ ಪಡೆದುಕೊಂಡಿರುತ್ತದೆ.

ಪ್ರಭಾಸ್ ಬರ್ತ್​ ಡೇಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶುಭ ಕೋರಿರುವ ಸ್ವೀಟಿ, "ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿನಗೆ ನಿನ್ನ ಜೀವನದಲ್ಲಿ ನೀಡುತ್ತಿರುವ ಎಲ್ಲದರಲ್ಲೂ ಒಳ್ಳೆಯದಾಗಲಿ ಮತ್ತು ನಿನ್ನ ಎಲ್ಲಾ ಕಥೆಗಳು ಪ್ರಪಂಚದಾದ್ಯಂತ ಅನೇಕ ಹೃದಯಗಳನ್ನು ತಲುಪಲಿ ಎಂದು ಹಾರೈಸುತ್ತೇನೆ. ನಿನ್ನ ಮಾರ್ಗದಲ್ಲಿ ಸಂತೋಷ ಮತ್ತು ಆರೋಗ್ಯವಿರಲಿ" ಎಂದು ಸಿಹಿ ಟಿಪ್ಪಣಿ ಬರೆದಿದ್ದಾರೆ.

ಇದನ್ನೂ ಓದಿ: 42ನೇ ವಸಂತಕ್ಕೆ ಕಾಲಿಟ್ಟ ‘ಬಾಹುಬಲಿ’.. ‘ಮಿಸ್ಟರ್​ ಪರ್ಫೆಕ್ಟ್​’ಗೆ ‘ಸಲಾರ್​’ದಿಂದ ಗಿಫ್ಟ್​ ಏನು!?

2002ರಲ್ಲಿ 'ಈಶ್ವರ' ಎಂಬ ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಪ್ರಭಾಸ್​ಗೆ 2010ರಲ್ಲಿ ತೆರೆಕಂಡ 'ಡಾರ್ಲಿಂಗ್​' ಸಿನಿಮಾ ದೊಡ್ಡ ಬ್ರೇಕ್​ ನೀಡಿತ್ತು. ಬಳಿಕ 2015ರಲ್ಲಿ ತೆರೆಕಂಡ 'ಬಾಹುಬಲಿ - ದಿ ಬಿಗಿನಿಂಗ್' ಹಾಗೂ 2017ರಲ್ಲಿ ತೆರೆಕಂಡ 'ಬಾಹುಬಲಿ- ದಿ ಕನ್‍ಕ್ಲೂಸನ್' ಪ್ರಭಾಸ್​ರನ್ನು ಇಡೀ ಜಗತ್ತೆ ಕಣ್ಣೆತ್ತಿ ನೋಡುವಂತೆ ಮಾಡಿತ್ತು.

ಇವರ ಮುಂದಿನ ಚಿತ್ರ 'ರಾಧೆ ಶ್ಯಾಮ್​​' ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. 'ಸಲಾರ್​' ಹಾಗೂ 'ಆದಿಪುರುಷ್​​' ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.