ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಮಾಡುತ್ತಾ ಹೀರೋ ಆದ ನಟರಲ್ಲಿ ಶರಣ್ ಕೂಡಾ ಒಬ್ಬರು. 'ರ್‍ಯಾಂಬೋ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾದ ಶರಣ್ ಈಗ ಸ್ಯಾಂಡಲ್ ವುಡ್ ಪೈಸಾ ವಸೂಲ್ ಹೀರೋ ಆಗಿ ಬದಲಾಗಿದ್ದಾರೆ.
ಶರಣ್ ಹೀರೋ ಆದ 100 ನೇ ಸಿನಿಮಾ 'ರ್‍ಯಾಂಬೋ' ಶರಣ್ಗೆ ದೊಡ್ಡ ಮಟ್ಟದ ಹೆಸರು ತಂದುಕೊಡ್ತು. ಈ ಯಶಸ್ಸಿನ ಹಿಂದೆ ಇದ್ದ ಆತ್ಮೀಯ ಗೆಳೆಯ ನಿರ್ದೇಶಕ ತರುಣ್ ಸುಧೀರ್. ಶರಣ್ ತಂದೆ ಹಾಗೂ ತರುಣ್ ಸುಧೀರ್ ತಂದೆ ಒಳ್ಳೆಯ ಸ್ನೇಹಿತರಾಗಿದ್ದರು. ಅದೇ ರೀತಿ ಶರಣ್ ಮತ್ತು ನಿರ್ದೇಶಕ ತರುಣ್ ಸುಧೀರ್ ಕೂಡಾ ಸ್ನೇಹಿತರು. ಇದೇ ಸ್ನೇಹದಿಂದ ಈ ಜೋಡಿ ಅಧ್ಯಕ್ಷ, ವಿಕ್ಟರಿ ಹಾಗೂ 'ರ್‍ಯಾಂಬೋ 2' ಸಿನಿಮಾಗಳನ್ನು ಮಾಡಿ ಸಕ್ಸಸ್ ಆಗಿದ್ದಾರೆ. ಅದಕ್ಕೆ ಸಾಕ್ಷಿ 'ರ್‍ಯಾಂಬೋ 2' ಸಿನಿಮಾ, ಸಕ್ಸಸ್ ಜೊತೆಗೆ 'ಚುಟು ಚುಟು ಹಾಡು' ಬರೋಬ್ಬರಿ 100 ಮಿಲಿಯನ್ ವ್ಯೂವ್ಸ್ ಪಡೆದು, ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯುವ ಮೂಲಕ ರೆಕಾರ್ಡ್ ಬರೆದಿತ್ತು.
ಈ 'ಚುಟು ಚುಟು' ಹಾಡಿನ ಸಕ್ಸಸ್ ಖುಷಿಯನ್ನು ಆನಂದ್ ಆಡಿಯೋ ಸಂಸ್ಥೆ ಇತ್ತೀಚೆಗೆ ಹಂಚಿಕೊಂಡಿತು. ಈ ಸಮಾರಂಭದಲ್ಲಿ ಶರಣ್ ಒಂದು ಇಂಟ್ರಸ್ಟಿಂಗ್ ವಿಚಾರ ಹಂಚಿಕೊಂಡರು. 'ಚುಟು ಚುಟು' ಹಾಡಿನ ಚಿತ್ರೀಕರಣದ ವೇಳೆ ಶರಣ್ ಡ್ಯಾನ್ಸ್ ಮಾಡಲು ಬಹಳ ಕಷ್ಟಪಟ್ಟರಂತೆ. ಈ ಹಾಡಿನ ಡ್ಯಾನ್ಸ್ ಪ್ರಾಕ್ಟೀಸ್ ವಿಚಾರವಾಗಿ ಶರಣ್ ಅವರು ತರುಣ್ ಸುಧೀರ್ ಜೊತೆ ಒಂದು ತಿಂಗಳು ಮಾತು ಬಿಟ್ಟಿದ್ದರಂತೆ. ಇನ್ನು ಶರಣ್ ಸಕ್ಸಸ್ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಪಾತ್ರ ಕೂಡಾ ಇದೆಯಂತೆ. ಈ ವಿಚಾರವನ್ನು ಶರಣ್ ಹಾಡಿನ ಸಕ್ಸಸ್ ಮೀಟ್ನಲ್ಲಿ ಹೇಳಿಕೊಂಡರು.