ಪ್ರಭಾಸ್, ಸದ್ಯಕ್ಕೆ ಟಾಲಿವುಡ್ ಹಾಟ್ಕೇಕ್ ಎಂದು ಹೇಳಿದರೂ ತಪ್ಪಿಲ್ಲ. ಬಾಹುಬಲಿ ನಂತರ ಪ್ರಭಾಸ್ ಇಮೇಜ್ ಮತ್ತಷ್ಟು ಬದಲಾಯಿತು. ಅದರೊಂದಿಗೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವಂತಾಯಿತು.
ಸದ್ಯಕ್ಕೆ ಪ್ರಭಾಸ್ 'ಸಾಹೋ' ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್ಗಾಗಿ ಲಾಸ್ ಏಂಜಲೀಸ್ಗೆ ಬಂದಿಳಿದ ಪ್ರಭಾಸ್ ಕೆನ್ನೆಗೆ ಏರ್ಪೋರ್ಟ್ನಲ್ಲಿ ಯುವತಿಯೊಬ್ಬಳು ಕೆನ್ನೆಗೆ ಹೊಡೆದಿದ್ದಾಳೆ. ಆಶ್ಚರ್ಯ ಪಡಬೇಡಿ. ಆ ಯುವತಿ ಪ್ರಭಾಸ್ ಕೆನ್ನೆಗೆ ಹೊಡೆದದ್ದು ಕೋಪದಿಂದಲ್ಲ, ಅಭಿಮಾನದಿಂದಾಗಿ. ಪ್ರಭಾಸ್ ಸಾಹೋ ಶೂಟಿಂಗ್ಗಾಗಿ ಲಾಸ್ ಏಂಜಲೀಸ್ ಬರುತ್ತಿದ್ದಾರೆ ಎಂದು ತಿಳಿದ ಯುವತಿ ಮತ್ತು ಆಕೆ ಮನೆಯವರು ಏರ್ಪೋರ್ಟ್ಗೆ ಧಾವಿಸಿದ್ದಾರೆ.
- " class="align-text-top noRightClick twitterSection" data="
">
ಪ್ರಭಾಸ್ ಬರುತ್ತಿದ್ದಂತೆ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡ ಯುವತಿ ತಾನು ಪ್ರಭಾಸ್ನೊಂದಿಗೆ ಇರುವುದು ಕನಸೋ, ನನಸೋ ಎಂದು ತಿಳಿಯಲು ಪ್ರಭಾಸ್ ಕೆನ್ನೆಗೆ ಮೆಲ್ಲಗೆ ಹೊಡೆದಿದ್ದಾಳೆ. ಸೆಲ್ಫಿ ತೆಗೆಸಿಕೊಂಡು ಪ್ರಭಾಸ್ ನೋಡಿದ ಖುಷಿಗೆ ಸಂತೋಷದಿಂದ ಕುಣಿದಾಡಿದ್ದಾಳೆ. ಯುವತಿಯ ಈ ಅಭಿಮಾನಕ್ಕೆ ಕೆಲವರು ನಕ್ಕು ಸುಮ್ಮನಾದರೆ ಮತ್ತೆ ಕೆಲವರು ಹುಡುಗಿಗೆ ಬೈದುಕೊಂಡಿದ್ದಾರೆ.