ETV Bharat / sitara

ಯಶ್ ಮಗಳನ್ನು ಸುಮಲತಾ ಇನ್ನೂ ನೋಡಿಲ್ಲವಂತೆ...ಕಾರಣ ಏನು..? - undefined

ಯಶ್ ಮಗುವನ್ನು ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಒಂದೊಳ್ಳೆ ದಿನ ನೋಡಿ ಮಗುವನ್ನು ನೋಡಲು ಬನ್ನಿ ಎಂದು ಯಶ್ ಹೇಳಿರುವುದಾಗಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಯಶ್ , ಸುಮಲತಾ
author img

By

Published : Jun 24, 2019, 11:00 PM IST

ಮೊನ್ನೆಯಷ್ಟೇ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ತಮ್ಮ ಮುದ್ದು ಮಗಳಿಗೆ ನಾಮಕರಣ ಮಾಡಿ 'ಐರಾ' ಯಶ್ ಎಂಬ ನಾಮಕರಣ ಮಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಮಗುವಿಗೆ ಹಾರೈಸಿ ಶುಭ ಕೋರಿದ್ದಾರೆ.

ಸುಮಲತಾ ಅಂಬರೀಶ್

ರೆಬಲ್​​​​​​ ಸ್ಟಾರ್ ಅಂಬರೀಶ್ ಯಶ್ ಮಗುವಿಗೆ ತೊಟ್ಟಿಲೊಂದನ್ನು ಆರ್ಡರ್ ಮಾಡಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಆ ತೊಟ್ಟಿಲು ಯಶ್ ಮನೆ ಸೇರುವ ಮುನ್ನವೇ ಅಂಬರೀಶ್ ಇಹಲೋಕ ತ್ಯಜಿಸಿದ್ದರು. ಯಶ್ ಹಾಗೂ ರಾಧಿಕಾ ದಂಪತಿಗೆ ಅಂಬರೀಶ್ ತಮ್ಮ ಮಗಳನ್ನು ನೋಡಲಿಲ್ಲವಲ್ಲ ಎಂಬ ಕೊರಗು ಇನ್ನೂ ಕಾಡುತ್ತಿದೆಯಂತೆ. ಆಶ್ಚರ್ಯ ಎಂದರೆ ಸುಮಲತಾ ಅಂಬರೀಶ್ ಕೂಡಾ ಯಶ್ ಮಗಳನ್ನು ಇನ್ನೂ ನೋಡಿಲ್ಲವಂತೆ, ಅದಕ್ಕೆ ಕಾರಣವೂ ಇದೆ.

yash daughter
ಯಶ್ ಪುತ್ರಿ ಐರಾ

ಅಂಬರೀಶ್ ಗಿಫ್ಟ್ ನೀಡಿದ್ದ ತೊಟ್ಟಿಲಲ್ಲಿ ಯಶ್ ಮಗಳನ್ನು ಇನ್ನೂ ಮಲಗಿಸಿಲ್ಲವಂತೆ. ತೊಟ್ಟಿಲಿನಲ್ಲಿ ಮಲಗಿಸುವ ಶಾಸ್ತ್ರ ಮಾಡುವಾಗ ಸುಮಲತಾ ಅವರೇ ಬಂದು ಮಗಳನ್ನು ತೊಟ್ಟಿಲಲ್ಲಿ ಮಲಗಿಸಬೇಕು ಎಂಬುದು ಯಶ್ ಆಸೆಯಂತೆ. ಅಲ್ಲದೆ ನೀವು ಎಂಪಿ ಆಗಿ ಗೆದ್ದು ಬಂದು ಈ ಶಾಸ್ತ್ರವನ್ನು ಮುಂದೆ ನಿಂತು ಮಾಡಬೇಕು ಎಂದು ಚುನಾವಣಾ ಸಮಯದಲ್ಲಿ ಯಶ್ ಹೇಳಿದ್ದರಂತೆ. ಆದ ಕಾರಣ ನಾನೂ ಕೂಡಾ ನನ್ನ ಮೊಮ್ಮಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ. ಮಗುವಿಗೆ ಅವರು ಇಟ್ಟಿರುವ ಹೆಸರು ಬಹಳ ಚೆನ್ನಾಗಿದೆ ಎಂದು ಅಂಬರೀಶ್ ಅವರ 7ನೇ ತಿಂಗಳ ಪುಣ್ಯತಿಥಿ ವೇಳೆ ಸುಮಲತಾ ಹೇಳಿದ್ದಾರೆ.

Intro:ರೆಬಲ್ ಸ್ಟಾರ್ ಅಂಬರೀಶ್ ರಾಕಿಂಗ್ ಸ್ಟಾರ್ ಯಶ್ ಅವರ ಪುತ್ರಿ ಗಾಗಿ ಒಂದು ತೊಟ್ಟಿಲನ್ನು ಬುಕ್ ಮಾಡಿದ್ರು ಮಾಡಿದ್ರು. ಆದರೆ ವಿಧಿ ಆಟವೇ ಬೇರೆಯಾಗಿತ್ತು ಅಂಬಿ ಬುಕ್ ಮಾಡಿದ ತೊಟ್ಟಿಲು ಯಶ್ ಮನೆ ಸೇರುವ ಮುನ್ನವೇ ರೆಬಲ್ ಸ್ಟಾರ್ ಅಂಬರೀಶ್ ಇಹಲೋಕ ತ್ಯಜಿಸಿದ್ದರು. ಅಲ್ಲದೆ ಯಶ್ ಮಗಳನ್ನು ಅಂಬಿ ನೋಡಲಿಲ್ಲ ಎಂಬ ಕರಗು ಈಗಲೂ ವೈಅರ್ ದಂಪತಿಗೆ ಕಾಡ್ತಿದೆಯಂತೆ.ಅದ್ರೆ ಯಶ್ ಮಗಳನ್ನು ಸುಮಲತಾ ಅಂಬರೀಶ್ ಕೂಡ ಇನ್ನೂ ನೋಡಿಲ್ಲವಂತೆ.ಇದ್ಯಾಕಪ್ಪ ಅಂದ್ರೆ ಯಶ್ ಮಗಳನ್ನು ಅಂಬಿ ಕೊಟ್ಟಿದ್ದ ತೊಟ್ಟಿಲಲ್ಲಿ ಮಲಗಿಸುವ ಶಾಸ್ತ್ರಕ್ಕೆ ಸುಮಲತಾ ಅವರೆ ಬಂದು ಮಗಳನ್ನು ತೊಟ್ಟಿಲಲ್ಲಿ ಮಲಗಿಸ ಬೇಕು ಎಂಬ ಇಂಗಿತವನ್ನು ಯಶ್ ಸುಮಲತಾ ಬಳಿ ಹೇಳಿದ್ರಂತೆ.ಇನ್ನೂ ಈ ವಿಷ್ಯವನ್ನು ಸುಮಲತಾ ಅವರೇ ಹೇಳಿದ್ದಾರೆ. ಅದ್ರೆ ಇದುವರೆಗೂ ನಾನು ಯಶ್ ಮಗಳನ್ನು ನೋಡೋಕೆ‌ ಆಗಿಲ್ಲ.

Body:ಒಂದೋಳ್ಳೆ ದಿನ ಮಗಳನ್ನು ನನಗೆ ತೋರಿಸುವುದಾಗಿ ಯಶ್ ಹೇಳಿದ್ದಾರೆ.ಅಲ್ಲದೆ ಯಾವಾಗ ನಾನು ನನ್ನ ಮೊಮ್ಮಗಳನ್ನು ನೋಡುತ್ತೇನೆ ಎಂದು ಸುಮಲತಾ ಹೇಳಿದ್ರು.ಅಲ್ಲದೆ ತುಂಭಾ ದಿನಗಳು ತೆಗೆದುಕೊಂಡು ಯಶ್ ಮತ್ತು ರಾಧಿಕ ಮಗಳಿಗೆ "ಐರಾ" ಎಂಬ ಒಳ್ಳೆಯ ಹೆಸರನ್ನು ಇಟ್ಟಿದ್ದಾರೆ.ಯಶ್ ಹಾಗೂ ರಾಧಿಕ ಇಬ್ಬರ ಹೆಸರಿನ ಪದಗಳನ್ನಯ ಬಳಸಿ ಒಳ್ಳೆ ನೇಮ್ ಇಟ್ಟಿದ್ದಾರೆ ಎಂದು.ಮೊಮ್ಮಗಳ ಹೆಸರಿನ ಬಗ್ಗೆಯೂ ಮಂಡ್ಯ ಸಂಸದೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸತೀಶ ಎಂಬಿ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.